ಬೆಂಗಳೂರು : ಇಂದಿನ ಮಹಿಳೆಯರ ಕ್ಇಕೆಟ್ ಪ್ರೀಮಿಯರ್ ಲೀಗ್ (WPL)ನ ಇಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿವೆ.
ಟೀಂ ಇಂಡಿಯಾ ಮಹಿಳಾ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಹಾಗೂ ಉಪ ನಾಯಕಿ ಸ್ಮೃತಿ ಮಂಧಾನ ನಾಯಕತ್ವದ ತಂಡಗಳ ನಡುಗೆ ಮುಂಬೈ ಬ್ರಬೋರ್ನ್ ಕ್ರೀಡಾಂಗಣದಲ್ಲಿ ಸಂಜೆ 7.30ಕ್ಕೆ ಪಂದ್ಯ ಆರಂಭವಾಗಲಿದೆ.
ಈ ಪಂದ್ಯದಲ್ಲಿ ಆರ್‌ಸಿಬಿ, ಶುಭಾರಂಭ ಮಾಡುವ ತವಕದಲ್ಲಿದೆ. ಮೊದಲ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ 143 ರನ್ ಗೆಲುವು ಸಾಧಿಸಿರುವ ಹರ್ಮನ್‌ಪ್ರೀತ್ ಕೌರ್ ಬಳಗ ಮತ್ತೊಂದು ಗೆಲುವಿನ ವಿಶ್ವಾಸದಲ್ಲಿದೆ. ನಿನ್ನೆಯ ಪಂದ್ಯ ಸೋತಿರುವ ಆರ್‌ಸಿಬಿ, ಗೆಲುವಿನ ಒತ್ತಡದಲ್ಲಿದೆ.
ಆರ್‌ಸಿಬಿ ಸಿಕ್ಕಾಪಟ್ಟೆ ಟ್ರೋಲ್!
ಮಹಿಳಾ ಪ್ರೀಮಿಯರ್ ಲೀಗ್ (WPL)ನಲ್ಲಿ ಡೆಲ್ಲಿ ಕೈಯಲ್ಲಿ ಸೋಲುಂಡ ಬೆನ್ನಲ್ಲೇ ಆರ್ ಸಿಬಿ(RCB) ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ. ಪುರುಷ ತಂಡವಾದ್ರೆ ಏನು? ಮಹಿಳಾ ತಂಡವಾದರೆ ಏನು? ರನ್ ಹೊಡೆಸಿಕೊಳ್ಳುವ ಆರ್ ಸಿಬಿ(RCB) ಹಣೆಬರ ಮಾತ್ರ ಬದಲಾಗುವುದೇ ಇಲ್ಲ’ ಎಂದು ಅಪಹಾಸ್ಯ ಮಾಡಲಾಗಿದೆ.
ಇದನ್ನೂ ಓದಿ : ಭೇಷ್ : ಆಕೆಯ ಬ್ಯಾಟ್ ನಲ್ಲಿ ಧೋನಿ ಹೆಸರು, ಅದ್ಭುತ ಪ್ರದರ್ಶನ
ಮೀಮ್ ಜೊತೆಗೆ ಟ್ರೋಲ್
ಆರ್ ಸಿಬಿ(RCB) ಮೇಲಿದ್ದ ಭಾರಿ ನಿರೀಕ್ಷೆ ಹುಸಿಯಾಗಿದೆ ಎಂದು ಅಭಿಮಾನಿಯೊಬ್ಬ ಮೀಮ್ ಜೊತೆಗೆ ಟ್ರೋಲ್ ಮಾಡಿದ್ದನು. ಮುಂದಿನ ಪಂದ್ಯಗಳಲ್ಲಾದರೂ ಆರ್ ಸಿಬಿ(RCB) ತಂಡದ ಬೌಲಿಂಗ್ ಸುಧಾರಿಸುತ್ತದೆಯೇ ಕಾದು ನೋಡಬೇಕು ಎಂದು ಇನ್ನೊಬ್ಬರು ಅಸಮಾಧಾನ ಹೊರಹಾಕಿದ್ದರು. ಇಂದಿನ ಪಂದ್ಯದಲ್ಲಿ ಗೆಲವು ಸಾಧಿಸಿ ನೆಟ್ಟಿಗರಿಗೆ ತಿರುಗೇಟು ನೀಡುತ್ತಾ ಎಂದು ಕಾದುನೋಡಬೇಕಿದೆ.
ಆರ್ ಸಿಬಿ ಸಂಭವನೀಯ ತಂಡ
ಸ್ಮೃತಿ ಮಂದಾನ (ನಾಯಕಿ), ಸೋಫಿ ಡಿವೈನ್, ಎಲ್ಲಿಸ್ ಪೆರ್ರಿ, ರೇಣುಕಾ ಸಿಂಗ್, ರಿಚಾ ಘೋಷ್, ಇಂದ್ರಾಣಿ ರಾಯ್, ದಿಶಾ ಕಸತ್, ಶ್ರೇಯಾಂಕಾ ಪಾಟೀಲ್, ಕನಿಕಾ ಅಹುಜಾ, ಆಶಾ ಶೋಭನಾ, ಎರಿನ್ ಬರ್ನ್ಸ್, ಹೀದರ್ ನೈಟ್, ಡೇನ್ ವ್ಯಾನ್ ನಿಕೆರ್ಕ್, ಪ್ರೀತಿ ಬೋಸ್, ಪೂನಂ ಖೆಮ್ನಾರ್, ಕೋಮಲ್ ಝಂಝಾದ್, ಮೇಗನ್ ಶಟ್, ಸಹನಾ ಪವಾರ್