Monday, December 23, 2024

ನಟ ವಸಿಷ್ಠ ಸಿಂಹ ಜತೆಗೆ ನಿಶ್ಚಿತಾರ್ಥ ಮಾಡಿಕೊಂಡ ನಟಿ ಹರಿಪ್ರಿಯಾ

ಬೆಂಗಳೂರು: ಸ್ಯಾಂಡಲ್‌ವುಡ್ ನಟಿ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎನ್ನುವ ಗಾಸಿಫ್​ ಸುದ್ದಿಗಳು ಕೇಳಬಂದ ಬೆನ್ನಲ್ಲೇಯಲ್ಲಿ ಇಂದು ನಟಿ ಹರಿಪ್ರಿಯಾ ಜೊತೆ ನಟ ವಸಿಷ್ಠ ಸಿಂಹ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಇಂದು ಬೆಂಗಳೂರಿನ ಆರ್ ಆರ್ ನಗರದಲ್ಲಿರುವ ನಟಿ ಹರಿಪ್ರಿಯಾ ನಿವಾಸದಲ್ಲಿ ಬೆಳಗ್ಗೆ ಪರಸ್ಪರ ಉಂಗುರ ಬದಲಿಸಿಕೊಂಡು ನಿಶ್ಚಿತಾರ್ಥ ಮಾಡಿಕೊಂಡರು. ಈ ಜೋಡಿಗಳು ಮುಂದಿನ ಜನೆವರಿಯಲ್ಲಿ ಹೊಸ ಬಾಳಿಗೆ ಕಾಲಿಡಲಿದ್ದಾರೆ.

ಇತ್ತೀಚಿಗೆ ಈ ಜೋಡಿಗಳು ಪರಸ್ಪರ ಕೈ ಕೈ ಹಿಡಿದುಕೊಂಡು ದುಬೈನಲ್ಲಿ ಓಡಾಡಿದ್ದರು. ಅಲ್ಲದೇ, ಹರಿಪ್ರಿಯಾ ಅವರ ಮೂಗು ಚುಚ್ಚಿಸಿಕೊಳ್ಳುವ ವಿಡಿಯೋದಲ್ಲಿ ವಸಿಷ್ಠ ಸಿಂಹ ಅವರು ಸಮಾಧಾನಪಡಿಸುವ ಮತ್ತು ಕಣ್ಣೀರು ಒರೆಸಿರುವ ವಿಡಿಯೋ ವೈರಲ್ ಆಗಿದ್ದವು.

RELATED ARTICLES

Related Articles

TRENDING ARTICLES