Wednesday, December 25, 2024

ಮಕ್ಕಳಿಗೆ ವಿಷ ಉಣಿಸಿದ ಮಹಾ ತಾಯಿ..!

ಮಂಡ್ಯ : ಗಂಡನ ಅಕ್ರಮ ಸಂಬಂಧಕ್ಕೆ ಬೇಸತ್ತು 3 ಮಕ್ಕಳಿಗೆ ವಿಷ ಉಣಿಸಿ ಮಹಿಳೆ ನೇಣಿಗೆ ಶರಣಾದ ಘಟನೆ ಮಂಡ್ಯ ಜಿಲ್ಲೆ ಮದ್ದೂರಿನಲ್ಲಿ ನಡೆದಿದೆ.

ಉಸ್ನಾ ಕೌಸರ್ (30) ಮೂರು ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಶರಣಾದ ಮಹಿಳೆ. ಹಾರಿಸ್ (7), ಆಲಿಸಾ (4) ಅನಮ್ ಪಾತಿಮಾ (2) ಮೃತ ಮಕ್ಕಳು. ಕಣ್ಣೆದುರೇ ಮಕ್ಕಳು ಮೃತಪಟ್ಟ ಬಳಿಕ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಚನ್ನಪಟ್ಟಣದಲ್ಲಿ ಕಾರ್ ಮೆಕಾನಿಕ್ ಆಗಿದ್ದ ಅಖಿಲ್ ಅಹಮದ್. ಪರ ಸ್ತ್ರೀಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ. ಪರ ಸ್ತ್ರೀಯ ಬೆತ್ತಲೆ ಚಿತ್ರ ಹಾಗೂ ಅಖಿಲ್ ಅಹಮದ್ ಇದ್ದ ಫೋಟೋಗಳು ಪತ್ತೆಯಾಗಿದ್ದು, ಇದನ್ನು ಪ್ರಶ್ನೆ ಮಾಡಿದ್ದ ಕೌಸರ್. ಇದೇ ವಿಚಾರಕ್ಕೆ ಮನೆಯಲ್ಲಿ ನಡೆದಿದ್ದ ಜೋರು ಗಲಾಟೆ ನಡೆದಿದೆ. ನಂತರ ಇಬ್ಬರನ್ನು ಪೋಷಕರು ರಾಜಿ ಮಾಡಿದ್ದಾರೆ.

ಇಂದು ಉರುಫ್ ಹಿನ್ನೆಲೆ ಬೇಗ ಮನೆಗೆ ಬರ್ತೀನಿ ಎಂದು ಕೆಲಸಕ್ಕೆ‌ ಹೋಗಿದ್ದ ಅಖಿಲ್. ಬಳಿಕ ಕೌಸರ್ ಮತ್ತು ಅಖಿಲ್ ನಡುವೆ ಫೋನ್‌ನಲ್ಲಿ ಮತ್ತೆ ಜಗಳ ನಡೆದಿತ್ತು. ಖಾಸಗಿ ಕ್ಲಿನಿಕ್‌ನಲ್ಲಿ ಕೆಲಸ ಮಾಡುತ್ತಿದ್ದ ಕೌಸರ್. ಮನೆಗೆ ಬಂದು ಅನ್ನದಲ್ಲಿ ಮಕ್ಕಳಿಗೆ ವಿಷ ಹಾಕಿ ಬಳಿಕ ತಾನು ನೇಣಿಗೆ ಶರಣಾಗಿದ್ದು, ಅಖಿಲ್ ಅಹಮದ್ ಕೊಲೆ ಮಾಡಿದ್ದಾನೆ ಎಂದು ಕೌಸರ್ ಪೋಷಕರು ಆರೋಪ ವ್ಯಕ್ತಪಡಿಸಿದ್ದಾರೆ.

RELATED ARTICLES

Related Articles

TRENDING ARTICLES