ಬೆಂಗಳೂರು: ಬಿಜೆಪಿಗೆ ರೌಡಿ ಶೀಟರ್ ಸೇರ್ಪಡೆ ವಿಚಾರವಾಗಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಅವರು ಮಾತನಾಡಿದ್ದಾರೆ.
ಈ ಹಿಂದೆ ನಾನು ಯಾರ ಮೇಲೂ ದಬ್ಬಾಳಿಕೆ ಮಾಡಿರಲಿಲ್ಲ. ನನ್ನನ್ನು ರೌಡಿ ಶೀಟರ್ ಹೆಸರಿಗೆ ಸೇರಿಸಿದರು. ಕೇವಲ ರಾಜಕೀಯಕ್ಕಾಗಿ ನನ್ನ ಮೇಲೆ ರೌಡಿ ಶೀಟರ್ ಹಾಕಲಾಯಿತು. ಪೊಲೀಸ್ ಠಾಣೆಯಲ್ಲಿ 90 ರ ದಶಕದಲ್ಲಿ ನನ್ನ ಫೋಟೋ ಕೂಡ ರೌಡಿ ಶೀಟರ್ ಲೀಸ್ಟಲ್ಲಿ ಸೇರಿಸಿ ಸಮಾಜ ಘಾತುಕ ಅಂತ ಹಾಕಲಾಗಿತ್ತು. ಆಗ ಪೊಲೀಸ್ ಸ್ಟೇಷನ್ ನಲ್ಲಿ ಬೇಡ ಹೊರಗಡೆ ಹಾಕಿ ಅಂತ ನಾನು ಹೇಳಿದ್ದೆ ಎಂದರು.
ಇನ್ನು ಕಾಂಗ್ರೆಸ್ ವಿರುದ್ಧ ಹೋರಾಟ ಮಾಡಿದ್ದಕ್ಕೆ ನನ್ನ ಮೇಲೆ ರೌಡಿ ಶೀಟರ್‌ಗೆ ಸೇರಿಸಲಾಗಿತ್ತು. ದೇವರಾಜ್ ಅರಸ್ ಸಿಎಂ ಆಗಿದ್ದಾಗ ಮೂರನೇ ಮಹಡಿಯಲ್ಲಿ ರೌಡಿಗಳನ್ನ ಕೂರಿಸಿಕೊಂಡು ಚರ್ಚೆ ಮಾಡ್ತಿದ್ರು. ನಮ್ಮ ಪಕ್ಷ ಅಂತಹ ಕೆಲಸವೇನು ಮಾಡಿಲ್ಲ ಎಂದು ಸಿಟಿ ರವಿ ಹೇಳಿದರು.
ಅಂತೆಯೇ, ಗುಜರಾತ್ ನಲ್ಲಿ ವಿಧಾನಸಭೆ ಚುನಾವಣೆ ಬಗ್ಗೆ ಮಾತನಾಡಿದ ಸಿಟಿ ರವಿ, ಚುನಾವಣೆ ದೃಷ್ಟಿಯಿಂದ ಕೆಲಸ ಮಾಡಿ ನಿನ್ನೆ ರಾತ್ರಿ ರಾಜ್ಯಕ್ಕೆ ಆಗಮಿಸಿದ್ದೇನೆ. ಗುಜರಾತ್ ನಲ್ಲಿ ಬಿಜೆಪಿ ಪರ ಅಲೆ ಇದೆ. ಮೋದಿ ಜನರ ಹೃದಯ ಗೆದ್ದಿದ್ದಾರೆ. ಮತ್ತೆ ಬಿಜೆಪಿ ಅಧಿಕಾರಕ್ಕೆ ಬರೋದು ಶತಸಿದ್ಧವಾಗಿದೆ. ಹಿಂದೂ ಸಂಪ್ರದಾಯ ಮೀರಿ ಸರ್ಕಾರ ಬದಲಾಯಿಸಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.