Saturday, January 11, 2025

ಧ್ರುವ ಗತ್ತು, ಗಮ್ಮತ್ತು ಇದೀಗ ವರ್ಲ್ಡ್​ ಸಿನಿದುನಿಯಾಗೆ ಗೊತ್ತು

ವರ್ಲ್ಡ್​ ಸಿನಿ ದುನಿಯಾಗೆ ನಮ್ಮ ಸ್ಯಾಂಡಲ್​ವುಡ್​ ಅಂಗಳದಿಂದ ಮತ್ತೊಂದು ತೂಫಾನ್ ಹುಟ್ಟಿಕೊಂಡಿದೆ. ಮಾರ್ಟಿನ್ ಯುಗಾರಂಭವಾಗಿದ್ದು, ಇವ್ರ ಧಮ್ಮು, ರಿಧಮ್​ಗೆ ಇಡೀ ಬಾಲಿವುಡ್ ಶೇಕ್ ಆಗಿದೆ. ಇಂಡಿಯನ್ ಕಮಾಂಡರ್ ಅರ್ಜುನ್ ಆಗಿ ಪ್ರಜ್ವಲಿಸ್ತಿರೋ ಧ್ರುವ ಸರ್ಜಾ ಸದ್ಯ ಟ್ರೆಂಡಿಂಗ್ ನಂ.1ನಲ್ಲಿದ್ದಾರೆ. ಫಾಸ್ಟೆಸ್ಟ್ ಎರಡು ಕೋಟಿ ವೀವ್ಸ್ ಆಗಿರೋ ಮಾರ್ಟಿನ್​ನಲ್ಲಿ ಇಂಟರ್​ನ್ಯಾಷನಲ್ ಆಜಾನುಬಾಹುಗಳಿದ್ದಾರೆ.

8 ಗಂಟೆಯಲ್ಲಿ ಕೋಟಿ.. 18 ಗಂಟೆಯಲ್ಲಿ 2 ಕೋಟಿ ವೀವ್ಸ್..!

ದಿ ವೆಯ್ಟ್ ಈಸ್ ಓವರ್.. ಮೋಸ್ಟ್ ಎಕ್ಸ್​ಪೆಕ್ಟೆಡ್ ಪ್ಯಾನ್ ಇಂಡಿಯನ್ ಮೂವಿ ಮಾರ್ಟಿನ್ ಟೀಸರ್ ಹೊರಬಂದಿದೆ. ಜಸ್ಟ್ ಫಸ್ಟ್ ಲುಕ್ ಪೋಸ್ಟರ್​ಗಳಿಂದಲೇ ವ್ಹಾವ್ ಫೀಲ್ ಕೊಟ್ಟಿದ್ದ ಮಾರ್ಟಿನ್, ಟೀಸರ್​ನಿಂದ ಮೈಂಡ್ ಬ್ಲೋಯಿಂಗ್ ಅನಿಸಿದೆ. ಹಾಲಿವುಡ್ ಸಿನಿಮಾ ಶೈಲಿಯ ಮೇಕಿಂಗ್​ನಿಂದ ಸೌಂಡ್ ಮಾಡ್ತಿದೆ. ಕೆಜಿಎಫ್ ನಂತ್ರ ಕನ್ನಡದ ಮತ್ತೊಂದು ಮೂವಿ ವರ್ಲ್ಡ್​ ಸಿನಿದುನಿಯಾದಲ್ಲಿ ಕ್ರೇಜ್ ಹುಟ್ಟಿಸಿದೆ.

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ, ಇದೇ ಮೊದಲ ಬಾರಿ ಇಷ್ಟೊಂದು ಲಾರ್ಜ್​ ಸ್ಕೇಲ್ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದು, ನ್ಯಾಷನಲ್ ಸ್ಟಾರ್ ಆಗಿ ರಾರಾಜಿಸ್ತಿದ್ದಾರೆ. ಅವ್ರ ಮಾಸ್ ಗತ್ತು, ಗಮ್ಮತ್ತು ಬರೀ ನಮ್ಮ ಸೌತ್​ಗೆ ಮಾತ್ರ ಗೊತ್ತಿತ್ತು. ಇದೀಗ ನಿರ್ದೇಶಕ ಎ.ಪಿ ಅರ್ಜುನ್ ಹಾಗೂ ನಿರ್ಮಾಪಕ ಉದಯ್ ಕೆ ಮೆಹ್ತಾ ವಿಶ್ವ ಸಿನಿದುನಿಯಾಗೆ ಸಾರುವ ಕೆಲಸ ಮಾಡಿದ್ದಾರೆ. ಪೇಟ್ರಿಯಾಟಿಸಂ ಟಚ್ ಇರೋ ಈ ಸಿನಿಮಾದ ಮೇಕಿಂಗ್ ಈಗ ಟಾಕ್ ಆಫ್ ದಿ ಟೌನ್ ಆಗಿದೆ.

ಟೀಸರ್ ರಿಲೀಸ್ ಆದ ಜಸ್ಟ್ ಎಂಟು ಗಂಟೆಯಲ್ಲಿ ಬರೋಬ್ಬರಿ ಒಂದು ಕೋಟಿ ವೀವ್ಸ್ ಪಡೆದಿರೋ ಮಾರ್ಟಿನ್, 18 ಗಂಟೆಯಲ್ಲಿ ಎರಡು ಕೋಟಿ ವೀವ್ಸ್ ಗಡಿ ದಾಟಿದೆ. ಪರಭಾಷೆಗಳಿಂದ ಅಭೂತಪೂರ್ವ ಪ್ರತಿಕ್ರಿಯೆಗಳು ಬರ್ತಿದ್ದು, ಪರಭಾಷಿಗರು ಹಾಗೂ ಫಾರಿನರ್ಸ್​ ಮಾರ್ಟಿನ್ ಟೀಸರ್ ರಿವ್ಯೂ ಮಾಡೋಕೆ ಶುರು ಮಾಡಿ, ಮೆಚ್ಚುಗೆ ವ್ಯಕ್ತಪಡಿಸ್ತಿದ್ದಾರೆ.

ಪಾಕ್ ಜೈಲ್​ನಲ್ಲಿ ನಮ್ಮ ಇಂಡಿಯನ್ ಯಾಕಿರ್ತಾನೆ..? ಇದ್ರ ಅಸಲಿ ಕಹಾನಿ ಏನು ಅನ್ನೋದೇ ಸಸ್ಪೆನ್ಸ್. ಅಂದಹಾಗೆ ಧ್ರುವ ಸರ್ಜಾ ಹಲ್ಕ್ ರೀತಿ ಬಾಡಿ ಬಿಲ್ಡ್ ಮಾಡಿದ್ದು, ಪರ್ಫಾಮೆನ್ಸ್ ನೆಕ್ಸ್ಟ್ ಲೆವೆಲ್​ಗಿದೆ. ಹೈ ವೋಲ್ಟೇಜ್ ಌಕ್ಷನ್ ಸೀಕ್ವೆನ್ಸ್​ಗಳಿಂದ ನೋಡುಗರ ಎದೆ ನಡುಗಿಸುತ್ತಿದ್ದಾರೆ. ರವಿ ಬಸ್ರೂರು ಬ್ಯಾಗ್ರೌಂಡ್ ಸ್ಕೋರ್, ಸತ್ಯ ಹೆಗ್ಡೆ ಕ್ಯಾಮೆರಾ, ಕೆಎಂ ಪ್ರಕಾಶ್ ಶಾರ್ಪ್​ ಎಡಿಟಿಂಗ್ ಚಿತ್ರದ ಸ್ಟ್ರೆಂಥ್ ಹೆಚ್ಚಿಸಿದೆ. ಹಾಗಾಗಿಯೇ ಫಾಸ್ಟೆಸ್ಟ್ ಎರುಡ ಕೋಟಿ ವೀವ್ಸ್ ಜೊತೆ ನಂಬರ್ ಒನ್ ಟ್ರೆಂಡಿಂಗ್​​ನಲ್ಲಿದೆ.

ಧ್ರುವ ನಮಗೆ ನಿಮಗೆಲ್ಲಾ ಗೊತ್ತಿರೋ ಶಕ್ತಿ ಪ್ರಸಾದ್ ಕುಟುಂಬದ ಅಸಲಿ ಶಕ್ತಿ. ಈಗ ಧ್ರುವ ಯಾರು ಅನ್ನೋದನ್ನ ಇಡೀ ವರ್ಲ್ಡ್​ ಮಂದಿ ಗೂಗಲ್ ಮಾಡ್ತಿದ್ದಾರೆ. ಆದ್ರೆ ಈ ಮಾರ್ಟಿನ್ ಟೀಸರ್​ನಲ್ಲಿರೋ ಇಬ್ಬರು ವಿಶ್ವದ ಬಲಿಷ್ಟ ವ್ಯಕ್ತಿಗಳ ಬಗ್ಗೆ ನಾವು ನಿಮಗೆ ಹೇಳಲೇಬೇಕು. ಆಜಾನುಬಾಹುಗಳಂತಿರೋ ರುಬಿಲ್ ಹಾಗೂ ನೇತಾನ್ ಜಾನ್ಸ್​ ವಿಲನಿಸಂ ನಿಜಕ್ಕೂ ರೋಚಕ, ರೋಮಾಂಚಕ.

ಧ್ರುವ ಎದುರು IFBB ಬಾಡಿ ಬಿಲ್ಡರ್, ವರ್ಲ್ಡ್​ ನೆಕ್ಜಿಲಾ ರುಬಿಲ್

ಪಾಕ್ ಜೈಲಲ್ಲಿ ನಮ್ಮ ಇಂಡಿಯನ್ ಅರ್ಜುನ್​ ಜೊತೆ ಕಾದಾಡೋ ಈ ಇಬ್ಬರು ಆಜಾನುಬಾಹುಗಳು ನಿಜಕ್ಕೂ ನೋಡುಗರನ್ನ ನಡುಗಿಸುವಂತಿದ್ದಾರೆ. ಒಬ್ರು ಸೌತ್ ಅಮೆರಿಕಾದ, ಐಎಫ್​ಬಿಬಿ ಪ್ರೊಫೆಷನಲ್ ಬಾಡಿ ಬಿಲ್ಡರ್ ರುಬಿಲ್. ಇವ್ರು ಇನ್ನೂ 26 ವರ್ಷದ ಚಿಗುರುಮೀಸೆ ಯುವಕ. ವಿಶ್ವದಲ್ಲೇ ಅತಿ ದೊಡ್ಡ ನೆಕ್ ಹೊಂದಿರೋ ವ್ಯಕ್ತಿಯಾಗಿದ್ದು ಗಾಡ್ಜಿಲಾ ರೀತಿ ನೆಕ್ಜಿಲಾ ಅಂತ ಖ್ಯಾತಿ ಪಡೆದಿದ್ದಾರೆ. ಈ ಬಾರಿಯ ಒಲಂಪಿಕ್​ನಲ್ಲಿ ಸ್ಪರ್ಧೆಗೆ ತಯಾರಾಗ್ತಿರೋ ರುಬಿಲ್, ಇದೇ ಮೊದಲ ಬಾರಿ ಮಾರ್ಟಿನ್ ಚಿತ್ರದಿಂದ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದಾರೆ.

ಮತ್ತೊಬ್ಬ ಆಜಾನುಬಾಹು ನೇತಾನ್ ಜಾನ್ಸ್. ಈತ ಈಗಾಗ್ಲೇ ಟ್ರಾಯ್, 300, ಫಿಯರ್​ಲೆಸ್, ನೆವರ್ ಬ್ಯಾಕ್ ಡೌನ್ ಸೇರಿದಂತೆ ಸಾಕಷ್ಟು ಹಾಲಿವುಡ್ ಸಿನಿಮಾಗಳನ್ನ ಮಾಡಿರೋ ಹಾಲಿವುಡ್ ಌಕ್ಟರ್. ಆಸ್ಟ್ರೇಲಿಯಾ ಮೂಲದ ಈ ವ್ಯಕ್ತಿ, UFC ಬಾಕ್ಸಿಂಗ್​ನಲ್ಲಿ ರಿಯಲ್ ಫೈಟರ್. ಟೈಗರ್ ಶ್ರಾಫ್ ಜೊತೆ ಬಾಲಿವುಡ್​ನ ಫ್ಲೈಯಿಂಗ್ ಜಾಟ್ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದ ನೇತಾನ್ ಜಾನ್ಸ್, ಅದಾದ ಬಳಿಕ ಮಾರ್ಟಿನ್ ಮೂಲಕ ಮತ್ತೆ ಭಾರತೀಯ ಚಿತ್ರರಂಗಕ್ಕೆ ಭರ್ಜರಿ ಕಂಬ್ಯಾಕ್ ಮಾಡಿದ್ದಾರೆ.

ಒಟ್ಟಾರೆ ಇಂತಹ ಹತ್ತು ಹಲವು ವಿಶೇಷತೆಗಳಿಂದ ಮಾರ್ಟಿನ್ ಅಬ್ಬರ ಸಖತ್ ಜೋರಿದೆ. ಇದು ಜಸ್ಟ್ ಟೀಸರ್ ಆಗಿದ್ದು, ಪಿಕ್ಚರ್ ಅಭಿ ಬಾಕಿ ಹೈ ಮೇರಾ ದೋಸ್ತ್ ಅನ್ನುವಂತಾಗಿದೆ. ಌಕ್ಷನ್ ಕಿಂಗ್ ಅರ್ಜುನ್ ಸರ್ಜಾ ಬರೆದ ಕಥೆಗೆ ಪೂರಕವಾಗಿ ಈ ಚಿತ್ರವನ್ನು ಕಟ್ಟಿಕೊಡುವಲ್ಲಿ ಎಪಿ ಅರ್ಜುನ್, ಉದಯ್ ಕೆ ಮೆಹ್ತಾ ಯಶಸ್ವಿ ಆಗಿದ್ದಾರೆ. ಇದು ನಮ್ಮ ಕನ್ನಡದ ಹೆಮ್ಮೆ ಅನ್ನೋದು ಖುಷಿಯ ವಿಚಾರ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES