ತೆಲಂಗಾಣ: ಇದೇ ಮೊದಲ ಬಾರಿಗೆ ಮಂಗಳಮುಖಿಯರಿಬ್ಬರು ತೆಲಂಗಾಣದಲ್ಲಿ ಸರ್ಕಾರಿ ವೈದ್ಯರಾಗಿ ನೇಮಕವಾಗಿದ್ದಾರೆ.
ಎಂಬಿಬಿಎಸ್ ಪದವಿ ಮುಗಿಸಿರುವ ಪ್ರಾಚಿ ರಾಥೋಡ್ ಹಾಗೂ ರುತ್ ಜಾನ್ ಪೌಲ್ ಅವರು ಈ ಸಾಧನೆ ಮಾಡಿದ್ದಾರೆ. ಈ ಮೂಲಕ ಈ ಇಬ್ಬರು ಮಂಗಳಮುಖಿ ವೈದ್ಯರು ಆಗಿದ್ದು ತೆಲಂಗಾಣದಲ್ಲಿ ಇತಿಹಾಸ ಬರೆದಂತಾಗಿದೆ.
2015 ರಲ್ಲಿ ಈ ಲೈಂಗಿಕ ಅಲ್ಪಸಂಖ್ಯಾತರು ಎಂಬಿಬಿಎಸ್ ಪದವಿ ಮುಗಿಸಿದ್ದರು. ನಂತರ ಕೆಲ ವರ್ಷ ಖಾಸಗಿ ಆಸ್ಪತ್ರೆಗಳಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಿದ್ದರು. ಆದರೆ ಇವರ ಸೇವೆ ಪಡೆಯಲು ಅನೇಕ ಆಸ್ಪತ್ರೆಗಳು ಹಾಗೂ ರೋಗಿಗಳು ಮುಂದೆ ಬರುತ್ತಿರಲಿಲ್ಲ.
ಪ್ರಾಚಿ ರಾಥೋಡ್ ಅವರ ಲಿಂಗ ವಿಚಾರವಾಗಿ ಅವರು ಸೇವೆ ಸಲ್ಲಿಸುತ್ತಿದ್ದ ಒಂದು ದೊಡ್ಡ ಖಾಸಗಿ ಆಸ್ಪತ್ರೆಯಿಂದ ಅವರನ್ನು ಸೇವೆಯಿಂದ ವಜಾ ಮಾಡಲಾಗಿತ್ತು. ಇದೀಗ ಈ ಇಬ್ಬರೂ ಮಂಗಳಮುಖಿಯರನ್ನು ತೆಲಂಗಾಣದ ಸರ್ಕಾರಿ ಆಸ್ಪತ್ರೆಯಾಗಿರುವ ಓಸ್ಮಾನಿಯಾ ಸಾರ್ವಜನಿಕ ಆಸ್ಪತ್ರೆಯ ಸೇವೆಗೆ ನಿಯೋಜಿಸಲಾಗಿದೆ.