Wednesday, January 22, 2025

ತುಳುವಿನಲ್ಲಿ ಇಂದು ಕಾಂತಾರ ರಿಲೀಸ್

ಕನ್ನಡದ ಕಾಂತಾರ ಸಿನಿಮಾ ಈಗ ತುಳು ಭಾಷೆಯಲ್ಲೂ ಕಮಾಲ್ ಮಾಡೋಕೆ ಬರ್ತಿದೆ. ನಟ-ನಿರ್ದೇಶಕ ರಿಷಬ್ ಶೆಟ್ಟಿ ಮೊಟ್ಟ ಮೊದಲ ಬಾರಿಗೆ ಈ ಮೂಲಕ ತುಳು ಭಾಷೆಯಲ್ಲೂ ಸಿನಿಮಾ ಮಾಡಿದಂತೆ ಆಗಿದೆ. ಆ ಖುಷಿಯನ್ನ ಕೂಡ ಈಗ ರಿಷಬ್ ಶೆಟ್ಟಿ ವೀಡಿಯೋ ಮೂಲಕ ಹಂಚಿಕೊಂಡಿದ್ದಾರೆ.

ಕನ್ನಡದಲ್ಲಿ ಅತೀ ಹೆಚ್ಚು ಮೆಚ್ಚುಗೆ ಗಳಿಸಿದ ಕಾಂತಾರ ದೇಶ-ವಿದೇಶದಲ್ಲೂ ಸಂಚಲನ ಸೃಷ್ಟಿಸಿತ್ತು. ಪರ ಭಾಷೆಯಲ್ಲೂ ತನ್ನದೇ ಮೋಡಿ ಮಾಡಿತ್ತು. ಆದರೆ, ತುಳುನಾಡಿನ ಕಾಂತಾರ ತುಳು ಭಾಷೆಯಲ್ಲಿಯೇ ಬಂದಿರಲಿಲ್ಲ. ಆದರೆ ಇಂದು ತುಳು ಭಾಷೆಯಲ್ಲೂ ಕಾಂತಾರ ರಿಲೀಸ್ ಆಗಿದೆ.

ತುಳುನಾಡಿನ ನಟ-ನಿರ್ದೇಶಕ ರಿಷಬ್ ಶೆಟ್ಟಿ ಇಲ್ಲಿವರೆಗೂ ಕನ್ನಡ ಸಿನಿಮಾಗಳನ್ನೆ ಮಾಡಿರೋದು. ಇಲ್ಲಿವರೆಗೂ ಒಂದೇ ಒಂದು ಪುಟ್ಟ ಚಿತ್ರವನ್ನೂ ತುಳು ಭಾಷೆಯಲ್ಲಿ ಮಾಡಿರೊದು ಇಲ್ವೇ ಇಲ್ಲ. ಆದರೆ, ಕಾಂತಾರ ಸಿನಿಮಾ ಆ ಒಂದು ಅವಕಾಶ ಮಾಡಿಕೊಟ್ಟಿದೆ.

RELATED ARTICLES

Related Articles

TRENDING ARTICLES