Sunday, November 24, 2024

ಅವ್ರಿಗೆ 36 ಹೆಂಡತಿಯರು, 316 ಮಕ್ಕಳು ಇದ್ದಿದ್ರೆ..! : ಸಿ.ಟಿ ರವಿ ವ್ಯಂಗ್ಯ

ಬೆಂಗಳೂರು : ಜೆಡಿಎಸ್ ಪಕ್ಷ ಹಾಗೂ ಹಾಸನ ಜೆಡಿಎಸ್ ಟಿಕೆಟ್ ಗೊಂದಲದ ಬಗ್ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ ರವಿ ಲೇವಡಿ ಮಾಡಿದ್ದಾರೆ.

ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಜೆಡಿಎಸ್ ಪಕ್ಷದಲ್ಲಿ ಒಂದೇ ಒಂದು ತಪ್ಪಾಗಿರುವುದು. ಅವರಲ್ಲಿ ರಾಜ್ಯದ 244 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುವುದಕ್ಕೆ ಅವರ ಕುಟುಂಬದಲ್ಲಿ ಸದಸ್ಯರಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಜೆಡಿಎಸ್ ಪಕ್ಷಕ್ಕೆ ಪ್ರಜಾಪ್ರಭುತ್ವದ ಅರ್ಥವೇ ಬೇರೆ. ಜೆಡಿಎಸ್ನ ಪ್ರಜಾಪ್ರಭುತ್ವ ಇರುವುದು ಕುಟುಂಬದಿಂದ, ಕುಟುಂಬಕ್ಕಾಗಿ, ಕುಟುಂಬಕೋಸ್ಕರ ಎಂದು ಮಾತ್ರ. ಆ ಕುಟುಂಬದಲ್ಲಿ 224 ಜನ ಇದ್ದಿದ್ದರೆ ಅಭ್ಯರ್ಥಿಗಳಿಗಾಗಿ ಹುಡುಕುವ ಅವಶ್ಯಕತೆ ಇರುತ್ತಿರಲಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ : ನಾನಿಲ್ಲದಿದ್ರೆ ಜಮೀರ್ ರೈಟ್.. ರೈಟ್.. ಅಂತ ಹೇಳ್ಕೊಂಡು ಇರಬೇಕಿತ್ತು : ಎಚ್ಡಿಕೆ ವಾಗ್ದಾಳಿ

ಹಾಸನದಲ್ಲಿ ಜಗಳ ನಡೆಯುತ್ತಿದೆ. ಇದು ದೇಶಕ್ಕಾಗಿ ಅಲ್ಲ. ಹಾಸನದ ಜನರಿಗಾಗಿ ಅಲ್ಲ. ಬದಲಾಗಿ ಅವರ ಕುಟುಂಬಕ್ಕಾಗಿ ಮಾತ್ರ. ಟಿಕೆಟ್ ಗಾಗಿ ಅವರ ಕುಟುಂಬದಲ್ಲೇ ಗೊಂದಲ ಸರಷ್ಟಿಯಾಗಿರುವುದು ಇದಕ್ಕೆ ಸಾಕ್ಷಿ ಎಂದು ಸಿ.ಟಿ ರವಿ ಕುಟುಕಿದ್ದಾರೆ.

36 ಹೆಂಡತಿ, 316 ಮಕ್ಕಳು ಇದ್ದಿದ್ರೆ..!

ಯಾರೋ ಒಬ್ಬರಿಗೆ 36 ಹೆಂಡತಿಯರು, 316 ಜನ ಮಕ್ಕಳು ಇದ್ದಾರೆ ಎಂದು ಎಲ್ಲಿಯೋ ನಾನು ಕೇಳಿದ್ದೆ. ಹಾಗೇನಾದರೂ ಆಗಿಬಿಟ್ಟಿದ್ದರೆ 224 ಕ್ಷೇತ್ರಕ್ಕೆ ಅಭ್ಯರ್ಥಿ ಹುಡುಕುವ ಪ್ರಮೇಯ ಇರುತ್ತಿರಲಿಲ್ಲ ಎಂದು ಲೇವಡಿ ಮಾಡಿದ್ದಾರೆ.

RELATED ARTICLES

Related Articles

TRENDING ARTICLES