Monday, December 23, 2024

ಗುಡ್ ನ್ಯೂಸ್ : ವಾರದಲ್ಲೇ ಹೊಸ ವೈದ್ಯಕೀಯ ಕಾಲೇಜಿಗೆ ಅಡಿಗಲ್ಲು!

ಬೆಂಗಳೂರು: ಕೋಟೆನಾಡು ಚಿತ್ರದುರ್ಗ ಜನತೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗುಡ್ ನ್ಯೂಸ್ ಕೊಟ್ಟಿದ್ದಾರೆ. ಒಂದು ವಾರದಲ್ಲೇ ಚಿತ್ರದುರ್ಗ ವೈದ್ಯಕೀಯ ಕಾಲೇಜಿಗೆ ಅನುಮೋದನೆ ನೀಡಲಾಗುತ್ತದೆ ಎಂದು ಘೋಷಿಸಿದ್ದಾರೆ.

ಚಿತ್ರದುರ್ಗದ ಸರ್ಕಾರಿ ವಿಜ್ಞಾನ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ  ಕೇಂದ್ರ ಮತ್ತು ರಾಜ್ಯ ಸರ್ಕಾರದ ಫಲಾನುಭವಿಗಳ ಸಮ್ಮೇಳನ ಸಮಾರಂಭವನ್ನು ಉದ್ಘಾಟಿಸಿ ಸಿಎಂ ಬೊಮ್ಮಾಯಿ ಅವರು ಮಾತನಾಡಿದ್ದಾರೆ.

ಡಬಲ್ ಇಂಜಿನ್ ಸರ್ಕಾರದ ಪ್ರತಿಫಲವಾಗಿ  ಜನಪರ ಕಾರ್ಯಕ್ರಮಗಳನ್ನು ನೀಡಿದ್ದೇವೆ. ಚಿತ್ರದುರ್ಗದ ಬಹಳ ದಿನಗಳ ಬೇಡಿಕೆಯಾಗಿರುವ ವೈದ್ಯಕೀಯ ಕಾಲೇಜಿಗೆ ಎಲ್ಲಾ ಅನುಮೋದನೆಗಳನ್ನು ಒಂದು ವಾರದಲ್ಲಿ ನೀಡಿ, ಅಡಿಗಲ್ಲು ಹಾಕಲಾಗುವುದು ಎಂದು ಹೇಳಿದ್ದಾರೆ.

ಜಿಲ್ಲೆಯಲ್ಲಿ 18,357 ಜನರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಜನರಿಗೆ  ಮುಟ್ಟಿದೆ. ಕೃಷಿ ಇಲಾಖೆಯಲ್ಲಿ ರೈತ ಶಕ್ತಿ ಯೋಜನೆ 1.62 ಲಕ್ಷ ಜನರಿಗೆ , ವಿವಿಧ ಯೋಜನೆಗಳಡಿ  5.57 ಲಕ್ಷ ಜನರಿಗೆ ಅಕ್ಷರ ದಾಸೋಹದಲ್ಲಿ 1.7 ಲಕ್ಷ  ವಿದ್ಯಾರ್ಥಿಗಳಿಗೆ ಬಿಸಿಯೂಟ, ಪ್ರಧಾನಮಂತ್ರಿ ಸಿಂಚಯಿ ಯೋಜನೆ, ಮಾತೃವಂದನಾ, ಸಾಮಾಜಿಕ ಭದ್ರತಾ ಯೋಜನೆಗಳು 2.7 ಲಕ್ಷ ಜನರಿಗೆ ಮಾಶಾಸನ ದೊರೆಯುತ್ತಿದೆ. 2 ಲಕ್ಷ ಪರಿಶಿಷ್ಟ ಜನ ಫಲಾನುಭವಿಗಳಾಗಿದ್ದಾರೆ.

53 ಲಕ್ಷ ಜನರಿಗೆ 999 ಕೋಟಿ

ಕಿಸಾನ್ ಸಮ್ಮಾನ್ ಯೋಜನೆಯಡಿ ನಮ್ಮ ಪಾಲೂ ಇದ್ದು ಇನ್ನೆರಡು ಮೂರು ದಿನಗಳಲ್ಲಿ 999 ಕೋಟಿ ರೂ.ಗಳನ್ನು 53 ಲಕ್ಷ ಜನರಿಗೆ ನೇರವಾಗಿ ಖಾತೆಗೆ ತಲುಪಲಿದೆ. ಸ್ತ್ರೀ ಸಾಮರ್ಥ್ಯ ಮತ್ತು ಸ್ವಾಮಿ ವಿವೇಕಾನಂದ ಯುವ ಶಕ್ತಿ ಯೋಜನೆಯಡಿ 500 ಕೋಟಿ ರೂ.ಗಳನ್ನು ನೇರವಾಗಿ ಫಲಾನುಭವಿಗಳಿಗೆ ಮುಟ್ಟಲಿದೆ. 350 ಕೋಟಿ ರೂ.ಗಳು ಕುರಿಗಾಹಿಗಳಿಗೆ 8-9 ದಿನಗಳಲ್ಲಿ ಮುಟ್ಟಲಿದೆ.  ಈ ರೀತಿ ಜನಪರ ರಾಜಕಾರಣ ನಾವು ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

ದುಡಿಮೆಯಿಂದ ರಾಜ್ಯದ ಆದಾಯ

355 ಕೋಟಿ ರೂ.ಗಳ ವೆಚ್ಚದಲ್ಲಿ ಅಮೃತ ಕುರಿಗಾಹಿ ಯೋಜನೆಯನ್ನು ಜಾರಿಗೊಳಿಸಿದ್ದು, ಇದೇ ತಿಂಗಳು 20 ಸಾವಿರ ಸಂಘಗಳಿಗೆ ಅನುದಾನ ಬಿಡುಗಡೆ ಮಾಡಲಾಗುತ್ತಿದೆ. 4 ಲಕ್ಷ ಕುರಿಗಾಹಿಗಳಿಗೆ ಇದರ ಲಾಭವಾಗಲಿದೆ. ಇದು ಜನರ ಮೇಲೆ  ಮಾಡುತ್ತಿರುವ ಬಂಡವಾಳ ಹೂಡಿಕೆ.  ಮುಂದಿನ ದಿನಗಳಲ್ಲಿ  ಜನರ ದುಡಿಮೆಯಿಂದ ರಾಜ್ಯದ ಆದಾಯ ಹೆಚ್ಚಾಗಲಿದೆ ಎಂದು ಸಿಎಂ ಹೇಳಿದ್ದಾರೆ.

ಸಬ್ ಕಾ ಸಾಥ್, ಸಬ್ ಕಾ ವಿಕಾಸ್

ಗಂಗಾಕಲ್ಯಾಣ ಯೋಜನೆಯಡಿ ನೇರವಾಗಿ ಡಿಬಿಟಿ ವ್ಯವಸ್ಥೆಯ ಮೂಲಕ ಬಿಡುಗಡೆ ಮಾಡಲಾಗುತ್ತಿದೆ. 30 ಸಾವಿರ ಜನ ಬಿಸಿ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಗಳಲ್ಲಿ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಗಿದೆ. ಎಲ್ಲಾ ವರ್ಗದ ಶ್ರೇಯೋಭಿವೃದ್ಧಿಗೆ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಅನ್ವಯ ಸರ್ವರಿಗೂ ಸಮಬಾಳು ನೀಡುವ ಸಂಕಲ್ಪ ಮಾಡಿದೆ ಎಂದು ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES