Monday, December 23, 2024

ಅಯ್ಯೋ: ಚಿನ್ನ ಗಿರವಿಯಿಟ್ಟು ಕಾರ್ಯಕರ್ತರಿಗೆ ಹಣ ಕೊಟ್ಟ ಬಿಜೆಪಿ ಮುಖಂಡ

ಬೆಂಗಳೂರು : ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಫೀವರ್ ಜೋರಾಗುತ್ತಿದ್ದಂತೆ ಎಲ್ಲ ಪಕ್ಷಗಳ ಸಭೆ, ಸಮಾರಂಭಗಳು ಭರದಿಂದ ನಡೆಯುತ್ತಿವೆ. ಮೊನ್ನೆ ತಾನೆ 500 ಕೊಟ್ಟು ಸಮಾರಂಭಕ್ಕೆ ಜನರನ್ನು ಕರೆದುಕೊಂಡು ಬರಬೇಕು ಎಂದು ಸಿದ್ದರಾಮಯ್ಯ ಹೇಳಿದ್ದಾರೆ ಎನ್ನಲಾದ ವಿಡಿಯೋ ಹರಿದಾಡಿತ್ತು. ಇದೀಗ, ಸಮಾರಂಭಕ್ಕೆ ಬಂದ ಕಾರ್ಯಕರ್ತರಿಗೆ ಹಣ ಕೊಡಲು ಬಿಜೆಪಿ ಮುಖಂಡರು ಚಿನ್ನ ಗಿರವಿಯಿಟ್ಟು ಸುದ್ದಿಯಾಗಿದ್ದಾರೆ. ಅರಮನೆನಗರಿ ಮೈಸೂರಿನಲ್ಲಿ ಇಂಥದೊಂದು ಘಟನೆ ನಡೆದಿದೆ.

ಹೌದು, ವಿಜಯ ಸಂಕಲ್ಪ ಯಾತ್ರೆಗೆ ಬಂದ ಜನರಿಗೆ ಹಣ ಕೊಡದ ಹಿನ್ನೆಲೆ ಜನರು, ಬಿಜೆಪಿ ಬಾವುಟಕ್ಕೆ ಬೆಂಕಿ ಹಾಕಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಮೈಸೂರು ಜಿಲ್ಲೆಯ ಕೆ.ಆರ್ ನಗರದಲ್ಲಿ ನಡೆದಿದೆ.

ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ನೇತೃತ್ವದಲ್ಲಿ ಕೆ.ಆರ್ ನಗರದಲ್ಲಿ ವಿಜಯ ಸಂಕಲ್ಪ ಯಾತ್ರೆ ನಡೆದಿತ್ತು. ಯಾತ್ರೆಯಲ್ಲಿ ಮಾಜಿ ಸಿಎಂ ಸದಾನಂದ ಗೌಡ ಸೇರಿದಂತೆ ಕೆ.ಆರ್ ನಗರ ತಾಲೂಕಿನ ಬಿಜೆಪಿ ಟಿಕೆಟ್ ಆಕಾಂಕ್ಷಿಗಳು ರೋಡ್ ಶೋನಲ್ಲಿ ಭಾಗಿಯಾಗಿದ್ದರು. ಅಕ್ಕಪಕ್ಕದ ಗ್ರಾಮಗಳಿಂದ ನೂರಾರು ಬಿಜೆಪಿ ಕಾರ್ಯಕರ್ತರು ರೋಡ್ ಶೋನಲ್ಲಿ ಭಾಗವಹಿಸಿದ್ದರು. ಯಾತ್ರೆಗೆ ಬಂದ ಜನರಿಗೆ ಆಯೋಜಕರು ಹಣ ನೀಡಿರಲಿಲ್ಲ.

ಇದನ್ನೂ ಓದಿ : ಅವಿನಿಗೆ ಮುಂದೆ ‘ಪದ್ಮಭೂಷಣ’ ಕೊಡ್ತಾರೆ ನೋಡಿ

ಗಿರವಿಯಿಟ್ಟು ಕಾರ್ಯಕರ್ತರಿಗೆ ಹಣ

80 ಬೈಕ್‌ಗಳಿಗೆ ಪೆಟ್ರೋಲ್‌ಗೆ ದುಡ್ಡು ಕೊಡಲಿಲ್ಲ ಎಂದು ರೊಚ್ಚಿಗೆದ್ದ ಕಾರ್ಯಕರ್ತರು ಬಿಜೆಪಿ ಬಾವುಟಕ್ಕೆ ಬೆಂಕಿ ಹಚ್ಚಿ ದಸರಾ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಮಿರ್ಲೆ ಶ್ರೀನಿವಾಸ ಗೌಡರ ವಿರುದ್ಧ ಆಕ್ರೋಶ ಹೊರಹಾಕಿದರು. ಜನರ ಅಕ್ರೋಶಕ್ಕೆ ತತ್ತರಿಸಿ ಕೆ.ಆರ್ ನಗರದ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಪ್ರಕಾಶ್, ಚಿನ್ನ ಗಿರವಿಯಿಟ್ಟು ಕಾರ್ಯಕರ್ತರಿಗೆ ಹಣ ನೀಡಿದ್ದಾರೆ ಎಂದು ಸುದ್ದಿಯಾಗಿದೆ.

RELATED ARTICLES

Related Articles

TRENDING ARTICLES