ಹಾಸನ: ಎರಡು ಚಿರತೆಗಳನ್ನು ಕೊಂದು ಉಗುರುಗಳು ಹಾಗೂ ಮೂಳೆ ಮಾರಾಟಕ್ಕೆ ಯತ್ನಸಿದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಒಟ್ಟು ಐವರು ಆರೋಪಿಗಳ ಬಂಧನ ಮಾಡಲಾಗಿದೆ.
ಹಾಸನ ಡಿವೈಎಸ್‌ಪಿ ಉದಯಭಾಸ್ಕರ್ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದ್ದು, ಬೇಲೂರು ತಾಲ್ಲೂಕಿನ, ಹಳೇಬೀಡು ಹೋಬಳಿ, ಕೋಮಾರನಹಳ್ಳಿಯಲ್ಲಿ ಆರೋಪಿಗಳು ಚಿರತೆಯನ್ನು ಕೊಂದು ಅದನ್ನು ತಿಪ್ಪೆಯಲ್ಲಿ ಹೂತಿದ್ದರು. ಇದಕ್ಕೂ ಮೊದಲು ಚಿರತೆಯ ಉಗುರು ತೆಗೆದು ಮಾರಾಟ ಮಾಡಲು ಯತ್ನಿಸಿದ್ದರು. ಸೆಕ್ಯುರಿಟಿ ಗಾರ್ಡ್ ಮೋಹನ್, ಕಾಂತರಾಜು ಮತ್ತು ಕಾಂತರಾಜು ಬಂಧಿತರು.
ಮತ್ತೊಂದು ಪ್ರಕರಣದಲ್ಲಿ ಆಲೂರು ತಾಲ್ಲೂಕಿನ, ಮಾದೀಹಳ್ಳಿಯಲ್ಲಿ ಚಿರತೆ ಕೊಂದು ಅದರ ನಾಲ್ಕು ಕಾಲು ಕತ್ತರಿಸಿ ಉಗುರು ಮಾರಾಟ ಯತ್ನಿಸಿದ ಮಂಜೇಗೌಡ ಮತ್ತು ರೇಣುಕಾಕುಮಾರ್ ಬಂಧಿಸಲಾಗಿದೆ. ಆರೋಪಿಗಳಿಂದ ಚಿರತೆ ಕಾಲಿನ ನಾಲ್ಕು ತುಂಡುಗಳಲ್ಲಿದ್ದ 18 ಉಗುರು, ಒಂದು ಓಮಿನಿ ಕಾರು, 2 ಬೈಕ್, ಒಟ್ಟು 7 ಮೊಬೈಲ್ನ್ನ ಹಾಸನ ಪೊಲೀಸರು ವಶಪಡಿಸಿಕೊಂಡಿದ್ದಾರೆ.