Sunday, December 22, 2024

ಬೆಂಗಳೂರಿನಲ್ಲಿ ಹಾವಳಿ ಇಟ್ಟ ಚಿರತೆ

ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ಚಿರತೆ ಹಾವಳಿ ಶುರುವಾಗಿದೆ. ಮೈಸೂರು, ಬೆಳಗಾವಿಯಲ್ಲಿ ಆರ್ಭಟಿಸುತ್ತಿದ್ದ ಚಿರತೆಗಳು, ಇದೀಗ ಸಿಲಿಕಾನ್ ಸಿಟಿಗೆ ಲಗ್ಗೆ ಇಟ್ಟಿವೆ.

ಬೆಂಗಳೂರು ನಗರದ ನಾಲ್ಕು ಪ್ರದೇಶಗಳಲ್ಲಿ ಚಿರತೆಗಳು ಕಾಣಸಿಕ್ಕಿವೆ. ಹೀಗಾಗಿ, ಬೆಂಗಳೂರು ನಗರದ ಹೊರ ವಲಯದ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಕೆಂಗೇರಿ, ಕುಂಬಳಗೋಡು, ದೇವನಹಳ್ಳಿ, ಚಿಕ್ಕಜಾಲ, ತುರಹಳ್ಳಿ ಅರಣ್ಯ ಸೇರಿದಂತೆ ಹಲವೆಡೆ ಚಿರತೆಗಳು ಕಾಣ ಸಿಕ್ಕಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಅರಣ್ಯ ಇಲಾಖೆ ಹೈ ಅಲರ್ಟ್‌ ಆಗಿದೆ. ಈ ನಡುವೆ, ಕೆಂಗೇರಿಯ ಬಿಜಿಎಸ್ ಆಸ್ಪತ್ರೆ ಹಿಂಭಾಗದ ಗೇಟ್ ಬಳಿ ಗುರುವಾರ ಮುಂಜಾನೆ ಜಿಂಕೆಯ ಮೃತ ದೇಹ ಪತ್ತೆಯಾಗಿದೆ. ಚಿರತೆ ದಾಳಿಯಿಂದಲೇ ಜಿಂಕೆ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಸಮೀಪದಲ್ಲೇ ಇರುವ ತುರಹಳ್ಳಿ ಅರಣ್ಯದಲ್ಲಿ ಚಿರತೆಗಳು ಇರುವ ಶಂಕೆ ಇದೆ.

RELATED ARTICLES

Related Articles

TRENDING ARTICLES