ಬೆಂಗಳೂರು: ತೆಲುಗು ನಟ ವಿಜಯ್ ದೇವರಕೊಂಡ ಅವರ ತಮ್ಮ ಇತ್ತೀಚಿನ ಚಲನಚಿತ್ರ ಲೈಗರ್ ಸಿನಿಮಾಗೆ ಅಕ್ರಮ ಹಣ ವರ್ಗಾವಣೆಯಾಗಿದೆ ಎಂದು ಇಡಿ ನೋಟಿಸ್ ನೀಡಿದ ಬೆನ್ನಲೆಯಲ್ಲಿ ಇಂದು ತನಿಖೆಗೆ ಸಂಬಂಧಿಸಿದಂತೆ ಬುಧವಾರ ಜಾರಿ ನಿರ್ದೇಶನಾಲಯದ (ಇಡಿ) ಮುಂದೆ ವಿಜಯ್ ದೇವರಕೊಂಡ ಹಾಜರಾದರು.
ಹೈದರಾಬಾದ್‌ನಲ್ಲಿರುವ ಇಡಿ(ಜಾರಿ ನಿರ್ದೇಶನಾಲಯ) ಕಚೇರಿಯಲ್ಲಿ ನಟ ಇಡಿ ಅಧಿಕಾರಿಗಳ ಮುಂದೆ ಹಾಜರಾದರು. ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆಯ (FEMA) ಆಪಾದಿತ ಉಲ್ಲಂಘನೆಯ ಕುರಿತು ಕೇಂದ್ರೀಯ ಸಂಸ್ಥೆ ತನಿಖೆ ನಡೆಸುತ್ತಿದೆ. ಮೂಲಗಳ ಪ್ರಕಾರ, ವಿಜಯ್ ದೇವರಕೊಂಡ ಅವರು ಚಲನಚಿತ್ರಕ್ಕೆ ಹಣದ ಮೂಲಗಳು, ಅವರ ಸಂಭಾವನೆ ಮತ್ತು ಅಮೇರಿಕನ್ ಬಾಕ್ಸರ್ ಮೈಕ್ ಟೈಸನ್ ಸೇರಿದಂತೆ ಇತರ ನಟರಿಗೆ ಪಾವತಿಸಿದ ಬಗ್ಗೆ ಪ್ರಶ್ನಿಸಲಾಗುತ್ತಿದೆ ಎನ್ನಲಾಗುತ್ತಿದೆ.
ನವೆಂಬರ್ 17 ರಂದು, ಇಡಿ ಅಧಿಕಾರಿಗಳು ದಿನವಿಡೀ ಚಲನಚಿತ್ರ ನಿರ್ದೇಶಕ ಪುರಿ ಜಗನ್ನಾಥ್ ಮತ್ತು ನಟಿ-ನಿರ್ಮಾಪಕಿ ಚಾರ್ಮಿ ಕೌರ್ ಅವರನ್ನು ಗ್ರಿಲ್ ಮಾಡಿದ್ದರು. ಈಗ ವಿಜಯ್ ದೇವರಕೊಂಡ ಅವರನ್ನ ವಿಚಾರಣೆ ಮಾಡಿದೆ. ಈ ವರ್ಷದ ಆಗಸ್ಟ್‌ನಲ್ಲಿ ಬಿಡುಗಡೆಯಾದ ಹಿಂದಿ-ತೆಲುಗು ಚಿತ್ರ ‘ಲೈಗರ್’ಗೆ ಹೂಡಿಕೆಯ ಮೂಲದ ಬಗ್ಗೆ ಅವರನ್ನು ಪ್ರಶ್ನಿಸಲಾಯಿತು.
ಅಮೆರಿಕಾದ ಬಾಕ್ಸರ್ ಮೈಕ್ ಟೈಸನ್ ಅವರು ಸುಮಾರು 125 ಕೋಟಿ ರೂಪಾಯಿಗಳ ಬಜೆಟ್‌ನಲ್ಲಿ ನಿರ್ಮಿಸಲಾದ ಚಲನಚಿತ್ರದಲ್ಲಿ ವಿಸ್ತೃತ ಅತಿಥಿ ಪಾತ್ರವನ್ನು ನಿರ್ವಹಿಸಿದ್ದಾರೆ. ವಿಜಯ್ ಮತ್ತು ಅನನ್ಯಾ ಪಾಂಡೆ ಮುಖ್ಯಭೂಮಿಕೆಯಲ್ಲಿರುವ ಈ ಚಿತ್ರವು ಲಾಸ್ ವೇಗಾಸ್‌ನಲ್ಲಿ ಮೆಗಾ ಶೂಟ್‌ಗಳನ್ನು ಹೊಂದಿತ್ತು.