Wednesday, January 22, 2025

ಚಿರತೆ ದಾಳಿ; ಕೊರಳಿಗೆ ಹಾಕಿದ್ದ ಸರಪಳಿಯಿಂದ ಬಚಾವ್​ ಆದ ನಾಯಿ.!

ಕಾರವಾರ; ನಾಯಿ ಬೇಟೆಯಾಡಲು ಮನೆಯೊಂದರ ಬಳಿ ಚಿರತೆ ಆಗಮಿಸಿದ್ದ ಘಟನೆ ಹೊನ್ನಾವರದ ಗೊಳಿಬೈಲ್ ಗ್ರಾಮದಲ್ಲಿ ನಡೆದಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕು ಗ್ರಾಮದ ನಿವಾಸಿ ಗಣಪು ಹೆಗಡೆ ಎಂಬುವವರ ಮನೆಯಂಗಳದಲ್ಲಿ ಚಿರತೆ ಕಾಣಿಸಿಕೊಂಡಿದೆ. ಬೆಳಗಿನ ಜಾವ 4:20ರ ಸುಮಾರಿಗೆ ನಾಯಿ ಹಿಡಿಯಲು ಚಿರತೆ ಬಂದಿದ್ದು, ಆದರೆ ನಾಯಿ ಕೊರಳಿಗೆ ಸರಪಳಿ ಕಟ್ಟಿದ್ದರಿಂದ ನಾಯಿ ಬಚಾವ್​ ಆಗಿದೆ.

ಇನ್ನು ನಾಯಿ ಅರಚಾಟ ಕೇಳಿ ಮನೆಯವರು ಲೈಟ್ ಆನ್ ಮಾಡುತ್ತಿದ್ದಂತೆ ಚಿರತೆ ಪರಾರಿಯಾಗಿದೆ. ಕೆಲದಿನಗಳಿಂದ ಹೊಸಾಕುಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಚಿರತೆ ಕಾಣಿಸಿಕೊಳ್ಳುತ್ತಿದ್ದು, ಅರಣ್ಯ ಇಲಾಖೆ ಬೋನು ಇರಿಸಿದ್ದರೂ ತಪ್ಪಿಸಿಕೊಂಡು ಚಿರತೆ ಈ ಭಾಗದಲ್ಲಿ ಓಡಾಡುತ್ತಿದೆ.

RELATED ARTICLES

Related Articles

TRENDING ARTICLES