Friday, November 22, 2024

ಬಿಜೆಪಿಯಲ್ಲಿ ಕೆಲವು ವಿದ್ಯಮಾನ ನಡೆದಿವೆ, ರೌಡಿಗಳನ್ನ ಪಕ್ಷಕ್ಕೆ ಸೇರಿಸಿಕೊಳ್ಳುವ ಆಲೋಚನೆ ಇಲ್ಲ

ಬೆಂಗಳೂರು: ರಾಜ್ಯ ಬಿಜೆಪಿಗೆ ರೌಡಿಗಳು ಸೇರ್ಪಡೆ ಆಗುತ್ತಾರೆ ಎಂಬ ಬಗ್ಗೆ ಬಿಜೆಪಿ ಕಚೇರಿಯಲ್ಲಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ದೇಶದಲ್ಲಿ ಭಯೋತ್ಪಾದಕ ಚಟುವಟಿಕೆ, ನಕ್ಸಲ್ ಚಟುವಟಿಕೆಗಳನ್ನು ನಿಯಂತ್ರಣ ಮಾಡಿದ್ದಾರೆ. ಅದೆ ರೀತಿ ಬೇರೆ ಬೇರೆ ರಾಜ್ಯಗಳಲ್ಲಿ ಕೇಂದ್ರ ಯಾವ ರೀತಿ ನಿರ್ಧಾರ ತಗೊಂಡಿದೆ ಅಂತ ನೋಡಬೇಕು. ನಮ್ಮ ಪಕ್ಷ ಗೂಂಡಾ ಚಟುವಟಿಕೆ, ಭಯೋತ್ಪಾದನೆ, ಕ್ರಿಮಿನಲ್ ಚಟುವಟಿಕೆಗಳಿಗೆ ಆಸ್ಪದ ನೀಡಲ್ಲ. ನಮ್ಮ ಪಕ್ಷ ಇಂತವರನ್ನ ವಿರೋಧಿಸುತ್ತದೆ. ನಾನು ಇಲ್ಲದಿದ್ದಾಗ ಕೆಲವು ವಿದ್ಯಮಾನಗಳು ನಡಿದಿದೆ.
ಸೈಲೆಂಟ್ ಸುನೀಲನ ಜತೆ ಬಿಜೆಪಿ ನಾಯಕರು ವೇದಿಕೆ ಹಂಚಿಕೊಂಡವರಿಂದ ವಿವರಣೆ ಕೇಳಿದ್ದೇನೆ. ಮೊನ್ನೆ ಯಾವುದೋ ವೇದಿಕೆಯಲ್ಲಿ ಕಾರ್ಯಕ್ರಮದಲ್ಲಿದ್ದದ್ದನ್ನು ಗಮನಿಸಿದ್ದೇನೆ. ಅದರ ಬಗ್ಗೆ ಮಾಹಿತಿ ಪಡೆದುಕೊಂಡಿದ್ದೇನೆ. ಅವರಲ್ಲಿ ವಿವರಣೆ ಕೇಳಿದ್ದೇನೆ. ಯಾವುದೇ ಕಾರಣಕ್ಕೂ ಅಂತಹವರನ್ನು ಸೇರ್ಪಡೆ ಮಾಡಲ್ಲ ಎಂದು ಸ್ಪಷ್ಟಪಡಿಸಿದ್ದೇನೆ. ಫೈಟರ್ ರವಿ ಮಾತ್ರ ಅಲ್ಲ, ಎಲ್ಲಾ ರೌಡಿಗಳ ವಿವರಣೆಗಳನ್ನೂ ಪಡೆಯುತ್ತೇನೆ ಎಂದು ಬಿಜೆಪಿ ರಾಜ್ಯಧ್ಯಕ್ಷ ನಳೀನ ಕುಮಾರ್​ ಕಟೀಲ್ ಅವರು ಹೇಳಿದರು.

RELATED ARTICLES

Related Articles

TRENDING ARTICLES