ಬೆಂಗಳೂರು : ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷ ಅವರ ಮಗನ ಮೇಲೆ ಲೋಕಾಯುಕ್ತ ದಾಳಿ ಘಟನೆ ಸಂಬಂಧ ಶಾಸಕ ಸಿ.ಟಿ ರವಿ ಪ್ರತಿಕ್ರಿಯಿಸಿದ್ದು, ಕಾಂಗ್ರೆಸ್ ನಾಯಕರ ಹೇಳಿಕೆಗೆ ಟಾಂಗ್ ಕೊಟ್ಟಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಾತನಾಡಿರುವ ಅವರು, ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇದ್ದಿದ್ರೆ ಭ್ರಷ್ಟಾಚಾರಿಗಳ ಮನೆಗಳ ಮೇಲೆ ದಾಳಿ ಆಗುತ್ತಿರಲಿಲ್ಲ. ಪ್ರಕರಣವೂ ದಾಖಲಾಗುತ್ತಿರಲಿಲ್ಲ. ಭ್ರಷ್ಟರ ರಕ್ಷಣೆಯ ಕೆಲಸ ಆಗುತ್ತಿತ್ತು ಎಂದು ಕುಟುಕಿದ್ದಾರೆ.
ಭ್ರಷ್ಟರ ಪಾಲಿಗೆ ಬಿಜೆಪಿ ಸಿಂಹಸ್ವಪ್ನ
ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಮಗನನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಬಿಜೆಪಿ ಸರ್ಕಾರ ಭ್ರಷ್ಟರ ಪಾಲಿಗೆ ಸಿಂಹಸ್ವಪ್ನವಾಗಿದೆ ಎಂಬುದನ್ನು ಸಾಬೀತು ಮಾಡಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಬದಲು ಕಾಂಗ್ರೆಸ್ ಸರ್ಕಾರದ ಇದಿದ್ದರೆ ರೈಡ್ ಆಗುತ್ತಿರಲಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬಿಜೆಪಿ ಸ್ಪೀಡ್ ಗೆ ನಾನು ಬ್ರೇಕ್ ಹಾಕುತ್ತಿದ್ದೇನೆಯೇ ಹೊರತು ಕಾಂಗ್ರೆಸ್ ಅಲ್ಲ : ಎಚ್.ಡಿ ಕುಮಾರಸ್ವಾ
ಕಳ್ಳರು ಯಾರೇ ಆಗಿದ್ರು ಬಚಾವ್ ಆಗಲ್ಲ
ಲಂಚಪಡೆಯುವ ಕಳ್ಳರು ಯಾರೇ ಆಗಿದ್ದರೂ ಅವರನ್ನು ಬಿಜೆಪಿ ಸರ್ಕಾರ ಬಚಾವ್ ಮಾಡುವ ಪ್ರಶ್ನೆಯೇ ಇಲ್ಲ. ಇದಕ್ಕೆ ಈ ಲೋಕಾಯುಕ್ತ ದಾಳಿಯೇ ಉತ್ತಮ ನಿದರ್ಶನ. ಅದೇ ಕಾರಣಕ್ಕೆ ರೈಡ್ ಆಗಿರೋದು ಎಂದು ಸಿ.ಟಿ ರವಿ ವಿಶ್ಲೇಷಣೆ ಮಾಡಿದ್ದಾರೆ.
ಮಕ್ಕಳ ಹಾಸಿಗೆ-ದಿಂಬಿನಲ್ಲಿ ಲಂಚ
ಕಾಂಗ್ರೆಸ್ ಸರ್ಕಾರ ಎಸಿಬಿ ರಚನೆ ಮಾಡಿ 54 ಪ್ರಕರಣಗಳಿಗೆ ಕ್ಲೀನ್‍ಚಿಟ್ ನೀಡಿದರು. ಮಕ್ಕಳ ಹಾಸಿಗೆ-ದಿಂಬಿನಲ್ಲಿ ಹಣ ಹೊಡೆದುಕೊಂಡು ತಿಂದವರಿಗೆ ಕ್ಲೀನ್‍ಚಿಟ್ ನೀಡಿದರು. ಮರಳು ದಂಧೆ ಮಾಡಿದವರಿಗೂ ಕ್ಲೀನ್‍ಚಿಟ್ ನೀಡಿದರು ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.