Monday, December 23, 2024

ಅನಾರೋಗ್ಯ ಹಿನ್ನಲೆ ಆಸ್ಪತ್ರೆಗೆ ದಾಖಲಾದ ರಿಕಿ ಪಾಂಟಿಂಗ್

ಆಸ್ಟ್ರೇಲಿಯಾ: ಪರ್ತ್‌ನಲ್ಲಿ ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೊದಲ ಟೆಸ್ಟ್ ಪಂದ್ಯದ ವೇಳೆ ಆಸ್ಟ್ರೇಲಿಯಾದ ಕ್ರಿಕೆಟ್​ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್ ಅವರು ದಿಢೀರ್ ಆರೋಗ್ಯ ಸಮಸ್ಯೆ ಕಾಣಿಸಿಕೊಂಡ ಹಿನ್ನಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿ ತಿಳಿಸಿವೆ.

ಪರ್ತ್‌ನಲ್ಲಿ ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ನಡುವಿನ 1 ನೇ ಟೆಸ್ಟ್‌ನ 3 ನೇ ದಿನದ ಸಮಯದಲ್ಲಿ ಪಾಂಟಿಂಗ್ ಆಸ್ಟ್ರೇಲಿಯಾ ಕ್ರಿಕೆಟ್​​​​ ಚಾನೆಲ್ 7ಗೆ ಕಾಮೆಂಟ್​ಟರ್​ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಈ ವೇಳೆ ಊಟದ ಸಮಯದದಲ್ಲಿ ಪಾಂಟಿಂಗ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಮುನ್ನೆಚ್ಚರಿಕೆಗಾಗಿ ಹೃದಯಕ್ಕೆ ಸಂಬಂಧಿಸಿದ ತೊಂದರೆ ಗೆಹೃದಯವನ್ನು ತಪಾಸಣೆ ಮಾಡಲು ಆಸ್ಪತ್ರೆಗೆ ತೆರಳಿದರು ವರದಿಯಾಗಿವೆ.

ರಿಕಿ ಪಾಂಟಿಂಗ್ ಅವರು ಅಸ್ವಸ್ಥರಾಗಿದ್ದಾರೆ ಮತ್ತು ಇಂದಿನ ಕವರೇಜ್‌ನ ಉಳಿದ ಭಾಗಗಳಿಗೆ ವಿವರಣೆಯನ್ನು ನೀಡುವುದಿಲ್ಲ ಎಂದು ಎಸ್​ಎಎಂಎಚ್​​ ವರದಿಯ ಪ್ರಕಾರ ಸೆವೆನ್ ವಕ್ತಾರರು ಹೇಳಿದ್ದಾರೆ.

ಕಳೆದ ಒಂದು ವರ್ಷದಲ್ಲಿ ಆಸ್ಟ್ರೇಲಿಯಾ ಕೆಲ ದಿಗ್ಗಜ ಕ್ರಿಕೆಟ್​ ಆಟಗಾರರನ್ನು ಕಳೆದುಕೊಂಡಿದ್ದು, ಆರೋಗ್ಯದ ಬಗ್ಗೆ ಹೆಚ್ಚು ನಿಗಾವಹಿಸುವಂತೆ ಮಾಡಿದೆ. ಆಸ್ಟ್ರೇಲಿಯಾದ ದಿಗ್ಗಜ ಕ್ರಿಕೆಟಿಗ ಶೇನ್ ವಾರ್ನ್, ಆಂಟ್ರೋ ಸೈಮಂಡ್ಸ್, ಡೀನ್ ಜಾನ್ಸ್ ಅವರಂತಾ ಆಟಗಾರರನ್ನು ಕಳೆದ ಒಂದು ವರ್ಷದಲ್ಲಿ ಕಳೆದುಕೊಂಡಿದೆ.

RELATED ARTICLES

Related Articles

TRENDING ARTICLES