Monday, December 23, 2024

WPL 2023 : ಚೊಚ್ಚಲ ಮಹಿಳಾ ಪ್ರಿಮಿಯರ್ ಲೀಗ್ ಗೆ ಕೌಂಟ್ ಡೌನ್ ; ಆರಂಭದಲ್ಲೇ ಭಾರೀ ವಿವಾದ

ಬೆಂಗಳೂರು : ಚೊಚ್ಚಲ ಆವೃತ್ತಿಯ ಬಹುನಿರೀಕ್ಷಿತ ಮಹಿಳಾ ಪ್ರಿಮಿಯರ್ ಲೀಗ್ ಗೆ ಕ್ಷಣಗಣನೆ ಶುರುವಾಗಿದೆ. ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಗುಜರಾತ್ ಜೈಂಟ್ಸ್ ತಂಡಗಳು ಸೆಣಸಲಿವೆ.

ಇನ್ನೇನು ಮೊದಲ ಪಂದ್ಯಕ್ಕೆ ಕ್ರಿಕೆಟ್ ಪ್ರೇಮಿಗಳು ಕಾತುರರಾಗಿದ್ದು, ಮೊದಲ ಪಂದ್ಯ ಆರಂಭವಾಗುವ ಸಮಯವನ್ನು ಬದಲಾಯಿಸಲಾಗಿದೆ. ಮೊದಲ ಪಂದ್ಯ ಅರ್ಧಗಂಟೆ ತಡವಾಗಿ ಆರಂಭವಾಗಲಿದೆ.

ವೇಳಾಪಟ್ಟಿಯ ಪ್ರಕಾರ, ಪಂದ್ಯ 7.30ಕ್ಕೆ ಆರಂಭವಾಗಬೇಕಿತ್ತು. ಆದರೆ, 7.30 ಬದಲಿಗೆ ಅರ್ಧಗಂಟೆ ತಡವಾಗಿ ಪಂದ್ಯ ಶುರುವಾಗಲಿದೆ. ಹಿಗಾಗಿ, ಮೊದಲ ಪಂದ್ಯ ರಾತ್ರಿ 8 ಗಂಟೆಗೆ ಪ್ರಾರಂಭವಾಗಲಿದೆ. 7.30ಕ್ಕೆ ಟಾಸ್ ಪ್ರಕ್ರಿಯೆ ನಡೆಯಲಿದೆ.

ಬಾಲಿವುಡ್ ಸೂಪರ್ ಸ್ಟಾರ್ ಭಾಗಿ

ಪಂದ್ಯ ಆರಂಭಕ್ಕೂ ಮುನ್ನ ಅದ್ಧೂರಿ ಮನರಂಜನಾ ಕಾರ್ಯಕ್ರಮಗಳು ನಡೆಯಲಿದೆ. ಬಾಲಿವುಡ್ ಸ್ಟಾರ್ ಗಳಾದ ಕಿಯಾರಾ ಅಡ್ವಾಣಿ, ಕೃತಿ ಸನೋನ್ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ, ಅಭಿಮಾನಿಗಳನ್ನು ರಂಜಿಸಲಿದ್ದಾರೆ.

ಇದನ್ನೂ ಓದಿ : WPL 2023 : ಹೊಸ ಜೆರ್ಸಿ ಅನಾವರಣಗೊಳಿಸಿದ RCB

ವಿಂಡೀಸ್ ಆಟಗಾರ್ತಿ ಟೌನ್

ಮಹಿಳಾ ಐಪಿಎಲ್ ಆರಂಭಕ್ಕೆ ಕೆಲವೇ ಕ್ಷಣಗಳು ಇರುವಾಗ ಗುಜರಾತ್ ಜೈಂಟ್ಸ್ ತಂಡಕ್ಕೆ ಆಘಾತ ಎದುರಾಗಿದೆ. ಆರೋಗ್ಯ ಸಮಸ್ಯೆ ಹಿನ್ನೆಲೆಯಲ್ಲಿ ವಿಂಡೀಸ್ ಸ್ಟಾರ್ ಆಟಗಾರ್ತಿ ದಿಯಾಂಡ್ರಾ ಡಾಟಿನ್ ಟೂರ್ನಿಯಂದ ಔಟ್ ಆಗಿದ್ದಾರೆ ಎಂದು ಖುದ್ದು ಗುಜರಾತ್ ಜೈಂಟ್ಸ್ ತಿಳಿಸಿದೆ. ಇವರ ಬದಲಿಗೆ ಆಸೀಸ್ ನಕಿಮ್ ಗಾರ್ಥ್ ಗೆ ಸ್ಥಾನ ನೀಡಿದೆ.

ಟೂರ್ನಿಗೂ ಮೊದಲೇ ಭಾರೀ ವಿವಾದ

ಈ ಸುದ್ದಿ ಕೇಳಿ ವಿಂಡೀಸ್ ಸ್ಟಾರ್ ಆಟಗಾರ್ತಿ ದಿಯಾಂಡ್ರಾ ಡಾಟಿನ್ ಶಾಕ್ ಆಗಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ನಾನು ಆರೋಗ್ಯವಾಗಿದ್ದು ಯಾವುದೇ ಸಮಸ್ಯೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ವಿಚಾರ ವಿವಾದದ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆಯಿದೆ.

RELATED ARTICLES

Related Articles

TRENDING ARTICLES