ಬೆಂಗಳೂರು : ಪಾರಿವಾಳ ಹಿಡಿಯಲು ಹೋಗಿ ಹೈ ಟೆನ್ಷನ್ ವೈರ್ ತಗುಲಿದ ಘಟನೆ ವಿಜಯಾನಂದ ನಗರದಲ್ಲಿ ನಡೆದಿದೆ.
ಪಾರಿವಾಳ ಹಿಡಿಯಲು ಹೋಗಿ ಪ್ರಾಣಕ್ಕೆ ಸಂಚಕಾರ ಆಗಿದ್ದು, ಸಾವು-ಬದುಕಿನ ಮಧ್ಯೆ ಇಬ್ಬರು ಮಕ್ಕಳ ಹೋರಾಟ ಮಾಡುತ್ತಿದ್ದಾರೆ. ಸುಪ್ರೀತ್ (10), ಚಂದನ್ (11) ಪರಿಸ್ಥಿತಿ ಚಿಂತಾಜನಕವಾಗಿದೆ.
ಇನ್ನು, ಮನೆ ಮೇಲೆ ಪಾರಿವಾಳ ಹಿಡಿಯಲು ಹೋಗಿದ್ದ ಮಕ್ಕಳು, ಮನೆ ಮೇಲಿದ್ದ ಕಬ್ಬಿಣದ ರಾಡ್ ಹಿಡಿದಿದ್ದಕ್ಕೆ ಶಾಕ್ ತಗುಲಿದೆ. ಸ್ಥಳಕ್ಕೆ ಸಚಿವ ಗೋಪಾಲಯ್ಯ ಭೇಟಿ ನೀಡಿದ್ದು, ಸದ್ಯ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮಕ್ಕಳಿಗೆ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.