Monday, December 23, 2024

ಹುನಗುಂದದಲ್ಲಿ ಕಾಂಗ್ರೆಸ್​-ಬಿಜೆಪಿ ನಾಯಕರ ನಡುವೆ ಟಾಕ್ ವಾರ್ ತಾರಕಕ್ಕೆ

ಬಾಗಲಕೋಟೆ: ಜಿಲ್ಲೆಯ ಹುನಗುಂದ ಮತಕ್ಷೇತ್ರದಲ್ಲಿ ಕಾಂಗ್ರೆಸ್​-ಬಿಜೆಪಿ ನಾಯಕರ ನಡುವೆ ಪಾಲಿಟಿಕ್ಸ್ ಟಾಕ್ ವಾರ್ ತಾರಕ್ಕೇರಿದ್ದು, ಪರಸ್ಪರ ಇಬ್ಬರು ನಾಯಕರು ವಾಗ್ದಾಳಿ ನಡೆಸಿದ್ದಾರೆ.

ಹುನಗುಂದ ಬಿಜೆಪಿ ಶಾಸಕ ದೊಡ್ಡನಗೌಡ ಪಾಟೀಲ ಪುತ್ರನ ವಿರುದ್ಧ ಮಾಜಿ ಕಾಂಗ್ರೆಸ್​ ಶಾಸಕ ವಿಜಯಾನಂದ ಕಾಶಪ್ಪನವರ ಅವರು  ಮಾತನಾಡಿ, ನೀನು ಇನ್ನೂ ಬಚ್ಚಾ ಇದ್ದಿ. ಅಭಿ ಅಂಡೇಮೆ ಹೈ(ಇನ್ನೂ ಮೊಟ್ಟೆಯಲ್ಲಿದ್ದೀಯಾ) ಅಭಿ ಬಾಹರ ನಹೀ ಆಯಾ. ಅಬಿ ಏಕಸೋ ತೇವಿಸ್ ಬಾಕಿ ಹೈ. ಬಾಹರ್ ಆತಿ ಬೋಲಾನ, ಆಕೆ ದೇಖಾ. ದೇಖತಾ ಮೈಬಿ ಕೈಸಾ ಆತಾ. ತಾಖತ್ ನ ಮಾತ ಹೇಳಿದವರಿಗೆ 2 ರಿಂದ ರಾತ್ರಿ 9 ರ ವರೆಗೆ ಸರ್ಕಲ್ ನಲ್ಲಿ ಸೆಡ್ಡು ಹೊಡೆದು ಕುಂತೀನಿ ಮಾರಾಯ ಎಂದು ಸವಾಲ್​ ಹಾಕಿದರು.

ಅಂತೆಯೇ ಮಾತನಾಡಿದ ಕಾಶಪ್ಪನವರ​​, ಬರ್ರೀ ದಮ್ ಇದ್ರ ಇಲಕಲ್ ನಗರದ ಕಂಠಿ ಸರ್ಕಲ್ ನಲ್ಲೇ ಆಗಲಿ. ಹಿರೇ ಶಿವನಗುತ್ತಿಯಲ್ಲಿ ನನ್ನ ತಾಖತ್ ಬಗ್ಗೆ ಮಾತಾಡಿದ್ದಿರಲ್ಲೋ ಅಪ್ಪ-ಮಗ, ನಿಮಗ ತಾಖತ್ ಇದ್ರ ಅಭಿವೃದ್ಧಿ ಕೆಲಸದಾಗ ತೋರಸರಿ ಅಪ್ಪ-ಮಗ ಎಂದು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಅವರು ಹುನಗುಂದ ಹಾಲಿ ಶಾಸಕ ದೊಡ್ಡನಗೌಡನ ಕುಟುಂಬಕ್ಕೆ ಸವಾಲ ಹಾಕಿದರು.

ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ವಿರುದ್ಧ ಶಾಸಕ ದೊಡ್ಡನಗೌಡ ಪಾಟೀಲ ಪುತ್ರ ಮಾತನಾಡಿ, ನಿನ್ನೆ ಕಾರ್ಯಕ್ರಮವೊಂದರಲ್ಲಿ ದಮ್ ಇದ್ದರೆ ಗೆದ್ದು ತೋರಿಸಿ ಎಂದಿದ್ದ ಕಾಶಪ್ಪನವರವರಿಗೆ ತಿರುಗೇಟು ನೀಡಿ, ಕಾಶಪ್ಪನವರೇ, ಧಮ್ ತಾಕತ್ ಇದ್ದರೆ ನಮ್ಮ ವಿರುದ್ದ ಗೆದ್ದು ತೋರಿಸು. ನಿಮ್ಮನ್ನ ಈಗಲೇ ಮೂರು ಬಾರಿ ಸಾರಿ ಸೋಲಿಸಿದ್ದೀವಿ. ನಮ್ಮಪ್ಪ ಬೇಡ, ನಾನೇ ಬರ್ತಿನಿ, ನಿನ್ನ ನೋಡೇ ಬಿಡೋಣ ಎಂದ ರಾಜುಗೌಡ ಅವರು ಬಾಗಲಕೋಟೆ ಜಿಲ್ಲೆಯ ಶಿವನಗುತ್ತಿ ಗ್ರಾಮದಲ್ಲಿ ಅವಾಜ್​ ಹಾಕಿದ್ದರು.

ನೀನು ಒಳ್ಳೆಯವನಾಗಿ ಮಾತನಾಡಿದ್ರೆ, ಒಳ್ಳೆಯದನ್ನೇ ಮಾತನಾಡ್ತೀವಿ. ನೀನು ಏರು ಪೇರು ಮಾತನಾಡಿದ್ರೆ ನಾವು ಸಹ ಏರು ಪೇರಾಗಿ ಡಬಲ್ ಆಗಿಯೇ ಮಾತನಾಡ್ತೀವಿ. ನಾನು ಸಹ ವಯಸ್ಸಿನಲ್ಲಿ ನಿನಗಿಂತ ಗಟ್ಟಿಯಾಗಿಯೇ ಇದ್ದೀನಿ, ನೋಡೆ ಬಿಡೋಣ ರಾಜುಗೌಡ ಎಂದಿದ್ದರು.

RELATED ARTICLES

Related Articles

TRENDING ARTICLES