ಬೆಂಗಳೂರು : ಇತ್ತೀಚಿಗೆ ಚಿರತೆಗಳು ಕಾಡು ಬಿಟ್ಟು ಹಳ್ಳಿಗಳಿಲ್ಲಿ ಪ್ರತ್ಯಕ್ಷವಾಗಿ ಜನರನ್ನು ಬೆಚ್ಚಿ ಬೀಳಿಸುತ್ತಿದ್ದವು. ಆದರೆ ಈಗ ಚಿರತೆ ಸಿಲಿಕಾನ್ ಸಿಟಿ ಬೆಂಗಳೂರಿಗೂ ಎಂಟ್ರಿ ಕೊಟ್ಟು ಜನರಲ್ಲಿ ಆತಂಕ ಮೂಡಿಸಿದೆ.
ನಗರದ ಹೊರವಲಯದಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಕೆಂಗೇರಿ ಸಮೀಪದ ಕೋಡಿಪಾಳ್ಯದಲ್ಲಿ ಜಿಂಕೆಯನ್ನು ಬೇಟೆಯಾಡಿ, ಜಿಂಕೆಯ ಮೃತದೇಹವನ್ನ ನಗರ ಪ್ರದೇಶಕ್ಕೆ ತಂದು ಹಾಕಿದೆ. ಕೋಡಿಪಾಳ್ಯ ಪ್ರದೇಶದಲ್ಲಿ 4 ಚಿರತೆಗಳು ಓಡಾಡುತ್ತಿದ್ದು,ಇದರಿಂದ ಸಿಲಿಕಾನ್ಸಿಟಿ ಜನರು ಭಯಭೀತರಾಗಿದ್ದಾರೆ. ಅರಣ್ಯ ಇಲಾಖೆಯಿಂದ ಚಿರತೆ ಸೆರೆಗೆ ಸತತ ಕಾರ್ಯಾಚರಣೆ ನಡೆಸುತ್ತಿದ್ದಾರೆ.