Wednesday, January 22, 2025

ರೇಮೊ ಆಟ ಜೋರು.. ಪ್ರೇಕ್ಷಕನ ಜೊತೆ ಇಂಡಸ್ಟ್ರಿ ಬಹುಪರಾಕ್

ರಾಕ್​ಸ್ಟಾರ್ ರೇಮೊ ಮೋಡಿಗೆ ಎಲ್ರೂ ಫಿದಾ ಆಗಿದ್ದಾರೆ. ಸ್ಯಾಂಡಲ್​ವುಡ್​ನ ಮಿಲ್ಕಿಬಾಯ್ ಇಶಾನ್ & ಆಶಿಕಾ ಗ್ಲಾಮರ್ ರಂಗಿನಿಂದ ರೇಮೊ ಹೌಸ್​ಫುಲ್ ಪ್ರದರ್ಶನ ಕಾಣ್ತಿದೆ. ಈ ಮ್ಯೂಸಿಕಲ್ ಲವ್ ಕಮ್ ಫ್ಯಾಮಿಲಿ ಎಂಟರ್​ಟೈನರ್​ಗೆ ಚಿತ್ರಪ್ರೇಮಿಗಳ ಜೊತೆ ಚಿತ್ರರಂಗದ ತಾರೆಯರು ಕೂಡ ಬಹುಪರಾಕ್ ಹೇಳಿದ್ದಾರೆ.

  • ಇಶಾನ್- ಆಶಿಕಾ ಆ್ಯರೊಗೆಂಟ್ ಹಿಟ್.. 100% ಕೌಟುಂಬಿಕ ಚಿತ್ರ
  • ಎಲ್ಲೆಡೆ ಹೌಸ್​ಫುಲ್.. ಸ್ಯಾಂಡಲ್​ವುಡ್ ಮಿಲ್ಕಿಬಾಯ್ ರಾಕ್ಸ್
  • ಮೇಕಿಂಗ್ ಕ್ವಾಲಿಟಿಗೆ ಕೇರ್ ಆಫ್ ಅಡ್ರೆಸ್ ಆಯ್ತು ‘ರೇಮೊ’..!

ಯೆಸ್.. ಕಳೆದವಾರ ತೆರೆಕಂಡ ರೇಮೊ ಎಲ್ಲೆಡೆ ರಾಕ್ ಮಾಡ್ತಿದೆ. ರಾಕ್​ಸ್ಟಾರ್ ಆಗಿ ನಾಯಕನಟ ಇಶಾನ್ ಎಲ್ಲರ ದಿಲ್ ದೋಚಿದ್ದಾರೆ. ಒಂದ್ಕಡೆ ಆಶಿಕಾ ರಂಗನಾಥ್ ಸಾಫ್ಟ್ ಅಂಡ್ ಬೋಲ್ಡ್ ಕ್ಯಾರೆಕ್ಟರ್ಸ್​, ಮತ್ತೊಂದ್ಕಡೆ ರೇವಂತ್ ರೆಸ್ಪಾನ್ಸಬಲಿಟೀಸ್ ಹಾಗೂ ರೇಮೊ ಕ್ರೇಜಿ ರೋಲ್ ಸಿನಿಮಾಗೆ ಪ್ಲಸ್ ಆಗಿದೆ.

ಜಸ್ಟ್ ಯೂತ್​ಫುಲ್ ಎಂಟರ್​ಟೈನರ್ ಅನಿಸದೆ, ಕಂಪ್ಲೀಟ್ ಫ್ಯಾಮಿಲಿ ಕೂತು ನೋಡುವ ಸಿನಿಮಾ ಆಗಿ ಹೊರಹೊಮ್ಮಿರೋ ರೇಮೊ, ಎಲ್ಲೆಡೆ ಹೌಸ್​ಫುಲ್ ಪ್ರದರ್ಶನ ಕಾಣ್ತಿದೆ. ಗೂಗ್ಲಿ ನಂತ್ರ ಪವನ್ ಒಡೆಯರ್ ನಿರ್ದೇಶನದ ಇಂಟೆನ್ಸ್ ಲವ್ ಕಮ್ ಫ್ಯಾಮಿಲಿ ಎಂಟರ್​ಟೈನರ್ ಇದು. ಅಲ್ಲದೆ, ಕ್ವಾಲಿಟಿ ಸಿನಿಮಾ ಕಟ್ಟಿಕೊಡೋದ್ರಲ್ಲಿ ನಿರ್ಮಾಪಕ ಸಿಆರ್ ಮನೋಹರ್ ಸಿನಿಮಾ ಪ್ಯಾಷನ್ ಪ್ರತಿ ಫ್ರೇಮ್​ನಲ್ಲೂ ಎದ್ದು ಕಾಣ್ತಿದೆ.

ಅರ್ಜುನ್ ಜನ್ಯ ಮ್ಯೂಸಿಕ್, ವೈದಿ ಸಿನಿಮಾಟೋಗ್ರಫಿ ಸಿನಿಮಾನ ಟೆಕ್ನಿಕಲಿ ಮತ್ತಷ್ಟು ಬಲಿಷ್ಟಗೊಳಿಸಿವೆ. ಇಶಾನ್ ಕ್ರೇಜಿ ಆ್ಯಕ್ಟಿಂಗ್ ನೋಡುಗರಲ್ಲಿ ಕ್ರೇಜ್ ಹೆಚ್ಚಿಸುತ್ತಿದೆ. ಚಿತ್ರದಲ್ಲಿನ ಡೈಲಾಗ್​ನಂತೆ ಆ್ಯರೊಗೆಂಟ್ ಹಿಟ್ ಆಗಿರೋ ಈ ಸಿನಿಮಾ, ಬಾಕ್ಸ್ ಆಫೀಸ್​ನಲ್ಲೂ ಜೋರಾಗೇ ಸದ್ದು ಮಾಡ್ತಿದೆ. ಅಂದಹಾಗೆ ರೇಮೊ ಸಿನಿಮಾನ ಬರೀ ಸಿನಿಪ್ರಿಯರಷ್ಟೇ ಅಲ್ಲ, ಇಂಡಸ್ಟ್ರಿ ಮಂದಿ ಕೂಡ ನೋಡಿ ಮೆಚ್ಚಿಕೊಂಡಿದ್ದಾರೆ.

ಒಟ್ಟಾರೆ ಕನ್ನಡ ಸಿನಿಮಾಗಳು ಪರಭಾಷಿಗರನ್ನು ನಿದ್ದೆ ಕೆಡಿಸುತ್ತಿರೋ ಈ ಸುವರ್ಣ ಗಳಿಗೆಯಲ್ಲಿ ಇಂತಹ ಕ್ವಾಲಿಟಿ ಸಿನಿಮಾ ಬಂದಿರೋದು ಮನರಂಜನಾ ಕ್ಷೇತ್ರದ ಗತ್ತು ಹೆಚ್ಚಿದಂತಿದೆ. ಇಶಾನ್ ಭರವಸೆಯ ಸೂಪರ್ ಸ್ಟಾರ್ ಆಗಿದ್ದು, ಅಲ್ಟಿಮೇಟ್ ಪರ್ಫಾಮೆನ್ಸ್​ನಿಂದ ಫ್ಯಾನ್ ಫಾಲೋಯಿಂಗ್ ಸಂಪಾದಿಸಿಕೊಂಡಿದ್ದಾರೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES