Wednesday, January 22, 2025

ಮುತಾಲಿಕ್​ಗೆ ಅಪರಿಚಿತನಿಂದ ಕೊಲೆ ಬೆದರಿಕೆ

ಧಾರವಾಡ : ರಾಜ್ಯದಲ್ಲಿ ಪ್ರತ್ಯೇಕ ಮಹಿಳಾ ಮುಸ್ಲಿಂ ಕಾಲೇಜು ತೆರೆಯುವುದಕ್ಕೆ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ವಿರೋಧ ವ್ಯಕ್ತಪಡಿಸಿದ ಬೆನ್ನಲ್ಲೇ ಮುತಾಲಿಕ್​ಗೆ ಬೆದರಿಕೆ ಕರೆ ಬಂದಿದೆ.

ವಾಟ್ಸಾಪ್​ನಲ್ಲಿ 5 ವಾಯ್ಸ್ ಸಂದೇಶಗಳ ಮೂಲಕ ಅಪರಿಚಿತನೊಬ್ಬ ಕೊಲೆ ಬೆದರಿಕೆ ಹಾಕಿದ್ದಾನೆ. ಅಶ್ಲೀಲ ಪದಗಳಿಂದ ನಿಂದನೆ ಮಾಡಿದ್ದಾನೆ. ನಿನ್ನ ಪಾಡಿಗೆ ನೀನಿರು, ನಮ್ಮ ತಂಟೆಗೆ ಬರಬೇಡ. ಈ ಹಿಂದೆ ಮಸಿ ಬಳಸಿಕೊಂಡಿರುವೆ. ಇನ್ನು ಮುಂದಾದ್ರು ನಮ್ಮ ಸಮುದಾಯದ ಬಗ್ಗೆ ಮಾತನಾಡಬೇಡ. ನಮ್ಮ ಸಮುದಾಯದ ವಿರುದ್ಧ ಮಾತನಾಡೋಕೆ ನೀನ್ಯಾರು. ಇನ್ನು ಮುಂದೆ ಈಗೆ ಮಾತನಾಡಿದರೆ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಕೊಲೆ ಬೆದರಿಕೆ ಹಾಕಿದ್ದಾನೆ.

RELATED ARTICLES

Related Articles

TRENDING ARTICLES