ಬೆಂಗಳೂರು : ವಿಧಾನಸಭಾ ಚುನಾವಣೆ ರಂಗೇರುತ್ತಿದ್ದು ಮಾಜಿ ಸಚಿವ ತಮ್ಮ ಕ್ಷೇತ್ರದಲ್ಲಿ ಫುಲ್ ಆಕ್ಟೀವ್ ಆಗಿದ್ದು, ಸರಿಯಾಗಿ ಕೆಲಸ ನಿರ್ವಹಿಸದ ಅಧಿಕಾರಿಯನ್ನು ತರಾಟೆ ತೆಗೆದುಕೊಂಡಿದ್ದಾರೆ.
ಹೌದು, ಕೆಟ್ಟು ಹೋಗಿದ್ದ ಟ್ರಾನ್ಸ್ ಫಾರ್ಮರ್ ಬದಲಿಸದ ಕೆಪಿಟಿಸಿಎಲ್ (KPTCL)ನ ಸಹಾಯಕ ಅಧಿಕಾರಿಯನ್ನು ಮಾಜಿ ಸಚಿವ ಎಚ್.ಡಿ.ರೇವಣ್ಣ ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿರುವ ಘಟನೆ ಹಾಸನ ತಾಲ್ಲೂಕಿನ ಮೆಳಗೋಡು ಗ್ರಾಮದಲ್ಲಿ ನಡೆದಿದೆ.
ಮೆಳಗೋಡು ಗ್ರಾಮದಲ್ಲಿ ಗ್ರಾಮಸ್ಥರಿಂದ ಅಹವಾಲು ಸ್ವೀಕಾರ ಮತ್ತು ಗ್ರಾಮಸಭೆಯಲ್ಲಿ ಅಧಿಕಾರಿ ಅರ್ಜುನ್ ವಿರುದ್ಧ ರೇವಣ್ಣ ಗರಂ ಆಗಿದ್ದಾರೆ. ಇನ್ನೂ ಎರಡು ತಿಂಗಳಲ್ಲಿ ನಿಮ್ಮ ಅಧಿಕಾರಿ ಸಿಗದೆ ಎಲ್ಲೂ ಹೋಗಲ್ಲ. ಹೇಗೆ ಬಲಿ ಹಾಕಬೇಕು ಎಂದು ನನಗೆ ಚೆನ್ನಾಗಿಯೇ ಗೊತ್ತಿದೆ ಎಂದ ಎಚ್ಚರಿಕೆ ನಿಡಿದ್ದಾರೆ.
ಇದನ್ನೂ ಓದಿ : ಜೆಡಿಎಸ್ ಪಂಚರತ್ನ ಯಾತ್ರೆ ವಾಹನದ ಮೇಲೆ ಕಲ್ಲು ತೂರಾಟ
10 ರೂ. ಮುಟ್ಟದೆ ಕೆಲಸ ಕೊಟ್ಟಿದೆ
ನಾನು ಹತ್ತು ರೂಪಾಯಿ ಮುಟ್ಟದೆ ಕೆಲಸ ಕೊಟ್ಟಿದ್ದೇನೆ. ಈಗ ಜನರ ಸೇವೆ ಮಾಡಿ ಎಂದರೆ ನಾಟಕ ಮಾಡುತ್ತಿದ್ದೀರಿ. ಹಳ್ಳಿಯವರಿಗೆ ಬೇಕಾಗಿರೋದು ಕುಡಿಯುವ ನೀರು, ಚರಂಡಿ ಮತ್ತು ವಿದ್ಯುತ್ ಮಾತ್ರ. ಇದನ್ನು ಬಿಟ್ಟು ಇನ್ನೇನು ಕೇಳ್ತಾರೆ ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ.
ಇದೇ ವೇಳೆ ಗ್ರಾಮಸ್ಥರಿಂದ ಅಹವಾಲು ಅರ್ಜಿಗಳನ್ನು ಸ್ವೀಕರಿಸಿದ ಮಾಜಿ ಸಚಿವ ಎಚ್.ಡಿ ರೇವಣ್ಣ ಸಮಸ್ಯೆಗಳನ್ನು ಬಗೆಹರಿಸುವ ಭರವಸೆ ನೀಡಿದ್ದಾರೆ.