Wednesday, January 22, 2025

Kabzaa Movie : ನಾಳೆ ಉಪ್ಪಿ-ಕಿಚ್ಚ ಜುಗಲ್ ಬಂದಿಯ ಕಬ್ಜ ಟ್ರೇಲರ್

ಬೆಂಗಳೂರು : ರಿಯಲ್‌ ಸ್ಟಾರ್‌ ಉಪೇಂದ್ರ ಹಾಗೂ ಕಿಚ್ಚ ಸುದೀಪ್ ಜುಗಲ್ ಬಂದಿಯ ಪ್ಯಾನ್‌ ಇಂಡಿಯಾ ಸಿನಿಮಾ ಕಬ್ಜ ಟ್ರೇಲರ್ ನಾಳೆ (ಮಾರ್ಚ್ 4) ರಿಲೀಸ್ ಆಗಲಿದೆ.

ಕಬ್ಜ ಸಿನಿಮಾದ ಟೀಸರ್‌ ಈಗಾಗಲೇ ಸಿನಿ ಪ್ರಿಯರ ಗಮನ ಸೆಳೆದಿದೆ. ಅದೇ ರೀತಿ ಇತ್ತೀಚೆಗೆ ಮೂರನೇ ಹಾಡನ್ನು ಅದ್ಧೂರಿಯಾಗಿ ಆಡಿಯೊ ಲಾಂಚ್ ಮಾಡಲಾಗಿದೆ. ಇದೀಗ ಕಬ್ಜ ಸಿನಿಮಾ ಹೊಸ ಟ್ರೇಲರ್ ರಿಲೀಸ್ ಆಗುತ್ತಿದೆ.

ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಈ ಬಹುನಿರೀಕ್ಷಿತ ಕಬ್ಜ ಟ್ರೇಲರ್ ಬಿಡುಗಡೆಯಾಗಲಿದೆ. ಆ ಕಾಲದ ಕಥೆಯನ್ನು ಕಟ್ಟಿಕೊಂಡೇ ತೆರೆಗೆ ಬರುತ್ತಿರುವ ಕಬ್ಜ ಸಿನಿಮಾವನ್ನು ನಿರ್ದೇಶಕ ಆರ್. ಚಂದ್ರು ಕಥೆ ಬರೆದು ನಿರ್ದೇಶನ ಮಾಡಿದ್ದಾರೆ.

ಕಬ್ಜ ಸಿನಿಮಾದಲ್ಲಿ ಉಪೇಂದ್ರ ಅವರ ಜೊತೆಯಲ್ಲಿ ಕಿಚ್ಚ ಸುದೀಪ್‌ ಅವರೂ ಬಣ್ಣ ಹಚ್ಚಿದ್ದಾರೆ. ಐಎಂಡಿಬಿ ಬಿಡುಗಡೆ ಮಾಡಿರುವ 2023ರ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ಇರುವ ಕನ್ನಡದ ಏಕೈಕ ಸಿನಿಮಾ ಇದಾಗಿದೆ. ಶ್ರೀಸಿದ್ಧೇಶ್ವರ ಎಂಟರ್‌ಪ್ರೈಸಸ್ ನಿರ್ಮಿಸಿರುವ ಕಬ್ಜ ಚಿತ್ರದ ಚಿತ್ರೀಕರಣ ಈಗಾಗಲೇ ಮುಗಿದಿದೆ.

ಅದ್ಧೂರಿ ತಾರಾ ಬಳಗ

ಕಬ್ಜ ಸಿನಿಮಾದಲ್ಲಿ ಉಪೇಂದ್ರಗೆ ನಾಯಕಿಯಾಗಿ ಶ್ರೀಯಾ ಶರಣ್ ಕಾಣಿಸಿಕೊಂಡಿದ್ದಾರೆ. ನವಾಬ್ ಷಾ, ಕಬೀರ್ ಸಿಂಗ್ ದುಹಾನ್, ಪ್ರಮೋದ್ ಶೆಟ್ಟಿ, ಮುರಳಿ ಶರ್ಮ ಮುಂತಾದ ಕಲಾವಿದರು ಚಿತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಅದ್ಧೂರಿ ತಾರಾ ಬಳಕ ಚಿತ್ರದಲ್ಲಿರುವುದು ಮತ್ತೊಂದು ವಿಶೇಷ.

ರವಿ ಬಸ್ರೂರು ಸಂಗೀತ

ಕಬ್ಜ ಸಿನಿಮಾದ ಮತ್ತೊಂದು ಹೈಲೆಟ್ ಎಂದರೆ ಅದು ಸಂಗೀತ ಸಂಯೋಜನೆ. ಕೆಜಿಎಫ್ ಖ್ಯಾತಿಯ ಸಂಗೀತ ನಿರ್ದೇಶಕ ರವಿ ಬಸ್ರೂರು ಸಂಗೀತ ಸಂಯೋಜಿಸಿದ್ದಾರೆ. ಎಜೆ ಶೆಟ್ಟಿ ಅವರು ಛಾಯಾಗ್ರಹಣ ಕೆಲಸ ಮಾಡಿದ್ದರೆ, ಕೆಜಿಎಫ್ ಖ್ಯಾತಿಯ ಶಿವಕುಮಾರ್ ಕಲಾ ನಿರ್ದೇಶನ ಮಾಡಿದ್ದಾರೆ.

RELATED ARTICLES

Related Articles

TRENDING ARTICLES