ಹಾಸನ: ಮತದಾರರನ್ನು ಪಟ್ಟಿಯಿಂದ ಡಿಲಿಟ್ ಮಾಡಲಾಗುತ್ತಿದೆ. ಈ ಸಂಬಂಧ ಜಿಲ್ಲಾಧಿಕಾರಿ ಹಾಗೂ ರಾಜ್ಯ ಚುನಾವಣಾ ಆಯೋಗಕ್ಕೆ ಮನವಿ ಮಾಡುತ್ತೇನೆ ಎಂದು ಮಾಜಿ ಸಚಿವ H.D ರೇವಣ್ಣ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಹಾಸನ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಓಟರ್ ಲಿಸ್ಟ್ ಸರಿಯಾದ ರೀತಿ ಆಗ್ತಿಲ್ಲ. ಕೆಲವು ಮನೆಗಳವರ ಹೆಸರನ್ನು ಲೀಸ್ಟ್ನಿಂದ ಕೈಬಿಡುತ್ತಿದ್ದಾರೆ. ಹಳೇಯ ಹಾಗೂ ಹೊಸ ಓಟರ್ ಲಿಸ್ಟ್ ತೆಗೆದುಕೊಂಡು ಪರಿಶೀಲನೆ ಮಾಡಿ ಎಂದು ನಮ್ಮ ಕಾರ್ಯಕರ್ತರಿಗೆ ಸೂಚನೆ ಕೊಟ್ಟಿದ್ದೇನೆ ಎಂದು ಅವರು ತಿಳಿಸಿದರು.
ನಾವೇನಾದ್ರು ಮಾಡಲು ಹೋದರೆ ಅದನ್ನು ಬೇರೆ ತರ ತಿರುಚಲಾಗುತ್ತದೆ. ನಾವು ಗೌರಿ-ಗಣೇಶ ಹಬ್ಬಕ್ಕೆ ಗಿಫ್ಟ್ ಕೊಡಲು ಹೋದಾಗ ಓಟರ್ ವೆರಿಫಿಕೇಷನ್ ಕಾರ್ಡ್ ತೆಗೆದುಕೊಂಡು ಬಂದಿದ್ದಾರೆ ಎಂದು ಆರೋಪ ಮಾಡಿದ್ರು ಎಂದು ಬೇಸರ ವ್ಯಕ್ತಪಡಿಸಿದ್ರು. ಓಟರ್ ID ಗೋಲ್ಮಾಲ್ ನಡೆದರೆ ಜಿಲಾಧಿಕಾರಿಗಳು ಶಿಸ್ತು ಕ್ರಮ ತೆಗೆದುಕೊಳ್ಳಬೇಕು. ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಓಟರ್ ಲೀಸ್ಟ್ ಮಾಡುವ BLOಗಳು ತಪ್ಪು ಮಾಡಿದ್ರೆ ಅವರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಬೇಕು. ನಾನು ರಾಜ್ಯ ಚುನಾವಣಾ ಆಯೋಗಕ್ಕೆ ದಾಖಲೆಗಳ ಸಮೇತ ದೂರು ಕೊಡ್ತಿನಿ ಎಂದು ತಿಳಿಸಿದರು.