Sunday, December 22, 2024

ಸಮಾರಂಭಕ್ಕೆ 500 ಅಂದ್ರೆ, ಮತ ಪಡೆಯಲು ಎಷ್ಟು ಕೊಡ್ತಾರೆ : ಆರ್. ಅಶೋಕ್ ಪ್ರಶ್ನೆ

ಬೆಂಗಳೂರು : ಪ್ರಜಾಧ್ವನಿ ಯಾತ್ರೆಗೆ ಪ್ರತಿಯೊಬ್ಬರಿಗೂ 500 ರೂ. ಕೊಟ್ಟು ಕರೆದುಕೊಂಡು ಬರಬೇಕು ಎಂದು ಸಿದ್ದರಾಮಯ್ಯ ಹೇಳಿದ್ದಾರೆ ಎನ್ನಲಾದ ವಿಷಯಕ್ಕೆ ಕಂದಾಯ ಸಚಿವ ಆರ್. ಅಶೋಕ್ ಪ್ರತಿಕ್ರಿಯೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿರುವ ಅವರು, ಸಮಾರಂಭಕ್ಕೆ ಕರೆತರಲು ಜನರಿಗೆ 500 ರೂ. ಕೊಡಿ ಅಂದ್ರೆ, ಇನ್ನೂ ಮತ ಪಡೆಯಲು ಎಷ್ಟು ಹಣ ಕೊಡುತ್ತಾರೆ ಎಂದು ಆರ್. ಅಶೋಕ್ ಪ್ರಶ್ನೆ ಮಾಡಿದ್ದಾರೆ.

ಸಿದ್ದರಾಮಯ್ಯ ಇಡೀ ದೇಶದಲ್ಲಿ ಕಾಂಗ್ರೆಸ್ ಪಕ್ಷ ತಲೆತಗ್ಗಿಸುವಂತಹ ಹೇಳಿಕೆಯನ್ನು ಕೊಟ್ಟಿದ್ದಾರೆ. 75 ವರ್ಷಗಳ ಕಾಲ 65 ವರ್ಷ ಸರ್ಕಾರ ಹೇಗೆ ನಡೆಸಿದ್ರು ಅನ್ನೋದು ಬಟಾ ಬಯಲಾಗಿದೆ‌. ನಾವು ಹಣ, ಹೆಂಡ ಜನರಿಗೆ ಹಂಚಿದ್ದೇವೆ ಅನ್ನೋದು ಬಹಿರಂಗವಾಗಿದೆ ಎಂದು ಕುಟುಕಿದ್ದಾರೆ.

ಅಧಿಕಾರಕ್ಕೆ ಸಿದ್ದು ಹಣದ ಹೊಳೆ ಅರಿಸ್ತಾರೆ

ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಸಮೀಪದಲ್ಲಿದೆ. ಎಲೆಕ್ಷನ್ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರ ಹೇಳಿಕೆ ಮತದಾರರ ಅವಮಾನ ಮಾಡಿದಂತಿದೆ. ಸಿದ್ದರಾಮಯ್ಯ ಅವರು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಯಾವ ರೀತಿ ಹಣದ ಹೊಳೆ ಅರಿಸ್ತಾರೆ ಅನ್ನೋದು ತಿಳಿಯುತ್ತಿದೆ. ಯಾರು ವೋಟ್ ಹಾಕಿ ವಿಧಾನಸೌಧದಲ್ಲಿ ಕೂರಿಸ್ತಾರೆ. ರಾಜ್ಯದ ಜನರು ಅವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಹೇಳಿದ್ದಾರೆ.

ರಮೇಶ್ ಕುಮಾರ್ ಅವರಿಗೆ ಅಭಿನಂದನೆ

ಜನರನ್ನು 500 ರೂ. ಕೊಟ್ಟು ಪರ್ಚೇಸ್ ಮಾಡಿ ಎಂಬ ಹೇಳಿಕೆ ಮಾದ್ಯಮದಲ್ಲಿ ವೈರಲ್ ಆಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹೇಳ್ತಿದ್ರು. ಇವರು ಅಧಿಕಾರಕ್ಕೆ ಬಂದ್ರೆ ಎಟಿಎಂ ಮಾಡ್ಕೋತಾರೆ ಅಂತ. ಅದಕ್ಕೆ ಇದು ಪಕ್ಕಾ ಫ್ರೂಪ್ ಆಗಿಹೋಯ್ತು. ಕಾಂಗ್ರೆಸ್ ನವರು ಜನರ ತೆರಿಗೆ ಲೂಟಿ ಹೊಡೀತಾರೆ. ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಅಭಿನಂದನೆ ಎಂದು  ಕುಟುಕಿದ್ದಾರೆ.

RELATED ARTICLES

Related Articles

TRENDING ARTICLES