Wednesday, January 22, 2025

ಪಾಕಿಸ್ತಾನ್‌ ವಿರುದ್ಧ 506 ರನ್ ಕಲೆ ಹಾಕಿದ ಇಂಗ್ಲೆಂಡ್‌

ಇಂಗ್ಲೆಂಡ್‌ ಹಾಗೂ ಪಾಕಿಸ್ತಾನ್‌ ಮೊದಲ ಟೆಸ್ಚ್‌ ಮ್ಯಾಚ್‌ನಲ್ಲಿ ಆಂಗ್ಲರು ವಿಶ್ವದಾಖಲೆ ನಿರ್ಮಿಸಿದೆ. ಪಾಕಿಸ್ತಾನ ರಾವಲ್‌ಪಿಂಡಿಯಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ಮೊದಲ ದಿನದಾಟದಲ್ಲಿ ಕೇವಲ 75 ಓವರ್​ಗಳಲ್ಲಿ 506 ರನ್ ಕಲೆಹಾಕಿದೆ.

450 ಎಸೆತಗಳಲ್ಲಿ 506 ರನ್ ಬಾರಿಸುವ ಮೂಲಕ ಹೊಸ ವಿಶ್ವ ದಾಖಲೆ ನಿರ್ಮಿಸಿದೆ. ಈ ಹಿಂದೆ ಮೊದಲ ದಿನದಾಟದಲ್ಲಿ ಅತ್ಯಧಿಕ ರನ್ ಕಲೆಹಾಕಿದ ದಾಖಲೆ ಆಸ್ಟ್ರೇಲಿಯಾ ತಂಡದ ಹೆಸರಿನಲ್ಲಿತ್ತು. 1910 ರಲ್ಲಿ ಆಸ್ಟ್ರೇಲಿಯಾ ತಂಡವು ಸಿಡ್ನಿಯಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧ ಪಂದ್ಯದ ಮೊದಲ ದಿನದಾಟದಲ್ಲಿ ಬರೋಬ್ಬರಿ 494 ರನ್ ಕಲೆಹಾಕಿ ದಾಖಲೆ ನಿರ್ಮಿಸಿತ್ತು. ಇದೀಗ ಮೊದಲ ದಿನದಾಟದಲ್ಲಿ 506 ರನ್ ಬಾರಿಸುವ ಮೂಲಕ ಇಂಗ್ಲೆಂಡ್ ತಂಡವು 112 ವರ್ಷಗಳ ಹಳೆಯ ವಿಶ್ವ ದಾಖಲೆಯನ್ನು ಅಳಿಸಿ ಹಾಕಿದೆ.

RELATED ARTICLES

Related Articles

TRENDING ARTICLES