Saturday, January 4, 2025

ಅಂಬಿ ಮನೆಯಲ್ಲಿ ಶುಭಕಾರ್ಯ.. ಹೊಸಬಾಳಿನತ್ತ ಅಭಿ

ಸ್ಯಾಂಡಲ್​ವುಡ್ ಅಂಗಳದಲ್ಲಿ ಸಾಲು ಸಾಲು ಮದುವೆ ಶುಭಕಾರ್ಯಗಳು ನಡೀತಿವೆ. ಅದಿತಿ ಯಶಸ್ವಿ ಕಲ್ಯಾಣದ ಬೆನ್ನಲ್ಲೇ ವಸಿಷ್ಠ ಸಿಂಹ- ಹರಿಪ್ರಿಯಾ ಮದ್ವೆ ಮುನ್ನೆಲೆಗೆ ಬಂತು. ಇದೀಗ ಯಂಗ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಸರತಿ. ಯೆಸ್.. ಅಂಬರೀಶ್ ಮನೆಯಲ್ಲೂ ಶುಭಕಾರ್ಯ ನಡೆಯಲಿದೆ. ಇಷ್ಟಕ್ಕೂ ಜೂನಿಯರ್ ಅಂಬಿ ಕೈ ಹಿಡಿಯುತ್ತಿರೋ ಪೋರಿ ಯಾರು..? ಆಕೆಯ ಹಿನ್ನೆಲೆ ಏನು..? ಎಂಗೇಜ್​ಮೆಂಟ್ ಯಾವಾಗ ಅನ್ನೋದ್ರ ಡಿಟೈಲ್ಡ್ ರಿಪೋರ್ಟ್​ ನೀವೇ ಓದಿ.

  • ಡಿ -11ಕ್ಕೆ ನಿಶ್ಚಿತಾರ್ಥ.. ಅಭಿ ಪ್ರೇಯಸಿ ಯಾರು ಗೊತ್ತಾ..?

ಕಲಿಯುಗದ ಕರ್ಣ, ರೆಬೆಲ್ ಸ್ಟಾರ್ ಅಂಬರೀಶ್ ತನ್ನ ಮಗ ಹೀರೋ ಆಗಬೇಕು ಅಂತ ಬಯಸಿದ್ರು. ಆದ್ರೆ ಯಂಗ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಚೊಚ್ಚಲ ಚಿತ್ರ ಅಮರ್ ರಿಲೀಸ್​ಗೂ ಮೊದಲೇ ಇಹಲೋಕ ತ್ಯಜಿಸಿದ್ರು ಅಂಬಿ. ಇದ್ರಿಂದ ಇಡೀ ಅಂಬಿ ಫ್ಯಾಮಿಲಿ ಶೋಕಸಾಗರದಲ್ಲಿ ಮುಳುಗಿತು. ಆದ್ರೆ ಅಂಬಿಯ ಆ ಆಶಯ, ಗತ್ತು, ಗಮ್ಮತ್ತನ್ನ ರಾಜಕಾರಣ ಮತ್ತು ಸಿನಿಮಾ ಎರಡೂ ಕ್ಷೇತ್ರಗಳಲ್ಲಿ ಮುಂದುವರಿಸೋ ಮಹತ್ವದ ಕಾರ್ಯಕ್ಕೆ ಕೈಹಾಕಿದ್ದು ಸುಮಲತಾ ಅಂಬರೀಶ್ ಮತ್ತು ಅಭಿಷೇಕ್.

ಮಂಡ್ಯ ಕ್ಷೇತ್ರದಿಂದ ಎಂ.ಪಿ. ಎಲೆಕ್ಷನ್​ಗೆ ನಿಂತ ಸುಮಲತಾ, ನಿರೀಕ್ಷೆಯಂತೆ ಗೆದ್ದು, ಸಂಸದೆಯಾಗಿ ಪಾರ್ಲಿಮೆಂಟ್ ಮೆಟ್ಟಿಲೇರಿದ್ರು. ಅಂಬಿಯನ್ನ ಕಳೆದುಕೊಂಡು ದುಃಖದಲ್ಲಿದ್ದ ಕುಟುಂಬಕ್ಕೆ ಈ ರಾಜಕೀಯ ಗೆಲುವು ಆಶಾಭಾವನೆ ಮೂಡಿಸಿತು. ಜೊತೆಗೆ ಆಶ್ಮವಿಶ್ವಾಸ ಕೂಡ ತುಂಬಿತು. ಅಭಿ ಕೂಡ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಿಂದ ಚಿತ್ರರಂಗದಲ್ಲಿ ಬ್ಯುಸಿಯಾಗೋ ಮೂಲಕ ಸಕ್ರಿಯವಾದರು.

ಇದೀಗ ರೆಬೆಲ್ ಸ್ಟಾರ್ ಕುಟುಂಬದಲ್ಲಿ ಶುಭಕಾರ್ಯದ ಶುಭ ಸೂಚನೆ ಸಿಕ್ಕಿದೆ. ಅಭಿಷೇಕ್ ಅಂಬರೀಶ್, ತಮ್ಮ ಬ್ಯಾಚಲರ್ ಲೈಫ್​ಗೆ ಗುಡ್​ಬೈ ಹೇಳಿ, ಸಪ್ತಪದಿ ತುಳಿಯೋ ಮೂಲಕ ಹೊಸಬಾಳಿಗೆ ಕಾಲಿಡೋಕೆ ಸಜ್ಜಾಗಿದ್ದಾರೆ. ಅಧಿಕೃತ ಮೂಲಗಳ ಪ್ರಕಾರ ಇದೇ ಡಿಸೆಂಬರ್ 11ಕ್ಕೆ ನಿಶ್ಚಿತಾರ್ಥ ಕೂಡ ನಡೆಯಲಿದ್ದು, ಬಿಗ್​​​ ಸರ್​ಪ್ರೈಸ್​ನೊಂದಿಗೆ ಗುಡ್​ನ್ಯೂಸ್ ಕೊಡಲಿದ್ದಾರೆ. ಇಷ್ಟಕ್ಕೂ ಆ ಅದೃಷ್ಟವಂತೆ ಯಾರು ಅಂತೀರಾ..? ಮುಂದೆ ನೀವೇ ಓದಿ.

  • ಫ್ಯಾಷನ್ ಲೋಕದ ಗೊಂಬೆ ಅವಿವಾ ಜೊತೆ ಅಭಿ ಎಂಗೇಜ್
  • ಅವಿವಾ ಕೊರಳಲ್ಲಿ ಅಭಿ ಪೆಂಡೆಂಟ್.. ಎಷ್ಟು ವರ್ಷದ ಲವ್..?

ಯೆಸ್.. ಅಭಿ ಕೈ ಹಿಡಿಯುತ್ತಿರೋ ಈ ಚೆಲುವೆ ಬೇರಾರೂ ಅಲ್ಲ, ಖ್ಯಾತ ಫ್ಯಾಷನ್ ಗುರು ಪ್ರಸಾದ್ ಬಿದ್ದಪ್ಪ ಪುತ್ರಿ ಅವಿವಾ ಬಿದ್ದಪ್ಪ. ಅಪ್ಪನಂತೆ ತಾನೂ ಫ್ಯಾಷನ್ ಲೋಕದ ಮಾನ್​ಸ್ಟರ್ ಆಗಿ ಗುರ್ತಿಸಿಕೊಂಡಿರೋ ಈ ಬ್ಯೂಟಿ, ಸಾವಿರಾರು ಮಾಡೆಲ್​ಗಳ ಹಿಂದಿನ ಮಾಸ್ಟರ್​ಮೈಂಡ್. ಸದಾಶಿವನಗರ ಮೂಲದ ಈಕೆ ಅಭಿಷೇಕ್​ಗಿಂತ ವಯಸ್ಸಲ್ಲಿ ಮೂರು ವರ್ಷ ಹಿರಿಯಳು ಎನ್ನಲಾಗ್ತಿದೆ. ಆದ್ರೂ ಸಹ ಅಭಿ- ಅವಿವಾ ಸುಮಾರು ನಾಲ್ಕೈದು ವರ್ಷಗಳಿಂದ ಪ್ರೀತಿಯಲ್ಲಿದ್ದಾರೆ ಅನ್ನೋದು ಸರ್​ಪ್ರೈಸ್.

ಅವಿವಾ ಬಿದ್ದಪ್ಪ ಜಸ್ಟ್ ಫ್ಯಾಷನ್ ಡಿಸೈನರ್ ಅಷ್ಟೇ ಅಲ್ಲ. ನಟಿ ಕೂಡ ಹೌದು. ಅಲೆ ಅನ್ನೋ ಚಿತ್ರದಲ್ಲಿ ಒನ್ ಆಫ್ ದಿ ನಟೀಮಣಿಯಾಗಿ ಬಣ್ಣ ಹಚ್ಚಿದ್ರು. ತನುಷ್ ಹಾಗೂ ಹರ್ಷಿಕಾ ಲೀಡ್​ನಲ್ಲಿದ್ದ ಅಲೆ ಚಿತ್ರದಲ್ಲಿ ಅವಿವಾ ಕೂಡ ಪ್ರಮುಖ ಪಾತ್ರದಲ್ಲಿ ಬಣ್ಣ ಹಚ್ಚಿದ್ದರು. ಅದ್ಯಾಕೋ ಅದಾದ ಬಳಿಕ ಮತ್ತೆ ನಟನೆಯಿಂದ ದೂರ ಉಳಿದಿದ್ರು ಅವಿವಾ.

ನಟನೆಯಿಂದ ದೂರವಿದ್ರೂ, ಸ್ಟಾರ್ ಆಗಿ ಶೈನ್ ಆಗ್ತಿರೋ ಅಭಿಷೇಕ್ ಜೊತೆ ಪ್ರೀತಿಯಲ್ಲಿದ್ದರು ಅವಿವಾ. ಹೌದು.. ಅಭಿಷೇಕ್ ಅನ್ನೋ ಹೆಸರಿನ ಪೆಂಡೆಂಟ್​ನ ತನ್ನ ಕೊರಳಿಲ್ಲಿರೋ ಚಿನ್ನದ ಸರದಲ್ಲಿ ಹಾಕಿಕೊಂಡಿದ್ದಾರೆ ಅವಿವಾ. ಅದು ಸಾಕಷ್ಟು ವಿಡಿಯೋ ಹಾಗೂ ಸ್ಟಿಲ್ ಫೋಟೋಸ್​ನಲ್ಲಿ ಎದ್ದು ಕಾಣ್ತಿದೆ ಕೂಡ. ಅದೇನೇ ಇರಲಿ, ಇಷ್ಟ ಪಟ್ಟ ಜೋಡಿಗೆ ಎರಡೂ ಕುಟುಂಬಗಳು ಮದ್ವೆಗೆ ಗ್ರೀನ್ ಸಿಗ್ನಲ್ ಕೊಟ್ಟಿರೋದು ಇಂಟರೆಸ್ಟಿಂಗ್.

ನವೆಂಬರ್ 30, ಬುಧವಾರ ಸಂಜೆ ಜೆಪಿ ನಗರದ ಅಂಬರೀಶ್ ನಿವಾಸದಲ್ಲಿ ವೀಳ್ಯ ಶಾಸ್ತ್ರ ಕೂಡ ನೆರವೇರಿದೆಯಂತೆ. ಇದೇ ಡಿಸೆಂಬರ್ 8ರಂದು ಅಂಬಿ- ಸುಮಲತಾ ವಿವಾಹ ವಾರ್ಷಿಕೋತ್ಸವದ ಹಿನ್ನೆಲೆ ಅಭಿ- ಅವಿವಾ ಮದ್ವೆ ಮ್ಯಾಟರ್ ಅಧಿಕೃತವಾಗಿ ಸುಮಲತಾ ಅಂಬರೀಶ್ ಮಾಧ್ಯಮಗಳ ಮುಂದೆ ಘೋಷಿಸಲಿದ್ದಾರಂತೆ. ಒಟ್ಟಾರೆ ಅಭಿ ಬಾಳು ಬಂಗಾರವಾಗಲಿ, ಅವಿವಾ ಜೊತೆಗಿನ ಹೊಸ ಬಾಳಿಗೆ ಶುಭವಾಗಲಿ ಅಂತ ಹಾರೈಸೋಣ.

ಅಂದಹಾಗೆ ಅಭಿಷೇಕ್ ಅಂಬರೀಶ್​ಗೆ ಒಳ್ಳೆಯ ಗೆಳೆಯನಾದ ನಟ, ನಿರ್ದೇಶಕ ಪ್ರಥಮ್ ನಮ್ಮ ಪವರ್ ಟಿವಿ ಜೊತೆ ಅವ್ರ ಮದ್ವೆ ಬಗ್ಗೆ ಎಕ್ಸ್​ಕ್ಲೂಸಿವ್ ಆಗಿ ಮಾತನಾಡಿದ್ದಾರೆ.

ಬ್ಯಾಡ್ ಮ್ಯಾನರ್ಸ್​ ಸಿನಿಮಾ ಕಂಪ್ಲೀಟ್ ಮಾಡಿ, ಕಾಳಿ ಸಿನಿಮಾದ ಮುಹೂರ್ತ ನೆರವೇರಿಸಿರೋ ಅಭಿಷೇಕ್ ಅಂಬರೀಶ್​ ಸಿನಿಯಾನ, ಬಾಳ ಬಂಡಿಯ ಜೊತೆಗೆ ಮತ್ತಷ್ಟು ಬಿಂದಾಸ್ ಆಗಿ ಸಾಗಲಿ ಅನ್ನೋದು ನಮ್ಮ ಅಶಯ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES