Monday, November 4, 2024

ಕಾಂತಾರ ಬಳಿಕ 9.8 IMDb ರೇಟಿಂಗ್ ಪಡೆದ ಕನ್ನಡದ ಸದ್ದು

ಕೆಲವೊಂದು ಸಿನಿಮಾಗಳು ರಿಲೀಸ್​ಗೂ ಮೊದ್ಲೇ ಸಿಕ್ಕಾಪಟ್ಟೆ ಸದ್ದು ಮಾಡುತ್ವೆ. ರಿಲೀಸ್ ಬಳಿಕ ಮಕಾಡೆ ಮಲಗುತ್ತವೆ. ಆದ್ರೆ ಮತ್ತೊಂದಷ್ಟು ಚಿತ್ರಗಳು ಸೈಲೆಂಟ್ ಆಗಿ ಬಂದು ಬೇಜಾನ್ ಸದ್ದು ಮಾಡುತ್ವೆ. ಥಿಯೇಟರ್​ನಿಂದ ಹೊರಬಂದವ್ರೆಲ್ಲಾ ಚಿತ್ರದ ಬಗ್ಗೆ ವಿಚಾರ ವಿನಿಮಯ ಮಾಡಿಕೊಳ್ತಿದ್ದಾರೆ. ಅದು ಬೇರಾವುದೂ ಅಲ್ಲ, ಸದ್ದು- ವಿಚಾರಣೆ ನಡೆಯುತ್ತಿದೆ.

  • ವೆಟರ್ನರಿ ಲೆಕ್ಚರರ್​ ಸಿನಿಮೋತ್ಸಾಹ.. ಪ್ರಶಂಸೆಗಳ ಸುರಿಮಳೆ
  • ಪೊಲೀಸ್ ಆಫೀಸರ್​​ಗಳ ಏಳು ಬೀಳಿನ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ
  • ಪಾವನ, ಅಚ್ಯುತ್, ರಘು, ರಾಕೇಶ್ & ಮಧು ನಟನೆ ಮ್ಯಾಜಿಕ್

ರಿಲೀಸ್​ ಆಗೋ ಅಂತಹ ಪ್ರತಿ ಸಿನಿಮಾ ಕೂಡ ಪ್ರೇಕ್ಷಕರ ಮನಗೆಲ್ಲೋದು ಕಷ್ಟ. ಆದ್ರೆ ಕಂಟೆಂಟ್​ ಇದ್ರೆ ಎಂತಹದ್ದೇ ಚಿತ್ರವಾದ್ರೂ ಸದ್ದು ಮಾಡುತ್ತೆ. ಸದ್ಯ ಸದ್ದು ವಿಚಾರಣೆ ನಡೆಯುತ್ತಿದೆ ಅನ್ನೋ ಸಿನಿಮಾ ಕಳೆದ ಶುಕ್ರವಾರ ತೆರೆಕಂಡಿತ್ತು. ಒಳ್ಳೆಯ ಕಥೆ, ಚಿತ್ರಕಥೆ, ಪಾತ್ರಗಳು ಹಾಗೂ ಮೇಕಿಂಗ್​ನಿಂದ ಎಲ್ಲರ ಗಮನ ಸೆಳೆದಿದೆ. ಕಾಂತಾರ ಬಳಿಕ ಕನ್ನಡದ ಈ ಸಿನಿಮಾ, IMDbಯಲ್ಲಿ 9.8 ರೇಟಿಂಗ್ ಪಡೆದಿದೆ ಅಂದ್ರೆ ನಿಜಕ್ಕೂ ಗ್ರೇಟ್.

ಹೌದು.. ಪ್ರತಿಷ್ಠಿತ IMDb ಸಿಕ್ಕ ಸಿಕ್ಕವ್ರಿಗೆಲ್ಲಾ ಹೀಗೆ ರೇಟಿಂಗ್ ಕೊಡೋ ವೆಬ್​ಸೈಟ್ ಅಲ್ಲ. ತುಂಬಾ ಅಥೆಂಟಿಕ್ ಹಾಗೂ ಆನೆಸ್ಟ್ ಆಗಿ ರಿವ್ಯೂ ಮಾಡೋ ವೆಬ್​ಸೈಟ್ ಹೀಗೆ ಟಾಪ್​ ರೇಟಿಂಗ್ ನೀಡಿ, ಸಿನಿಮಾನ ಉತ್ತೇಜಿಸಿರೋದು ಖುಷಿಯ ವಿಚಾರ. ಭಾಸ್ಕರ್ ನಿರ್ದೇಶನದ ಚೊಚ್ಚಲ ಸಿನಿಮಾ ಇದಾಗಿದ್ದು, ಪೊಲೀಸ್ ಆಫೀಸರ್​ಗಳ ಏಳು ಬೀಳಿನ ಕಥೆಯನ್ನ ಹೇಳೋ ಪ್ರಯತ್ನ ಮಾಡಿದ್ದಾರೆ.

ಲೀಡ್​ನಲ್ಲಿ ರಾಕೇಶ್ ಮಯ್ಯ ಹಾಗೂ ಪಾವನಾ ಗೌಡ ಬಣ್ಣ ಹಚ್ಚಿದ್ದು, ಇವರೊಟ್ಟಿಗೆ ಬಹುಮುಖ್ಯ ಪಾತ್ರಕ್ಕೆ ಮಧು ನಂದನ್ ಬಣ್ಣ ಹಚ್ಚಿದ್ದಾರೆ. ಅಂದಹಾಗೆ ಮಧು ನಂದನ್ ವೃತ್ತಿಯಲ್ಲಿ ವೆಟರ್ನರಿ ಕಾಲೇಜ್ ಲೆಕ್ಚರರ್. ಆದ್ರೆ ಸಿನಿಮಾನ ಪ್ರವೃತ್ತಿಯಾಗಿಸಿಕೊಂಡಿರೋ ಇವ್ರು, ಈ ಸಸ್ಪೆನ್ಸ್ ಕ್ರೈಂ ಥ್ರಿಲ್ಲರ್ ಸಿನಿಮಾನ ಪ್ರೇಕ್ಷಕರಿಗೆ ಉಣಬಡಿಸೋ ಮಹತ್ವದ ಕಾರ್ಯಕ್ಕೆ ಕೈಹಾಕಿ, ನಟಿಸೋದ್ರ ಜೊತೆ ಬಂಡವಾಳ ಕೂಡ ಹಾಕಿ, ನಿರ್ಮಾಪಕ ಅನಿಸಿಕೊಂಡಿದ್ದಾರೆ.

ನಟ, ನಿರ್ದೇಶಕರಾಗಿ ತನ್ನದೇ ಆದ ಛಾಪು ಮೂಡಿಸಿರೋ ಌಕ್ಟ್ 1978 ಚಿತ್ರದ ರಘು ಶಿವಮೊಗ್ಗ ಅವ್ರು ಈ ಚಿತ್ರದಲ್ಲಿ ಮೊದಲ ಬಾರಿಗೆ ನೆಗೆಟೀವ್ ರೋಲ್​ನಲ್ಲಿ ಕಾಣಸಿಗಲಿದ್ದಾರೆ. ಅಚ್ಯುತ್ ಕುಮಾರ್ ಕೂಡ ಚಿತ್ರದಲ್ಲಿ ನಟಿಸಿದ್ದು, ಟ್ವಿಸ್ಟ್ ಅಂಡ್ ಟರ್ನ್ಸ್​ನಿಂದ ಸಿನಿಮಾ ನೋಡುಗರಲ್ಲಿ ಸಖತ್ ಕ್ಯೂರಿಯಾಸಿಟಿ ಹುಟ್ಟಿಸುತ್ತೆ.

ಹೊಸಬರ ಈ ರೀತಿಯ ವಿನೂತನ ಪ್ರಯತ್ನಗಳು ಸದಾ ಗೆಲ್ಲಬೇಕು. ಯಾವುದೇ ಬ್ಯಾಗ್ರೌಂಡ್ ಅಥ್ವಾ ಗಾಡ್​ಫಾದರ್ ಇಲ್ಲದೆ ಹೀಗೆ ಸಿನಿಮಾ ಮಾಡೋ ಮಹದಾಸೆ ಹೊತ್ತು ಬರೋ ಸಿನಿಮೋತ್ಸಾಹಿ ತಂಡವನ್ನ ಕನ್ನಡಿಗರು ಕೈಹಿಡಿಯಬೇಕಿದೆ. ಕೆಆರ್​ಜಿ ಅಂತಹ ಬಿಗ್ ಬ್ಯಾನರ್ ಈ ಚಿತ್ರವನ್ನು ಡಿಸ್ಟ್ರಿಬ್ಯೂಟ್ ಮಾಡ್ತಿದ್ದು, ಸಿನಿಮಾ ನೋಡಿದ ಸಾಕಷ್ಟು ಮಂದಿ ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆಯ ಬರಹಗಳಿಂದ ಅವ್ರ ಆತ್ಮವಿಶ್ವಾಸ ಹೆಚ್ಚಿಸುತ್ತಿದ್ದಾರೆ.

ಇಷ್ಟ ಪಟ್ಟು ಸಿನಿಮಾ ಮಾಡಿರೋ ಮಧು ನಂದನ್ ತಂಡಕ್ಕೆ ಇದೀಗ ಸದ್ದು ವಿಚಾರಣೆ ನಡೆಯುತ್ತಿದೆ ಚಿತ್ರವನ್ನು ಥಿಯೇಟರ್​ನಲ್ಲಿ ಉಳಿಸಿಕೊಳ್ಳೋದು ತುಂಬಾ ಕಷ್ಟವಾಗ್ತಿದೆ. ಸೋ, ನಿಮ್ಮ ಹತ್ತಿರದ ಚಿತ್ರಮಂದಿರದಲ್ಲಿ ಸಿನಿಮಾ ನೋಡಿ, ಹತ್ತು ಮಂದಿಗೆ ಚಿತ್ರದ ಬಗ್ಗೆ ಪಾಸಿಟಿವ್ ಆಗಿ ಹೇಳಿದ್ರೆ, ಅವ್ರ ಶ್ರಮ ಸಾರ್ಥಕ ಅನಿಸಲಿದೆ. ಕನ್ನಡಿಗರು ಒಳ್ಳೆಯ ಪ್ರಯತ್ನಗಳನ್ನ ಕೈಬಿಟ್ಟಿಲ್ಲ. ಈ ಸಿನಿಮಾ ಕೂಡ ಆ ಸಾಲಿಗೆ ಸೇರುತ್ತಾ ಅನ್ನೋದು ನಿರೀಕ್ಷಿಸಬೇಕಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES