Sunday, December 29, 2024

ವಾರದೊಳಗೆ ಹನೂರಿನ ಅಭಿವೃದ್ದಿಗೆ ಪ್ಯಾಕೇಜ್ : ಸಿಎಂ ಬೊಮ್ಮಾಯಿ

ಬೆಂಗಳೂರು : ಹನೂರು ತಾಲ್ಲೂಕಿನ ಅಭಿವೃದ್ಧಿಗೆ ಒಂದು ವಾರದೊಳಗೆ ವಿಶೇಷ ಪ್ಯಾಕೇಜ್  ರೂಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.

ಹನೂರಿನಲ್ಲಿ ಹಮ್ಮಿಕೊಂಡಿದ್ದ ವಿಜಯಸಂಕಲ್ಪ ರಥಯಾತ್ರೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿದರು.

ಹನೂರಿನ ಕುಡಿಯುವ ನೀರಿನ ಯೋಜನೆ 3ನೇ ಹಂತಕ್ಕೆ  ಬರುವ ದಿನಗಳಲಿ ಅನುಮೋದನೆ ನೀಡಲಾಗುವುದು.  ರಾಜ್ಯ ಹೆದ್ದಾರಿ ನರೇಂದ್ರ ಮೋದಿ ಮತ್ತು ನಮ್ಮ ಸರ್ಕಾರದ ಕಾಣಿಕೆ. ಅವರ ಕಾಲದಲ್ಲಿ 6 ಸಾವಿರ ಕಿಮೀ ಹೆದ್ದಾರಿಯಾಗಿವೆ ಹಾಗೂ  ರೈಲ್ವೇ ಯೋಜನೆಗಳಾಗಿವೆ. ಅಭಿವೃದ್ಧಿಯ ಪಥದಲ್ಲಿ ದೇಶ ನಡೆಯುತ್ತಿದ್ದು, ವಿಶ್ವದಲ್ಲಿ ಭಾರತಕ್ಕೆ ದೊಡ್ಡ ಸ್ಥಾನ ದೊರೆತಿದೆ. ಯಡಿಯೂರಪ್ಪ ಅವರು ಕರ್ನಾಟಕವನ್ನು ಕಟ್ಟುವ ಕೆಲಸವನ್ನು ಮಾಡಿದ್ದಾರೆ. ನವ ಕರ್ನಾಟದಿಂದ ನವ ಭಾರತವನ್ನು ನಿರ್ಮಾಣ ಮಾಡೋಣ ಎಂದರು.

ಮತ್ತೊಮ್ಮೆ ಬಿಜೆಪಿ ಸರ್ಕಾರ

ಪ್ರಧಾನಿ ನರೇಂದ್ರ ಮೋದಿ, ಮಾಜಿ ಮುಖ್ಯಮಂತ್ರಿ ಬಿ.ಎಸ.ಯಡಿಯೂರಪ್ಪ ಅವರ ಕಾರ್ಯಕ್ರಮಗಳು ಮುಂದುವರೆಯಬೇಕಾದರೆ, ದೀನದಲಿತರು, ಬಡವರು ಉದ್ಧಾರವಾಗಬೇಕಾದರೆ ಭಾಜಪ ವನ್ನು ಕರ್ನಾಟಕದಲ್ಲಿ ಸಂಪೂರ್ಣ ಬಹುಮತದೊಂದಿಗೆ ತಂದು ಮತ್ತೊಮ್ಮೆ ಜನಪರವಾದ ಸರ್ಕಾರವನ್ನು ಅಧಿಕಾರಕ್ಕೆ ತರಬೇಕೆಂದು ಹೇಳಿದರು.

ಕಾಂಗ್ರೆಸ್‍ನ್ನು ಬೇರು ಸಮೇತ ಕಿತ್ತೊಗೆಯಬೇಕು

ಈ ಹನೂರು ಕ್ಷೇತ್ರ ಹಿಂದೆಯೇ ಅಭಿವೃದ್ಧಿಯಾಗಬೇಕಿತ್ತು. ಚಾಮರಾಜನಗರ  ಜಿಲ್ಲೆಯ ಅಭಿವೃದ್ಧಿಗೆ ಈ ಭಾಗದಿಂದ ಆಯ್ಕೆಯಾಗಿದ್ದ ಮುಖ್ಯಮಂತ್ರಿಗಳ ಕಾಣಿಕೆ ಏನು? ಎಂದು ಪ್ರಶ್ನಿಸಿದ ಅವರು  ಈ ಭಾಗಕ್ಕೆ ವೈದ್ಯಕೀಯ ಕಾಲೇಜನ್ನು ಮಂಜೂರು ಮಾಡಿದ್ದು ಬಿಜೆಪಿ ಸರ್ಕಾರ. ಗಡಿಯಂಚಿನ ಜನರ ದುಸ್ಥಿತಿಯನ್ನು ನೋಡಿದಾಗ 60  ವರ್ಷ ಏನು ಆಡಳಿತ ಮಾಡಿದ್ದಾರೆ ಎಂದು ತಿಳಿಯುತ್ತದೆ. ಬಡವರನ್ನು ಬಡವರನ್ನಾಗಿ ಇಟ್ಟು ಮತ ಬ್ಯಾಂಕ್‍ಗಳನ್ನಾಗಿ ಮಾಡಿಕೊಂಡಿದ್ದರು. ಭ್ರಷ್ಟಾಚಾರದ ಗಂಗೋತ್ರಿ ಕಾಂಗ್ರೆಸ್ . ನೀರಾವರಿ, ಹಾಸ್ಟಲ್, ಬಿಡಿಎ ನಲ್ಲಿ ಭ್ರಷ್ಟಾಚಾರ ಮಾಡಿದರು. ಚಾಮರಾಜನಗರದಲ್ಲಿ ಮಾತ್ರ ಕಾಂಗ್ರೆಸ್ ಉಳಿದುಕೊಂಡಿದ್ದು, ಇಲ್ಲಿ ಕಾಂಗ್ರೆಸ್‍ನ್ನು ಬೇರು ಸಮೇತ ಕಿತ್ತೊಗೆದು ಕಮಲವನ್ನು ಅರಳಿಸಬೇಕು ಎಂದರು.

ಜನಪರ ಯೋಜನೆ ಜಾರಿ

ಯಡಿಯೂರಪ್ಪನವರು ಮುಖ್ಯಮಂತ್ರಿಯಾದ ಮೇಲೆ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದರು. ಪ್ರವಾಹ ಸಂದರ್ಭದಲ್ಲಿ ಇಡೀ ರಾಜ್ಯವನ್ನು ಸುತ್ತಿ ಸಂಕಷ್ಟದಲ್ಲಿದ್ದವರ ಕಷ್ಟಕ್ಕೆ ನೆರವಾದರು. ಭಾಗ್ಯಲಕ್ಷ್ಮೀ, ಸಂಧ್ಯಾಸುರಕ್ಷಾ ಮುಂತಾದ ಹಲವಾರು ಯೋಜನೆಗಳನ್ನು ಜಾರಿಗೆ ತಂದರು. ಪ್ರಧಾನಮಂತ್ರಿಗಳ ಆವಾಸ ಯೋಜನೆಯಡಿ 5 ಲಕ್ಷ ಮನೆಗಳ ನಿರ್ಮಾಣವಾಗಿದೆ. ಜಲ್ ಜೀವನ್ ಮಿಷನ್ ಅಡಿ ಪ್ರತಿ ಮನೆಗೆ ಕುಡಿಯುವ ನೀರನ್ನು ಒದಗಿಸುವ ಪ್ರಧಾನಮಂತ್ರಿಗಳು, ವಿದ್ಯುತ್ ಸಂಪರ್ಕ, ಮುದ್ರಾ ಯೋಜನೆ ಸೇರಿದಂತೆ ಜನಕಲ್ಯಾಣದ ಕೆಲಸಗಳನ್ನು ಪ್ರಧಾನಮಂತ್ರಿಗಳು ಮಾಡಿದ್ದಾರೆ ಎಂದರು.

RELATED ARTICLES

Related Articles

TRENDING ARTICLES