ಬೆಂಗಳೂರು: ರಾಜ್ಯ ಚುನಾವಣೆ ಇನ್ನೇನು ಕೆಲವೇ ತಿಂಗಳು ಬಾಕಿ ಇದೆ. ಈಗಿರುವಾಗಲೇ ಹಲವು ಕುಖ್ಯಾತ ರೌಡಿಗಳಿಗೆ ಗಾಳ ಹಾಕುತ್ತಿದೆ ಎಂಬ ಆರೋಪ ಕೇಲಿ ಬಂದ ಬೆನ್ನಲ್ಲೆಯಲ್ಲಿ ಕುಖ್ಯಾತ ರೌಡಿ ಶೀಟರ್ ಸೈಲೆಂಟ್ ಸುನೀಲ್ ಬಿಜೆಪಿ ಸಂಸದರು, ಮಿನಿಸ್ಟರ್ ಜತೆಗೆ ವೇದಿಕೆ ಹಂಚಿಕೊಂಡಿದ್ದ.
ಹಾಲಿ ಶಾಸಕರು ಈ ಬಾರಿಯೂ ಟಿಕೆಟ್ ಪಡೆಯುಬೇಕು ಅಂತ ಸರ್ಕಸ್ ಮಾಡುತ್ತಾ ಇದ್ದರೆ, ಈ ಕಡೆ ರೌಡಿ ಸೈಲೆಂಟ್ ಸುನೀಲ್ ಜಮೀರ್ ವಿರುದ್ಧ ಸ್ಪರ್ಧಿಸಲು ಚಾಮರಾಜಪೇಟೆ ಬಿಜೆಪಿ ಟಿಕೆಟ್ಗಾಗಿ ಗಾಳ ಹಾಕಿದ್ದಾರೆ ಎನ್ನಲಾಗಿದೆ. ಇನ್ನು ಈ ಸೈಲೆಂಟ್ ಸುನೀಲನ ಮೇಲೆ ಒರೊಬ್ಬರಿ 17 ಕೇಸ್ ಫೀಟ್ ಮಾಡಲಾಗಿದೆ.
ಸದ್ಯ ಬೆಂಗಳೂರಿನ ಪ್ರಕಾಶ ನಗರದ ನಿವಾಸಿಯಾಗಿರುವ 41 ವರ್ಷದ ಸೈಲೆಂಟ್ ಸುನೀಲ ಮೂಲತಃ ಕೇರಳದವನು. ಇವನ ಮೂಲ ಹೆಸರು ಸುನೀಲ್ ಕುಮಾರ್ ಎಂದು. ಹತ್ತನೇ ತರಗತಿ ಓದುವಾಗಲೇ ತಮ್ಮ ತಾಯಿಗೆ ಮತ್ತೊಬ್ಬ ನಗೆಚಾಟಿ ಮಾಡಿದನೆಂದು ‘ಬಾಲಾಪರಾಧಿ’ಯಾಗಿ ಈ ಸೈಲೆಂಟ್ ಸುನೀಲ ಜೈಲುವಾಸ ಅನುಭವಿಸಿದಾತ ಈ ಬೆಂಗಳೂರಿನ ಅಂಡರ್ ವರ್ಲ್ಡ್ಗೆ ಎಂಟ್ರಿಯಾಗಿದ್ದ. ಬಳಿಕ ರೌಡಿಸಂನಲ್ಲಿ ಬೆಳೆದು ಜಾಮೀನು ಮೇಲೆಗೆ ಹೊರ ಬಂದು ಹಲವರಿಗೆ ಜೀವ ಬೆದರಿಕೆ ಹಾಕಿ ತನ್ನದೆ ಲೋಕ ಸೃಷ್ಠಿಸಿದ್ದ ಈ ಸುನೀಲ್.
ಸೈಲೆಂಟ್ ಸುನೀಲ್ ಮೇಲೆ ಕೇಸ್ ಯಾವ ಯಾವ ಠಾಣೆಯಲ್ಲಿ ಇದೆ ಗೊತ್ತಾ.?
- ಹಾಲು ವ್ಯಾಪಾರಿ ರಮೇಶ್ ಎಂಬುವನ ಮೇಲೆ ಹಲ್ಲೆ ಬಗ್ಗೆ ರಾಜಾಜಿನಗರ ಕ್ರೈಂ ನಂಬರ್ 60/1996 -307 ಕೇಸ್
- ಪೋಲಿಸ್ ಹೆಡ್ ಕಾನ್ಸಟೇಬಲ್ ಶೆಟ್ಟಳಪ್ಪನ ಕೊಲೆ, ರಾಜಾಜಿನಗರ ಕ್ರೈಂ ನಂಬರ್ 125/ 1996 ಕೇಸ್ 302
- ಸುಬ್ರಮಣ್ಯ ನಗರ ಪೊಲೀಸ್ ಠಾಣೆ 29/2000 ರಲ್ಲಿ 307 ಕೇಸ್
- ಗಾಯಿತ್ರಿನಗರದ ರೌಡಿ ಶೀಟರ್ ಕುಮಾರ್ ಮೇಲೆ ಹಲ್ಲೆ ಸುಬ್ರಹ್ಮಣ್ಯ ನಗರ 74/2000 – 307
- ರೌಡಿಶೀಟರ್ ಶೇಖರ್ ಆಲಿಯಾಸ್ ಶೇಖಿ ಮೇಲೆ ಹಲ್ಲೆ, ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣೆ ಕ್ರೈಂ ನಂಬರ್ 230/2000
- ಸಂಜಯನಗರ ಠಾಣೆ 2001 ipc 384
- ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣೆ 139/2004 384, 511
- ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣೆ 307
- ಶಂಕರಪುರ ಪೊಲೀಸ್ 399, 402
- ಹೈಗ್ರೌಂಡ್ಸ್ 2004 ಬೆಕ್ಕಿನ ಕಣ್ಣು ರಾಜೇಂದ್ರ ಕೊಲೆ 2008 ನೇ ರಾಮನಗರ ಪೊಲೀಸ್ ಠಾಣೆ 399 / 400/ 402 ಹಾಗೂ ಯಲಹಂಕ, ಹೆಣ್ಣೂರು, ಎಲೆಕ್ಟ್ರಾನಿಕ್ ಸಿಟಿ ಸೇರಿದಂತೆ ಒಟ್ಟು 17 ಕೇಸ್ ಈ ಸೈಲೆಂಟ್ ಸುನೀಲನ ಮೇಲೆ ದಾಖಲಾಗಿವೆ.
ಸೈಲೆಂಟ್ ಅಂತ ಹೆಸರು ಬಂದಿದ್ದು ಏಕೆ?
ರೌಡಿಸಂನಲ್ಲಿ ಅಬ್ಬರಿಸೋ ಸುನೀಲನಿಗೆ ಸೈಲೆಂಟ್ ಸುನೀಲ ಅಂತ ಹೆಸರು ಬರೋದಕ್ಕೂ ಕಾರಣಗಳಿವೆ. ಈತನನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸುವ ವೇಳೆ ಸುನೀಲ ಸೈಲೆಂಟ್ ಆಗೇ ಇರ್ತಿದ್ದ. ಏನೇ ಪ್ರಶ್ನೆ ಮಾಡಿದ್ರು, ಗಪ್ ಚುಪ್ ಆಗಿ ಇರ್ತಿದ್ದ. ಇದೇ ಕಾರಣಕ್ಕೆ ಆತನಿಗೆ ಸೈಲೆಂಟ್ ಸುನೀಲ ಅನ್ನೋ ಹೆಸರು ಬಂತು.