Wednesday, January 22, 2025

NDTV’ಗೆ ರಾಜೀನಾಮೆ ನೀಡಿದ ಬೆನ್ನೆಲೆ ಯೂಟ್ಯೂಬ್​ ಚಾನಲ್​ ಆರಂಭಿಸಿದ ಪತ್ರಕರ್ತ ರವೀಶ್‌ ಕುಮಾರ್‌

ನವದೆಹಲಿ: ದೇಶದ ಎನ್​ಡಿಟಿವಿ ನ್ಯೂಸ್​ ಚಾನಲ್‌ನ ಷೇರುಗಳನ್ನು ಅದಾನಿ ಗ್ರೂಫ್‌ ಸ್ವಾಧೀನಪಡಿಸಿಕೊಂಡ ಬೆನ್ನಲ್ಲೇ ಹಿರಿಯ ಪತ್ರಕರ್ತ ರವೀಶ್‌ ಕುಮಾರ್‌ ಎನ್‌ಡಿಟಿವಿಗೆ ರಾಜೀನಾಮೆ ನೀಡಿದ ಬೆನ್ನೆಲೆ ಈಗ ಹೊಸ ಯೂಟ್ಯೂಬ್​ ಚಾನಲ್ ಆರಂಭ ಮಾಡಿದ್ದಾರೆ.

ಎನ್​ಡಿಟಿವಿಯ ಆರ್‌ಆರ್‌ಪಿಆರ್‌ ಹೋಲ್ಬಿಂಗ್‌ ಪ್ರೈವೇಟ್‌ ಲಿಮಿಚಿಡ್‌ನ ಮಂಡಳಿಯ ನಿರ್ದೇಶಕರ ಸ್ಥಾನಕ್ಕೆ ಸಂಸ್ಥಾಪಕರಾದ ಪ್ರಹಾಯ್‌ ರಾಯ್‌ ಹಾಗೂ ರಾಧಿಕಾ ರಾಯ್‌ ರಾಜೀನಾಮೆ ನೀಡಿದ ಬಳಿಕ ಪತ್ರಕರ್ತ ರವೀಶ್‌ ಕುಮಾರ್‌ ರಾಜೀನಾಮೆ ನೀಡಿದ್ದರು.

ಈ ಎಲ್ಲಾ ಬೆಳವಣಿಗೆ ಹಿನ್ನಲೆಯಲ್ಲಿ ಇಂದು ತಮ್ಮ ಅಧಿಕೃತ ಟ್ವೀಟರ್​ನಲ್ಲಿ ತಮ್ಮ ನೂತನ ಚಾನಲ್​ನ ಹೆಸರು ಪ್ರಸ್ತಾಪ ಮಾಡಿದ್ದಾರೆ. ರವೀಶ್‌ ಕುಮಾರ್‌ ಅಫಿಶೀಯಲ್‌ ಎನ್ನುವ ಯೂಟ್ಯೂಬ್​ ಚಾನಲ್​ ಆರಂಭಿಸಿದ್ದಾರೆ. ತಮ್ಮ ಮೊದಲ ವಿಡಿಯೋದಲ್ಲಿ ಪ್ರಜಾಪ್ರಭುತ್ವಕ್ಕೆ ಗಂಭೀರ ಭದರಿಕೆಯಿರುವ ಸಮಯದಲ್ಲಿ ಅಧಿಕಾರದಲ್ಲಿರುವವರನ್ನು ಪ್ರಶ್ನಿಸುವ ಪತ್ರಕರ್ತರನ್ನು ಬೆಂಬಲಿಸುವುದನ್ನು ಮುಂದುವರಿಸಬೇಕೆಂದು ದೇಶದ ಜನರಲ್ಲಿ ಮನವಿ ಮಾಡಿದ್ದಾರೆ.

ದೇಶದದಲ್ಲಿ ಅಧಿಕಾರದಲ್ಲಿರುವ ಜನರು ಅನೇಕರ ದ್ವನಿಯನ್ನು ಅಡಗಿಸಲು ಪ್ರಯತ್ನಿಸಿದಾಗ, ದೇಶದ ಜನರು ನನ್ನ ಮೇಲೆ ಆಪಾರ ಪ್ರೀತಿಯನ್ನು ತೋರಿಸಿದರು. ನನ್ನ ಪ್ರೇಕ್ಷಕರಿಲ್ಲದೆ ನಾನು ಏನನ್ನೂ ಮಾಡಲು ಸಾಧ್ಯವಾಗುತ್ತಿರಲಿಲ್ಲ. ನನ್ನ ಕೆಲಸವನ್ನು ಹೊಸ ಯೂಟ್ಯೂಬ್‌ ಚಾನೆಲ್‌ ಮತ್ತು ಫೇಸ್‌ಬುಕ್‌ ಪುಟದ ಮೂಲಕ ಮುಂದುವರಸುತ್ತಿದ್ದು. ಅದನ್ನು ಬೆಂಬರಿಸುತ್ತೀರಂದು ನಂಬಿದ್ದೇನೆ ಎಂದು ರವೀಶ್‌ ತಮ್ಮ ಯುಟ್ಯೂಬ್‌ ವೀಡಿಯೊದಲ್ಲಿ ಹೇಳಿದ್ದಾರೆ.

RELATED ARTICLES

Related Articles

TRENDING ARTICLES