Wednesday, January 22, 2025

ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಗೆ ಗುರಿ ಇಟ್ಟ ಕನಕಪುರ ಬಂಡೆ

ಬೆಂಗಳೂರು : ಜನಾಕ್ರೋಶಕ್ಕೆ ಗುರಿಯಾಗಿರೋ ಕಮಲ ಪಾಳಯ, ಮತದಾರರ ಮನ ಗೆಲ್ಲಲು ಜನ ಸಂಕಲ್ಪ ಯಾತ್ರೆ ನಡೆಸ್ತಿದೆ. ಮೂರು ಟೀಂಗಳಾಗಿ ರಾಜ್ಯಾದ್ಯಂತ ಪ್ರವಾಸ ಮಾಡ್ತಾ ಇದ್ದಾರೆ‌‌.. ಬಿಜೆಪಿಗೆ ಸೆಡ್ಡು ಹೊಡೆದಿರೋ ಕಾಂಗ್ರೆಸ್ ನಾಯಕರು, ಡಿಸೆಂಬರ್ 10 ನೇ ತಾರೀಖು ಕಲ್ಬುರ್ಗಿಯಲ್ಲಿ ಎಸ್‌ಸಿ/ಎಸ್‌ಟಿ ಸಮಾವೇಶ ನಡೆಸ್ತಿದೆ. ಅದರ ಬೆನ್ನಲ್ಲೇ ಫೆಬ್ರವರಿಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಬೃಹತ್ ಓಬಿಸಿ ಸಮಾವೇಶ ನಡೆಸಲು ಕಾಂಗ್ರೆಸ್ ನಾಯಕರು ತೀರ್ಮಾನ ಮಾಡಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತವರು ಜಿಲ್ಲೆ ಕಲ್ಬುರ್ಗಿಯಲ್ಲಿ ಸುಮಾರು 10 ಲಕ್ಷ ಜನ ಸೇರಿಸಿ ಬಿಜೆಪಿಗೆ ಕೌಂಟರ್ ಕೊಡಲು ತೀರ್ಮಾನಿಸಿದ್ದಾರೆ. ಅದೇ ರೀತಿ ಫೆಬ್ರವರಿಯಲ್ಲಿ ಶಿವಮೊಗ್ಗದಲ್ಲಿ ನಡೆಯಲಿರುವ ಹಿಂದುಳಿದ ವರ್ಗಗಳ ಸಮಾವೇಶಕ್ಕೂ 10 ಲಕ್ಷ ಮಂದಿ ಸೇರಿಸೋ ಚಿಂತನೆ ನಡೆಸಿದ್ದಾರೆ. ಓಬಿಸಿ ಸಮಾವೇಶದ ಉಸ್ತುವಾರಿಯನ್ನ ಕೆಪಿಸಿಸಿ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ ಹೆಗಲಿಗೆ ನೀಡಲಾಗಿದೆ.

ಎಸ್‌ಸಿ, ಎಸ್‌ಟಿ ಸಮಾವೇಶ, ಓಬಿಸಿ ಸಮಾವೇಶ ಮೂಲಕ ಬಿಜೆಪಿ ನಾಯಕರ ಯಾತ್ರೆಗಳಿಗೆ ಟಕ್ಕರ್ ಕೊಡೋದಕ್ಕೆ ಮಾತ್ರ ಡಿ‌.ಕೆ ಶಿವಕುಮಾರ್ ಪ್ಲಾನ್ ಮಾಡಿಲ್ಲ‌.. ಸಿದ್ದರಾಮಯ್ಯ ಹಾಗೂ ಅವ್ರ ಟೀಂನ ಅಹಿಂದ ಜಪಕ್ಕೂ ಕನಕಪುರ ಬಂಡೆ ಕೌಂಟರ್ ಕೊಡಲಿದೆ. ಈ ಹಿಂದೆ ಅಹಿಂದ ಸಮಾವೇಶ ನಡೆಸಲು ಭಾರೀ ಕಸರತ್ತು ನಡೆಸಿದ್ದ ಸಿದ್ದರಾಮಯ್ಯ, ಹೈಕಮಾಂಡ್ ನಿಂದ ಗ್ರೀನ್ ಸಿಗ್ನಲ್ ಸಿಗದಿದ್ದಕ್ಕೆ ಸೈಲೆಂಟ್ ಆಗಿದ್ರು..ಈಗ ಎಸ್‌ಸಿ, ಎಸ್‌ಟಿ ಹಾಗೂ ಓಬಿಸಿ ಸಮಾವೇಶಗಳನ್ನ ಪ್ರತ್ಯೇಕವಾಗಿ ನಡೆಸಿ, ಪಕ್ಷಕ್ಕಿಂತ ವ್ಯಕ್ತಿ ಮುಖ್ಯವಲ್ಲ ಎಂಬ ಸಂದೇಶವನ್ನ ಪ್ರಬಲವಾಗಿ ರವಾನೆ ಮಾಡೋದಕ್ಕೆ ಮುಂದಾಗಿದ್ದಾರೆ. ಕಲ್ಬುರ್ಗಿಯಲ್ಲಿ ಸಮಾವೇಶ ನಡೆಯೋ ಜಾಗಕ್ಕೆ ಡಿ.ಕೆ ಶಿವಕುಮಾರ್ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ರು. ಡಿ.ಕೆ ಶಿವಕುಮಾರ್, ಪರಮೇಶ್ವರ್ ನೇತೃತ್ವದಲ್ಲಿ ನಡೆಯಲಿರುವ ಸಮಾವೇಶಗಳ ಬಗ್ಗೆ ಸಿದ್ದರಾಮಯ್ಯನವ್ರು ಅಷ್ಟಾಗಿ ಇಂಟ್ರೆಸ್ಟ್ ತೋರುತ್ತಿಲ್ಲ.

ರೌಡಿಗಳನ್ನು ಬಿಜೆಪಿ ಪಕ್ಷಕ್ಕೆ ಸೇರಿಕೊಳ್ಳೋ ವಿಚಾರದ ಬಗ್ಗೆ ಡಿ.ಕೆ.ಶಿವಕುಮಾರ್ ಗುಡುಗಿದ್ದಾರೆ. ಅವ್ರ ಮನೆಯಲ್ಲಿನ ಹೆಗ್ಗಣ ಬಿಟ್ಟು ಬೇರೆ ಕಡೆ ಹೆಗ್ಗಣ ತೋರಿಸುತ್ತಿದ್ದಾರೆ. ಅವರಿಗೆ ಕಾರ್ಯಕರ್ತರು ಇಲ್ಲ, ಹೀಗಾಗಿ ರೌಡಿಗಳನ್ನು ಸೇರಿಸಿಕೊಳ್ಳುತ್ತಿದ್ದಾರೆ.. ಬಿಜೆಪಿಯಲ್ಲಿ ಅನೇಕ ಗುಂಪುಗಳಿವೆ. ಶೆಟ್ಟರ ಗುಂಪು, ಸದಾನಂದಗೌಡರ ಗುಂಪು, ಯತ್ನಾಳ ಗುಂಪು ಸೇರಿದಂತೆ ಅನೇಕ ಗುಂಪುಗಳಿವೆ. ಇದು ಬಿಜೆಪಿ ಸರ್ಕಾರವಲ್ಲ, ಅದು ಗುಂಪುಗಳ ಸಮ್ಮಿಶ್ರ ಸರ್ಕಾರ ಎಂದ್ರು.

ಇನ್ನು ಕಾಂಗ್ರೆಸ್‌ನ ಎಸ್‌ಸಿ, ಎಸ್ಟಿ, ಓಬಿಸಿ ಸಮಾವೇಶಗಳಲ್ಲಿ ಬಿಜೆಪಿ, ಜೆಡಿಎಸ್‌ನ ಕೆಲವು ಮುಖಂಡರು ಕೈ ಹಿಡಿಯೋ ಸಾಧ್ಯತೆ ಇದೆ. ಡಿಸೆಂಬರ್ ಹಾಗೂ ಜನವರಿ ತಿಂಗಳಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಎರಡು ಟೀಂಗಳಾಗಿ ರಾಜ್ಯ ಪ್ರವಾಸ ಮಾಡೋದಕ್ಕೂ ತೀರ್ಮಾನವಾಗಿದೆ‌. ಅದೇನೇ ಇದ್ರೂ ಬಿಜೆಪಿಯ ಜನ ಸಂಕಲ್ಪ ಯಾತ್ರೆಗಳಿಗೆ ಟಕ್ಕರ್ ಕೊಡ್ತಾ ಕೊಡ್ತಾನೇ ಸಿದ್ದರಾಮಯ್ಯನವ್ರ ಅಹಿಂದ ಜಪಕ್ಕೆ ಫುಲ್ ಸ್ಟಾಪ್ ಇಡಲು ಡಿ.ಕೆ ಶಿವಕುಮಾರ್ ರಣತಂತ್ರ ರೂಪಿಸಿದ್ದಾರೆ.

ಆನಂದ್ ನಂದಗುಡಿ ಸ್ಪೆಶಲ್ ಕರೆಸ್ಪಾಂಡೆಂಟ್ ಪವರ್ ಟಿವಿ

RELATED ARTICLES

Related Articles

TRENDING ARTICLES