Wednesday, January 22, 2025

ಈ ಆಸಾಮಿ ದೇವೇಗೌಡ್ರ ‘ಮಾನಸ ಪುತ್ರ’ ಅಂತಾ ಓಡಾಡಿದ್ರು : ಎಚ್ಡಿಕೆ ಕಿಡಿ

ಬೆಂಗಳೂರು : ಜೆಡಿಎಸ್ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷವನ್ನು ಸೇರಿಕೊಂಡ ಮಾಜಿ ಶಾಸಕ ವೈ.ಎಸ್.ವಿ ದತ್ತಾ ಅವರ ವಿರುದ್ಧ ಮಾಜಿ ಮುಖ್ಯಮತ್ರಿ ಎಚ್.ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿರುವ ಅವರು, ಜೆಡಿಎಸ್ ಪಕ್ಷವು ಧರ್ಮೇಗೌಡರ ಬದಲಾಗಿ ವೈ.ಎಸ್.ವಿ ದತ್ತಾ ಅವರಿಗೆ ಕಡೂರು ಟಿಕೆಟ್ ಕೊಟ್ಟಿತು. ಪಕ್ಷಕ್ಕಾಗಿ ದುಡಿದ ನಾಯಕನಿಗೆ ಅನ್ಯಾಯ ಮಾಡಿ ಕೈಕೊಟ್ಟು ಹೋದ ವ್ಯಕ್ತಿಗೆ ಟಿಕೆಟ್ ಕೊಟ್ಟೆವು. ಆದರೆ, ಉಪಕಾರ ಸ್ಮರಣೆ ಮರೆತ ಆ ವ್ಯಕ್ತಿ ಕಾಂಗ್ರೆಸ್ ಸೇರಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಈ ಆಸಾಮಿ ನನಗೆ ನೆರವಾಗಿದ್ದು ನೆನಪಿಲ್ಲ

ದತ್ತಾ ಅವರು ನಮ್ಮಿಂದ ಎಲ್ಲಾ ಉಪಕಾರ ಪಡೆದರು. ದೇವೇಗೌಡರ ಮಾನಸ ಪುತ್ರ ಎಂದು ಹೇಳಿಕೊಂಡು ಓಡಾಡಿದರು. ಆ ವ್ಯಕ್ತಿಗೆ ಟಿಕೆಟ್ ಕೊಟ್ಟ ದೇವೇಗೌಡರು, ನಿನಗೆ ವಿಧಾನಸಭೆಯಲ್ಲಿ ನೆರವಾಗುತ್ತಾರೆ ಎಂದು ನನಗೆ ಹೇಳಿದ್ದರು. ಆದರೆ, ಈ ಆಸಾಮಿ ನನಗೆ ಯಾವಾಗ ನೆರವಾಗಿದ್ದರೋ ನನಗಂತೂ ನೆನಪಿಲ್ಲ ಎಂದು ಟಾಂಗ್ ಕೊಟ್ಟಿದ್ದಾರೆ.

ಇದನ್ನೂ ಓದಿ: ಸ್ವಾಭಿಮಾನಿ ಸುಮಲತಾ ‘ಕೈ’ಯಲ್ಲಿ ಕೇಸರಿ ಶಾಲು

ದೇವೇಗೌಡರನ್ನೇ ಮರಳು ಮಾಡಿದ್ರು

ಈ ಆಸಾಮಿ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರನ್ನೇ ಮರಳು ಮಾಡಿ ಕಡೂರು ಟಿಕೆಟ್ ಪಡೆದುಕೊಂಡರು. ಆದರೆ, ಟಿಕೆಟ್ ನಿರಾಕರಿಸಲ್ಪಟ್ಟ ಧರ್ಮೇಗೌಡರು ಹಾಗೂ ಭೋಜೇಗೌಡರು ಪಕ್ಷಕ್ಕೆ ನಿಷ್ಠರಾಗಿ ಒಟ್ಟಿಗೆ ಗೆದ್ದು ವಿಧಾನ ಪರಿಷತ್ ಗೆ ಬಂದರು. ದೇವರು ಅವರನ್ನು ಕೈ ಬಿಡಲಿಲ್ಲ. ಆದರೆ, ಈ ವ್ಯಕ್ತಿ ದೇವೇಗೌಡರಿಂದ ಎಲ್ಲಾ ಅನುಕೂಲ ಪಡೆದುಕೊಂಡು ಪಕ್ಷಕ್ಕೆ ದ್ರೋಹ ಬಗೆದು ಹೋದರು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ನಾಯಕರು ಗ್ಯಾರಂಟಿ ಕಾರ್ಡ್ ಕೊಟ್ಟಿದ್ದಾರೆ. ಗ್ಯಾಸ್ ಗೆ 500, ಜಿಎಸ್ ಟಿ ತೆರಿಗೆಗೆ 500, ಬೆಲೆ ಏರಿಕೆಗೆ 500 ಅಂತೆ. ಇವರಿಂದ ಸರ್ಕಾರದ ಆಸ್ತಿ ಬೆಲೆಯಲ್ಲ. ಆದರೆ, ನನ್ನ ಕಾರ್ಯಕ್ರಮಗಳು ಸರ್ಕಾರದ ಆಸ್ತಿ ಆಗುತ್ತವೆ. ಅವು ಶಾಶ್ವತ ಕಾರ್ಯಕ್ರಮಗಳು. ಕೇವಲ ಮತಕ್ಕಾಗಿ ಇದನ್ನು ಮಾಡುತ್ತಿಲ್ಲ. ಬಡವರನ್ನು ನೋಡಿ ಈ ಕಾರ್ಯಕ್ರಮ ತಂದಿದ್ದೇನೆ ಎಂದು ಹೇಳಿದ್ದಾರೆ.

RELATED ARTICLES

Related Articles

TRENDING ARTICLES