Wednesday, January 22, 2025

ಶಿವಮೊಗ್ಗದಲ್ಲಿ ಬೋನಿಗೆ ಬಿದ್ದ ಗಂಡು ಚಿರತೆ

ಶಿವಮೊಗ್ಗ : ಕಳೆದ 15 ದಿನಗಳಿಂದ ಮೂರು ಹಸುಗಳನ್ನು ಈ ಚಿರತೆ ಕೊಂದಿತ್ತು. ಹೀಗಾಗಿ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು. ಇದರ ಬೆನ್ನಲ್ಲೇ ಗ್ರಾಮಸ್ಥರು ಚಿರತೆ ಹಿಡಿಯಲು ಅರಣ್ಯ ಇಲಾಖೆಗೆ ಮನವಿ ಮಾಡಿಕೊಂಡಿದ್ದರು.

ಹರಮಘಟ್ಟ ಗ್ರಾಮದ ಹೊರವಲಯದಲ್ಲಿ ಬೋನು ಇಟ್ಟು ಅದರಲ್ಲಿ ನಾಯಿ ಇಡಲಾಗಿತ್ತು. ಶುಕ್ರವಾರ ಬೆಳಿಗ್ಗೆ ಚಿರತೆ ಬೋನಿಗೆ ಬಿದ್ದಿದೆ. ಸೆರೆ ಹಿಡಿದ ಚಿರತೆಯನ್ನು ಊರಿನ ಅಗಸೆ ಬಾಗಿಲಿಗೆ ತಂದಿರಿಸಲಾಗಿದೆ. ಅದನ್ನು ನೋಡಲು ಗ್ರಾಮಸ್ಥರು ಮತ್ತು ಸುತ್ತಮುತ್ತಲಿನ ಗ್ರಾಮಗಳ ಜನ ಸಾಗರವೇ ಹರಿದು ಬಂದಿತ್ತು.

RELATED ARTICLES

Related Articles

TRENDING ARTICLES