Thursday, January 23, 2025

RCBಯಲ್ಲಿ ಸ್ಟಾರ್ ಆಟಗಾರರದ್ದೇ ದರ್ಬಾರ್

ಬೆಂಗಳೂರು : ಚೊಚ್ಚಲ ಆವೃತ್ತಿಯ ಬಹುನಿರೀಕ್ಷಿತ ಮಹಿಳಾ ಪ್ರಿಮಿಯರ್ ಲೀಗ್ ನಿನ್ನೆ ಅದ್ದೂರಿ ಕಾರ್ಯಕ್ರಮದೊಂದಿಗೆ ಶುರುವಾಗಿದೆ. ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್, ಗುಜರಾತ್ ಜೈಂಟ್ಸ್ ವಿರುದ್ಧ ಭರ್ಜರಿ ಜಯಗಳಿಸಿದೆ. ಇಂದು ಆರ್ ಸಿಬಿ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಚೊಚ್ಚಲ ಪಂದ್ಯವನ್ನು ಆಡಲಿದೆ.

ಹೌದು, ಮೊದಲ ಪಂದ್ಯದಲ್ಲೇ ಗೆಲುವಿನೊಂದಿಗೆ ಟೂರ್ನಿಯಲ್ಲಿ ಶುಭಾರಂಭ ಮಾಡಲು ಆರ್ ಸಿಬಿ ಹವಣಿಸುತ್ತಿದೆ. ಆರ್ ಸಿಬಿಯ ಸಂಭವನೀಯ ತಂಡ ಸ್ಟಾರ್ ಆಟಗಾರ್ತಿಯರಿಂದಲೇ ಕೂಡಿದೆ. ಹೀಗಾಗಿ, ಇಂದಿನ ಪಂದ್ಯದಲ್ಲಿ ಗೆಲುವು ನಮ್ಮದೇ ಎಂಬುದು ಆರ್ ಸಿಬಿ ಅಭಿಮಾನಿಗಳು ಲೆಕ್ಕಾಚಾರ.

ಸ್ಮೃತಿ ಮಂದಾನ ಆರ್ ಸಿಬಿ ತಂಡದ ನಾಯಕಿಯಾಗಿದ್ದು, ಇಂದಿನ ಪಂದ್ಯದಲ್ಲಿ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ನ್ಯೂಜಿಲೆಂಡ್ ತಂಡದ ನಾಯಕಿ ಸೋಫಿ ಡಿವೈನ್, ಸ್ಟಾರ್ ಆಲ್ ರೌಂಡರ್ ಎಲ್ಲಿಸ್ ಪೆರ್ರಿ, ಡೇನ್ ವ್ಯಾನ್, ನೀಕರ್ಕ್, ಹೀದರ್ ನೈಟ್, ದಿಶಾ ಕಸತ್, ರಿಚಾ ಘೋಷ್, ಕನಿಕಾ ಅಹುಜಾ, ಮೇಗನ್ ಶುಟ್, ಸಹನಾ ಪವಾರ್, ರೇಣುಕಾ ಠಾಕೂರ್, ಕೋಮಲ್ ಝಂಝಾದ್ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿದೆ.

ಇದನ್ನೂ ಓದಿ : ಅದ್ಭುತ : ಜಡೇಜಾ 500 ವಿಕೆಟ್.. 5,000 ರನ್

ಶುಭಾರಂಭದ ನಿರೀಕ್ಷೆಯಲ್ಲಿ ಮಂದಾನ ಬಳಗ

ಮೊದಲ ಆವೃತ್ತಿಯಲ್ಲಿ ಎರಡನೇ ದಿನದ ಪಂದ್ಯ ಇದಾಗಿದ್ದು, ಸ್ಫೋಟಕ ಬ್ಯಾಟರ್ ಗಳಾದ ಸ್ಮೃತಿ ಮಂದಾನ ಮತ್ತು  ಶೆಫli ವರ್ಮಾ ಅವರ ಮಿಂಚಿನ ಆಟಕ್ಕೆ ಈ ಪಂದ್ಯ ಸಾಕ್ಷಿಯಾಗುವ ಸಾಧ್ಯತೆ ಇದೆ. ಇವರು ಮಿಂಚಿದ್ದೇ ಆದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೊದಲ ಪಂದದಲ್ಲೇ ಶುಭಾರಂಭ ಮಾಡಲಿದೆ.

ಹೀಗಿದೆ ಆರ್ ಸಿಬಿ ತಂಡ:

ಸ್ಮೃತಿ ಮಂದಾನ (ನಾಯಕಿ), ಸೋಫಿ ಡಿವೈನ್, ಎಲ್ಲಿಸ್ ಪೆರ್ರಿ, ರೇಣುಕಾ ಸಿಂಗ್, ರಿಚಾ ಘೋಷ್, ಇಂದ್ರಾಣಿ ರಾಯ್, ದಿಶಾ ಕಸತ್, ಶ್ರೇಯಾಂಕಾ ಪಾಟೀಲ್, ಕನಿಕಾ ಅಹುಜಾ, ಆಶಾ ಶೋಭನಾ, ಎರಿನ್ ಬರ್ನ್ಸ್, ಹೀದರ್ ನೈಟ್, ಡೇನ್ ವ್ಯಾನ್ ನಿಕೆರ್ಕ್, ಪ್ರೀತಿ ಬೋಸ್, ಪೂನಂ ಖೆಮ್ನಾರ್, ಕೋಮಲ್ ಝಂಝಾದ್, ಮೇಗನ್ ಶಟ್, ಸಹನಾ ಪವಾರ್

 

RELATED ARTICLES

Related Articles

TRENDING ARTICLES