Friday, November 22, 2024

ಗುಳ್ಟು ನವೀನ್ ಈಸ್ ಬ್ಯಾಕ್.. ಹೇಗಿದೆ ಧರಣಿ ಮಂಡಲ..?

ಟ್ರೈಲರ್ ಹಾಗೂ ಸ್ಯಾಂಪಲ್ಸ್​ನಿಂದಲೇ ಭರವಸೆ ಮೂಡಿಸಿದ್ದ ಧರಣಿ ಮಂಡಲ ಮಧ್ಯದೊಳಗೆ ಸಿನಿಮಾ ಪ್ರೇಕ್ಷಕನ ನಿರೀಕ್ಷೆ ಹುಸಿಯಾಗಿಸಿಲ್ಲ. ಬಹಳ ದಿನಗಳ ನಂತ್ರ ಗುಳ್ಟು ನವೀನ್​ಗೆ ಬಿಗ್ ಬ್ರೇಕ್ ಕೊಟ್ಟಿದೆ. ಐಶಾನಿ ಶೆಟ್ಟಿಯ ಬೋಲ್ಡ್ ಪರ್ಫಾಮೆನ್ಸ್​ಗೆ ಸಿನಿಪ್ರಿಯ ಸ್ಟನ್ ಆಗಿದ್ದಾನೆ. ಹಾಗಾದ್ರೆ ಸಿನಿಮಾ ಹೇಗಿದೆ..? ಚಿತ್ರರಂಗದ ತಾರೆಯರು ಏನು ಹೇಳಿದ್ರು ಅಂತೀರಾ..? ನೀವೇ ಓದಿ.

  • ಡೈರೆಕ್ಟರ್ ಶ್ರೀಧರ್ ಶಿಕಾರಿಗೆ ಇಡೀ ಚಿತ್ರರಂಗ ಕ್ಲೀನ್ ಬೋಲ್ಡ್
  • ಐಶಾನಿ ಬೋಲ್ಡ್ ರೋಲ್.. ಸಿದ್ದು ಸರಕು ಮ್ಯಾಟರ್ ಜೋರು
  • ಏಕತಾನತೆ ಬ್ರೇಕ್ ಮಾಡಿದ ಯಶ್ ಶೆಟ್ಟಿ.. ಕರ್ಮದ ಫಲಾಫಲ

ಯೆಸ್.. ಈ ವಾರ ತೆರೆಕಂಡಿರೋ ಧರಣಿ ಮಂಡಲ ಮಧ್ಯದೊಳಗೆ ಸಿನಿಮಾ ಹತ್ತು ಹಲವು ವಿಶೇಷತೆಗಳಿಂದ ಡಿಫರೆಂಟ್ ಅನಿಸಿದೆ. ನೋಡುಗರಿಗೆ ನಿರೀಕ್ಷೆಗೂ ಮೀರಿ ರುಚಿಸಿದೆ. ತೆಲುಗಿನ ವೇದಂ ಚಿತ್ರದ ಜಾನರ್​ನ ಸಿನಿಮಾ ಆಗಿದ್ದು, ಸಸ್ಪೆನ್ಸ್ ಥ್ರಿಲ್​ನ ಚಿತ್ರದ ಓಪನಿಂಗ್​ನಿಂದ ಕ್ಲೈಮ್ಯಾಕ್ಸ್​ವರೆಗೂ ಕಾಯ್ದುಕೊಂಡು ಬಂದಿದೆ.

ಗುಳ್ಟು ಚಿತ್ರದ ಮೂಲಕ ಎಲ್ಲರ ಮನಗೆದ್ದಿದ್ದ ನಟ ನವೀನ್ ಶಂಕರ್, ಬಹಳ ದಿನಗಳ ಬಳಿಕ ಮತ್ತೆ ಅದಕ್ಕಿಂತ ದೊಡ್ಡ ಹಿಟ್ ಕೊಡೋ ಅಂತಹ ಸಿನಿಮಾದಿಂದ ಭರ್ಜರಿ ಕಂಬ್ಯಾಕ್ ಮಾಡಿದ್ದಾರೆ. ಶ್ರೀಧರ್ ಶಿಕಾರಿಪುರ ಅನ್ನೋ ನಿರ್ದೇಶಕ ತನ್ನ ಡೈರೆಕ್ಷನ್ ಸ್ಕಿಲ್ಸ್​ನ ಅದ್ಭುತವಾಗಿ ಎಕ್ಸ್​ಪ್ಲೋರ್ ಮಾಡಿದ್ದಾರೆ. ಕಥೆ, ಪಾತ್ರಗಳು, ಮೇಕಿಂಗ್​ನಿಂದ ಶ್ರೀಧರ್ ಅವ್ರ ಶಿಕಾರಿ ಕಂಡು ಪ್ರೇಕ್ಷಕ ಪ್ರಭು ಸ್ಟನ್ ಆಗಿದ್ದಾನೆ.

ನಾಲ್ಕೈದು ಕಥೆಗಳು, ಹತ್ತಾರು ಪಾತ್ರಗಳು, ಹಲವು ಆಯಾಮಗಳು. ಎಲ್ಲವನ್ನೂ ಒಂದೇ ಸಿನಿಮಾದಲ್ಲಿ ಹೇಳೋ ಪ್ರಯತ್ನ ಮಾಡಿದ್ದಾರೆ. ಪ್ರೀತಿ, ಸ್ನೇಹ, ಕೌಟುಂಬಿಕ ಮೌಲ್ಯಗಳು, ವೃತ್ತಿ ಧರ್ಮ, ಪೊಲೀಸ್ ವ್ಯವಸ್ಥೆ ಹೀಗೆ ಸಾಮಾನ್ಯ ವಿಷಯಗಳನ್ನ ಅಸಾಮಾನ್ಯವಾಗಿ ತೋರಿಸೋ ಪ್ರಯತ್ನ ಮಾಡಿದ್ದಾರೆ.

ಈ ಸಿನಿಮಾ ನೋಡ್ತಿದ್ರೆ ನೀವೂ ಒಂದು ಪಾತ್ರವಾಗಿ ಕ್ಯಾರಿ ಆಗ್ತೀರಿ. ಸಿಟಿಯಲ್ಲಿ ನಡೆಯೋ ಒಂದಷ್ಟು ಘಟನೆಗಳೇ ಈ ಚಿತ್ರದ ಕಥಾವಸ್ತು. ಬಡವ- ಶ್ರೀಮಂತ, ಹಳ್ಳಿಯವ- ಸಿಟಿಯವ, ಕಳ್ಳ- ಪೊಲೀಸ್, ಪ್ರೀತಿ ಪಡೆದವ- ಭಗ್ನ ಪ್ರೇಮಿ, ಹಣಕ್ಕಾಗಿ ಮಗಳನ್ನೇ ಮಾರಿಕೊಳ್ಳುವವ ಹೀಗೆ ತರಹೇವಾರಿ ಪಾತ್ರಗಳನ್ನ ಬಹಳ ಸೊಗಸಾಗಿ ಕಟ್ಟಿಕೊಡಲಾಗಿದೆ.

ಪಾಪಪ್ರಜ್ಞೆ, ಪಶ್ಚತ್ತಾಪ, ಮಾನವೀಯ ಮೌಲ್ಯಗಳ ನೆಲೆಗಟ್ಟಿನಲ್ಲಿ ಕ್ಲೈಮ್ಯಾಕ್ಸ್ ಗಮನ ಸೆಳೆಯಲಿದೆ. ಒಳ್ಳೆಯದನ್ನ ಮಾಡಿದವ್ರಿಗೆ ಒಳ್ಳೆಯದೇ ಆಗುತ್ತೆ ಅಂತಾರೆ. ಅದೇ ರೀತಿ ಕೆಟ್ಟದ್ದನ್ನ ಮಾಡಿದವ್ರಿಗೂ ಕರ್ಮ ರಿಟರ್ನ್​ ಆಗುತ್ತೆ ಅನ್ನೋದು ಚಿತ್ರದ ಎಳೆಯಾಗಿದೆ. ಕತ್ತಲಾದ ಮೇಲೆ ಸಿಟಿಯೊಂದರಲ್ಲಿ ಏನೆಲ್ಲಾ ನಡೆಯುತ್ತೆ ಅನ್ನೋದ್ರ ಜೊತೆ ಇಂದಿನ ಯೂತ್ ಡ್ರಗ್ಸ್​ಗೆ ಹೇಗೆ ಅಡಿಕ್ಟ್ ಆಗ್ತಿದೆ..? ಅವ್ರ ಮನಸ್ಥಿತಿ, ಪರಿಸ್ಥಿತಿಗಳು ಏನು ಅನ್ನೋದು ಕೂಡ ಎಳೆ ಎಳೆಯಾಗಿ ಬಿಚ್ಚಿಡಲಾಗಿದೆ.

ನವೀನ್ ಶಂಕರ್ ಒಬ್ಬ ಕಿಕ್ ಬಾಕ್ಸರ್ ಪ್ಲೇಯರ್ ಆಗಿ ಕಾಣಸಿಗಲಿದ್ದು, ಅವ್ರೊಟ್ಟಿಗೆ ಯಶ್ ಶೆಟ್ಟಿ ಎಂದಿನಂತೆ ತಮ್ಮ ನೆಗೆಟಿವ್ ಶೇಡ್​ನ ಬ್ರೇಕ್ ಮಾಡಿ ಒಂದೊಳ್ಳೆ ಪಾತ್ರ ನಿರ್ವಹಿಸಿದ್ದಾರೆ. ಇನ್ನು ಐಶಾನಿ ಶೆಟ್ಟಿ ಬೋಲ್ಡ್ ಆ್ಯಕ್ಟಿಂಗ್ ಚಿತ್ರದ ಗಮ್ಮತ್ತು ಹೆಚ್ಚಿಸಿದೆ. ಸಿದ್ದು ಮೂಲಿಮನಿಯ ನಟನಾ ತಾಕತ್ತು ಈ ಚಿತ್ರದಲ್ಲಿ ಹೊರಬರುವಂತಹ ಪಾತ್ರದಲ್ಲಿ ಕಮಾಲ್ ಮಾಡಿದ್ದಾರೆ. ಯಾಕಂದ್ರೆ ಇವರೆಲ್ಲಾ ಪಾತ್ರಗಳು ನಟನೆಯಂತೆ ಭಾಸವಾಗುತ್ತಿಲ್ಲ. ಸಹಜ ಹಾಗೂ ಸ್ವಾಭಾವಿಕವಾಗಿ ಕಾಣ ಸಿಗುತ್ತವೆ.

ಸುಕ್ಕಾ ಸೂರಿ, ದುನಿಯಾ ವಿಜಯ್, ಪ್ರಶಾಂತ್ ನೀಲ್ ಸಿನಿಮಾಗಳಲ್ಲಿ ಮಾತ್ರ ಪಾತ್ರಗಳ ಹೆಸರು ಡಿಫರೆಂಟ್ ಅಂದುಕೊಂಡಿದ್ದವ್ರಿಗೆ ಇಲ್ಲಿ ಕೂಡ ಆ ವಿಶೇಷತೆ ಕಾಣುತ್ತೆ. ಪ್ಯಾರಚೂಟ್, ತುರ್ಕೆ, ಸ್ಲೋಮೋಷನ್ ಸೀನ, ಮರ್ಯಾದೆ ರಾಮಣ್ಣ ಹೀಗೆ ನಟನೆ ಜೊತೆ ನಾಮಧೇಯಗಳು ಕೂಡ ಕಾಡಲಿವೆ. ಇನ್ನು ರೋಣದ ಬಕ್ಕೇಶ್ ಹಾಗೂ ಕಾರ್ತಿಕ್ ಸಂಗೀತ, ಹಿನ್ನೆಲೆ ಸಂಗೀತ ಚಿತ್ರಕ್ಕೆ ಪ್ಲಸ್ ಆಗಿದೆ. ಉಜ್ವಲ್ ಸಂಕಲನ, ಕೀರ್ತನ್ ಪೂಜಾರಿ ಕ್ಯಾಮೆರಾ ವರ್ಕ್​, ನಿತಿನ್ ಶಿವಮೊಗ್ಗ VFX ಪ್ರಜ್ವಲಿದುತ್ತಿದೆ. ರಿಲೀಸ್​ಗೂ ಮುನ್ನ ಚಿತ್ರರಂಗದ ತಾರೆಯರು ಪ್ರೀಮಿಯರ್​ನಲ್ಲೇ ಚಿತ್ರಕ್ಕೆ ಬಹುಪರಾಕ್ ಎಂದಿದ್ದಾರೆ.

ಒಟ್ಟಾರೆ ಧರಣಿ ಮಂಡಲ ಮಧ್ಯದೊಳಗೆ ಚಿತ್ರಕ್ಕೆ ಪವರ್ ಟಿವಿ 5ಕ್ಕೆ 4 ಸ್ಟಾರ್ ರೇಟಿಂಗ್ ನೀಡುತ್ತಿದ್ದು, ಈ ಸಿನಿಮಾನ ಥಿಯೇಟರ್​ನಲ್ಲೇ ಎಕ್ಸ್​ಪೀರಿಯೆನ್ಸ್ ಮಾಡಿ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES