Friday, May 3, 2024

ಫೋನ್ನಲ್ಲಿ ಮಾತನಾಡುವಾಗ ನನಗೆ ಬೆದರಿಕೆ ಬಂದಿತ್ತು : ರಾಹುಲ್ ಗಾಂಧಿ ಸ್ಫೋಟಕ ಹೇಳಿಕೆ

ಬೆಂಗಳೂರು : ಬ್ರಿಟನ್​ ಪ್ರವಾಸದಲ್ಲಿರುವ ಎಐಸಿಸಿ ಮಾಜಿ ಅಧ್ಯಕ್ಷ ಹಾಗೂ ಸಂಸದ ರಾಹುಲ್ ಗಾಂಧಿ ಅವರು ಕೇಂಬ್ರಿಡ್ಜ್ ಯೂನಿವರ್ಸಿಟಿಯಲ್ಲಿನ ಉಪನ್ಯಾಸದ ವೇಳೆ ಸ್ಫೋಟಕ ಮಾಹಿತಿ ಹಂಚಿಕೊಂಡಿದ್ದಾರೆ.

ವಿಪಕ್ಷ ನಾಯಕರ ಮೇಲೆ ಸರ್ಕಾರ ಗೂಢಚಾರಿಕೆ ಮಾಡಲು ಪೆಗಾಸಸ್ ಬಳಸುತ್ತಿದೆ. ನನ್ನ ಫೋನ್​ನಲ್ಲೇ ಪೆಗಾಸಸ್ ಹಾಕಲಾಗಿತ್ತು. ಬಹಳಷ್ಟು ರಾಜಕಾರಣಿಗಳ ಮೊಬೈಲ್​ಗಳಲ್ಲಿ ಪೆಗಾಸಸ್ ಇತ್ತು. ಫೋನ್​ನಲ್ಲಿ ಮಾತನಾಡುವಾಗ ಹುಷಾರಾಗಿರಬೇಕೆಂದು ನನಗೆ ಹೇಳಲಾಗಿತ್ತು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಪ್ರಜಾಪ್ರಭುತ್ವದ ಮೇಲಿನ ಆಕ್ರಮಣ

ಕೇಂಬ್ರಿಡ್ಜ್​ ಯೂನಿವರ್ಸಿಟಿಯಲ್ಲಿ ವಿಸಿಟಿಂಗ್ ಫೆಲೋ ಆಗಿದ್ದ ರಾಹುಲ್ ಗಾಂಧಿ ಮತ್ತೆ ಪೆಗಾಸಸ್ ಕೆದಕಿದ್ದಾರೆ. ಭಾರತೀಯ ಪ್ರಜಾತಂತ್ರ ವ್ಯವಸ್ಥೆ ಆಕ್ರಮಣಕ್ಕೊಳಗಾಗಿದೆ. ಡೆಮಾಕ್ರಸಿ ಮೇಲಿನ ಆಕ್ರಮಣವನ್ನು ಎದುರಿಸಲು ನಾವು ಯತ್ನಿಸುತ್ತಿದ್ದೇವೆ. ವಿಪಕ್ಷ ನಾಯಕರ ಮೇಲೆ ಸರ್ಕಾರ ಗೂಢಚಾರಿಕೆ ಮಾಡಲು ಪೆಗಾಸಸ್ ಬಳಸುತ್ತಿದೆ ಎಂದು ರಾಹುಲ್ ಗಾಂಧಿ ಕಿಡಿ ಕಾರಿದ್ದಾರೆ.

ಇದನ್ನೂ ಓದಿ : ಭ್ರಷ್ಟಾಚಾರದಲ್ಲಿ ಬಿಜೆಪಿ ಮಹಾಭಾರತದ ‘ಬಕಾಸುರ’ : ಖರ್ಗೆ ವ್ಯಂಗ್ಯ

ಅಲ್ಲದೆ, ಭಾರತ ದೇಶ ಅಪಾಯದಲ್ಲಿದೆ ಎಂದು ರಾಹುಲ್ ಗಾಂಧಿ ಮತ್ತೆ ಧ್ವನಿ ಎತ್ತಿದ್ದಾರೆ. ಪೆಗಾಸಸ್ ಸ್ಪೈವೇರ್ ಘಟನೆಯನ್ನು ಮತ್ತೆ ಪ್ರಸ್ತಾಪಿಸಿ ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಗೆ ಬೇಕಾದ ಸಾಂಸ್ಥಿಕ ಚೌಕಟ್ಟು ದುರ್ಬಲಗೊಳ್ಳುತ್ತಿದೆ. ಭಾರತೀಯ ಪ್ರಜಾತಂತ್ರ ವ್ಯವಸ್ಥೆಯ ಮೂಲ ಸ್ವರೂಪವೇ ಆಕ್ರಮಕ್ಕೊಳಗಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

RELATED ARTICLES

Related Articles

TRENDING ARTICLES