Monday, January 27, 2025

ರೇವನ್ಣ ಭ್ರಮೆಯಿಂದ ಹೊರಬರಲಿ : ಪ್ರೀತಂಗೌಡ

ಹಾಸನ : ವಿಧಾನಸಭಾ ಕ್ಷೇತ್ರದಲ್ಲಿ ಕೆಲವು ಮತದಾರರನ್ನು ಕೈಬಿಡಲಾಗುತ್ತಿದೆ ಎಂಬ ಮಾಜಿ ಸಚಿವ H.D. ರೇವಣ್ಣ ಆರೋಪ ಮಾಡಿದ್ದಾರೆ. ಇದಕ್ಕೆ ಶಾಸಕ ಪ್ರೀತಂಗೌಡ ತಿರುಗೇಟು ನೀಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಳೆನರಸೀಪುರ ಜನರನ್ನು ಹಾಸನ ಕ್ಷೇತ್ರದ ಮತದಾರರನ್ನಾಗಿ ಮಾಡೋ ಪ್ಲ್ಯಾನ್ ರೇವಣ್ಣರದ್ದು. ರೇವಣ್ಣ ಅಂತಹ ಭ್ರಮೆಯಲ್ಲಿದ್ರೆ ಮೊದಲು ಹೊರಗೆ ಬರಲಿ ಎಂದು ತಿರುಗೇಟು ನೀಡಿದ್ದಾರೆ.

ವಿಧಾನಸಭಾ ಕ್ಷೇತ್ರ ಸೇರಿದಂತೆ ಇಡೀ‌ ಜಿಲ್ಲೆಯಲ್ಲಿ ಏನಾದ್ರು ಮತದಾರರ ಪಟ್ಟಿಯಲ್ಲಿ ಸಮಸ್ಯೆ ಇದ್ದರೆ ಅದನ್ನು ಎಲ್ಲಾ ಜನಪ್ರತಿನಿಧಿಗಳು ಸೇರಿ ಸರಿ ಮಾಡುವ ಕೆಲಸ ಮಾಡೋಣ ಎಂದು ತಿಳಿಸಿದ್ರು. ಏನಾದರೂ ನ್ಯೂನ್ಯತೆ ಇದ್ದರೆ ಅಧಿಕಾರಿಗಳನ್ನು ಕರೆಸಿ ಎಲ್ಲಾ ಜನಪ್ರತಿನಿಧಿಗಳು ಸೇರಿ ಅದರ ಬಗ್ಗೆ ಕ್ರಮ ವಹಿಸಲು ಹೇಳ್ತೇನೆ. ಮತದಾರರ ಪಟ್ಟಿ ಪರಿಷ್ಕರಣೆ ಮಾಡುವ ಮೂಲಕ ಚುನಾವಣೆ ಗೆಲ್ತೀವಿ ಅನ್ನುವ ಭ್ರಮೆಯಲ್ಲಿ ಯಾವುದೇ ಚುನಾಯಿತ ಪ್ರತಿನಿಧಿಗಳು ಇರೋದು ಬೇಡ ಎಂದು ಟಾಂಗ್​​ ಕೊಟ್ರು.

RELATED ARTICLES

Related Articles

TRENDING ARTICLES