Monday, December 23, 2024

ಆಡುವ ಬಳಗದಲ್ಲಿ ಸಂಜು ಸ್ಯಾಮ್ಸನ್ ಕಡೆಗಣನೆ; ಭಾರತ ತಂಡದ ವಿರುದ್ಧ ಶಶಿ ತರೂರ್ ಕಿಡಿ

ನವದೆಹಲಿ: ಸ್ಪೋಟಕ ಬ್ಯಾಟ್ಸಮನ್​ ಸಂಜು ಸ್ಯಾಮ್ಸನ್ ಅವರ ಕ್ರಿಕೆಟ್ ಜೀವನ ಕ್ರಿಕಟ್​ ಪಂಡಿತರಲ್ಲಿ ಅಚ್ಚರಿ ಮೂಡಿಸಿದೆ. ಅವರು ಬ್ಯಾಟಿಂಗ್​ನಲ್ಲಿ ಸತತವಾಗಿ ಯಶಸ್ಸು ಕಾಣುತ್ತಿದ್ದರು, ಅವರನ್ನ ನ್ಯೂಜಿಲೆಂಡ್​ ವಿರುದ್ಧ ಆಡುವ ಬಳಗದಲ್ಲಿ ಸೇರಿಸದ ಕಾರಣಕ್ಕೆ ಅವ್ರ ಅಭಿಮಾನಿಗಳು ಕಿಡಿಕಾರುತ್ತಿದ್ದಾರೆ. ಅದರಂತೆ ಕಾಂಗ್ರೆಸ್​ ಸಂಸದ ಶಶಿ ತರೂರ್​ ಬಿಸಿಸಿಐ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ನ್ಯೂಜಿಲೆಂಡ್ ಏಕದಿನ​ ಪ್ರವಾಸಕ್ಕೆ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಬೆಂಚ್ ಮೇಲೆ ಕುಳಿತುಕೊಳ್ಳುತ್ತಾರೆ. ಅವರಿಗೆ ಭಾರತಕ್ಕಾಗಿ ಆಡಲು ಸಾಕಷ್ಟು ಅವಕಾಶವನ್ನು ನೀಡುತ್ತಿಲ್ಲ. ಭಾರತ ತಂಡಕ್ಕೆ ಪಾದಾರ್ಪಣೆ ಮಾಡುವ ಮೊದಲು, ಸ್ಯಾಮ್ಸನ್ ಮಾಜಿ ನಾಯಕ ಎಂ.ಎಸ್​ ಧೋನಿಯ ಸಂಭಾವ್ಯ ಉತ್ತರಾಧಿಕಾರಿಯಾಗಿ ಕಂಡುಬಂದರು, ಆದರೆ ಪರಿಸ್ಥಿತಿಯು ಆ ರೀತಿಯಲ್ಲಿ ಹೊರಹೊಮ್ಮಲಿಲ್ಲ ಮತ್ತು ಪರಿಸ್ಥಿತಿಯು ಬದಲಾಗುವ ಸಾಧ್ಯತೆಯಿಲ್ಲ ಎಂದು ಕಿಡಿಕಾರಿದ್ದಾರೆ.

ಸೀಮಿತ ಅವಕಾಶಗಳಲ್ಲಿ ಉತ್ತಮವಾಗಿ ಸ್ಯಾಮ್ಸನ್​ ಆಡುತ್ತಿದ್ದರೂ ಮತ್ತು 2022 ರಲ್ಲಿ ವೈಟ್-ಬಾಲ್ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿದ್ದರೂ, ಅವರು ಬೆಂಚ್‌ನಲ್ಲಿಯೇ ಉಳಿದಿದ್ದಾರೆ. ಕ್ರೈಸ್ಟ್‌ಚರ್ಚ್‌ನಲ್ಲಿ ಇಂದು ನಡೆದ ನ್ಯೂಜಿಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಆಡುವ 11 ಬಳಗ ಬದಲಾಗಿ ಸ್ಯಾಮ್ಸನ್ ಬೆಂಚ್​ ಕಾಯಿಸಿದ್ದಕ್ಕೆ ಜನರನ್ನು ಕೆರಳಿಸಿತು.

ಮೂರನೇ ಏಕದಿನ ಮೊದಲು ವಿವಿಎಸ್​ ಲಕ್ಷ್ಮಣ್ ಅವರ ಸಂದರ್ಶನವನ್ನು ಉಲ್ಲೇಖಿಸಿದ ಶಶಿ ತರೂರ್, ರಿಷಬ್​​ ಪಂತ್ ಉತ್ತಮ ಆಟಗಾರನಾಗಿದ್ದರೂ, ಅವರು ತಮ್ಮ ಕೊನೆಯ 11 ಇನ್ನಿಂಗ್ಸ್‌ಗಳಲ್ಲಿ 10 ಪಂಧ್ಯಗಳಲ್ಲಿ ವಿಫಲರಾಗಿದ್ದಾರೆ. ಆದರೆ 2022 ರಲ್ಲಿ 71 ಮತ್ತು ಅವರ ಏಕದಿನ ವೃತ್ತಿಜೀವನದಲ್ಲಿ 66 ರ ಸರಾಸರಿ ಹೊಂದಿರುವ ಸ್ಯಾಮ್ಸನ್ ಅವರು ಸ್ಕೋರ್ ಮಾಡಿದ್ದಾರೆ ಎಂದು ಪ್ರತಿಪಾದಿಸಿದರು. ಅವರ ಕೊನೆಯ ಐದು ಪಂದ್ಯಗಳಲ್ಲಿ ಎಲ್ಲಾ ಐದು ಪಂದ್ಯಗಳಲ್ಲಿ ಉತ್ತಮ ರನ್​ ಕಲೆಹಾಕಿದರು ಭಾರತ ತಂಡದ ಆಡುವ ಬಳಗದಲ್ಲಿ ಅವರಿಗೆ ಸ್ಥಾನ ನೀಡಿಲ್ಲ ಎಂದರು.

ಸಂಜು ಸ್ಯಾಮ್ಸನ್​ ಅವರ 66 ಸರಾಸರಿಯಲ್ಲಿ ರನ್​ ಕಲೆಹಾಕಿದ್ದಾರೆ ಆದರೂ ಅವರನ್ನ ಇನ್ನೂ ಬೆಂಚ್‌ನಲ್ಲಿ ಇಡಲಾಗಿದೆ. ಸ್ಯಾಮ್ಸನ್‌ಗಾಗಿ ಪ್ರಪಂಚದಾದ್ಯಂತದ ಅಭಿಮಾನಿಗಳು ಇದ್ದಾರೆ ಎಂದು ಸಂಜು ಸ್ಯಾಮ್ಸನ್ ಅವರನ್ನು ಕೈಬಿಟ್ಟಿದ್ದಕ್ಕಾಗಿ ಶಶಿ ತರೂರ್ ಭಾರತ ತಂಡದ ಆಡಳಿತವನ್ನು ಟೀಕಿಸಿದರು.

RELATED ARTICLES

Related Articles

TRENDING ARTICLES