Sunday, January 12, 2025

ಅಭಿ- ಸಪ್ತಮಿ ಕಾಳಿ ಕಿಕ್​ಸ್ಟಾರ್ಟ್​.. ಜೂನಿಯರ್ ಜಾಲಿ ರೈಡ್

ಬ್ಯಾಡ್ ಮ್ಯಾನರ್ಸ್​ ಶೂಟಿಂಗ್ ಮುಗಿಸಿ, ಪೋಸ್ಟ್ ಪ್ರೊಡಕ್ಷನ್​ನಲ್ಲಿ ಬ್ಯುಸಿ ಆಗ್ತಿದ್ದಂತೆ, ಯಂಗ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಹೊಚ್ಚ ಹೊಸ ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಯೆಸ್.. ಕಾಳಿ ಕಿಕ್​ಸ್ಟಾರ್ಟ್​ ಆಗಿದ್ದು, ಕಾಂತಾರ ಬ್ಯೂಟಿ ಸಪ್ತಮಿ ಗೌಡ ಜೊತೆ ರೌದ್ರಾವತಾರ ತಾಳೋಕೆ ಸಜ್ಜಾಗಿದ್ದಾರೆ. ಜೊತೆಗೆ ನಮ್ಮ ಮೆಟ್ರೋ ಹತ್ತಿ ಸಿಟಿ ರೌಂಡ್ಸ್ ಹೊಡೆದಿದ್ದಾರೆ ಅಭಿ.

  • ಕಾಂತಾರ ಬ್ಯೂಟಿ ಜೊತೆ ರಗಡ್ ಲುಕ್​ನಲ್ಲಿ ಯಂಗ್ ರೆಬೆಲ್

ಪೈಲ್ವಾನ್ ಸಿನಿಮಾ ತೆರೆಕಂಡು ಮೂರು ವರ್ಷಗಳೇ ಕಳೆದಿದೆ. ಆದ್ರೆ ಅಂದಿನಿಂದ ನಿರ್ದೇಶಕ ಕೃಷ್ಣ ಮಾತ್ರ ಬೇರಾವ ಚಿತ್ರಕ್ಕೆ ಕೈಹಾಕದೆ ಒಂದೊಳ್ಳೆ ಕಥೆಯ ತಯಾರಿಯಲ್ಲಿದ್ದರು. ಅದೇ ಕಾಳಿ. ಹೌದು.. ಟೈಟಲ್ ಸಖತ್ ರಗಡ್ ಆಗಿದ್ದು, ಮಾಸ್ ಮಸಾಲ ಎಂಟರ್​ಟೈನರ್ ಆಗಿರಲಿದೆ ಅನ್ನೋದ್ರ ಹಿಂಟ್ ಬಿಟ್ಟುಕೊಟ್ಟಿದ್ರು. ಇದೀಗ ಆ ಸಿನಿಮಾ ನಿನ್ನೆ ಬಂಡೆ ಮಹಾಂಕಾಳಿ ಆಲಯದಲ್ಲಿ ಅಫಿಶಿಯಲಿ ಸೆಟ್ಟೇರಿದೆ.

ನಿರ್ದೇಶಕ ಕೃಷ್ಣ ಆ್ಯಕ್ಷನ್ ಕಟ್ ಹೇಳ್ತಿರೋ ಬಹುಕೋಟಿ ಸಿನಿಮಾ ಇದಾಗಲಿದ್ದು, ಇದಕ್ಕೆ ಪತ್ನಿ ಸ್ವಪ್ನ ಕೃಷ್ಣ ಅವ್ರೇ ಬಂಡವಾಳ ಹೂಡುತ್ತಿದ್ದಾರೆ. ಯಂಗ್ ರೆಬೆಲ್​ ಸ್ಟಾರ್ ಅಭಿಷೇಕ್ ಅಂಬರೀಶ್​ಗೆ ಅಮರ್ ಹಾಗೂ ಬ್ಯಾಡ್ ಮ್ಯಾನರ್ಸ್​ ಬಳಿಕ ಮೂರನೇ ಸಿನಿಮಾ ಆಗಿ ಹೊರಹೊಮ್ಮಲಿದೆ ಕಾಳಿ.

ಕಾಂತಾರ ಚಿತ್ರದಿಂದಾಗಿ ವರ್ಲ್ಡ್​ ಸೆನ್ಸೇಷನ್ ಆಗಿರೋ ಸಪ್ತಮಿ ಗೌಡ ಈ ಚಿತ್ರದ ನಾಯಕನಟಿ. ಅಭಿಷೇಕ್ ಈ ಸಿನಿಮಾಗಾಗಿ ನ್ಯೂ ಲುಕ್​ನಲ್ಲಿ ಕಾಣಸಿಗಲಿದ್ದು, ರೆಬೆಲಿಯನ್ ಆಗಿ ಕಿಚ್ಚು ಹತ್ತಿಸಲಿದ್ದಾರೆ. ಹೌದು.. 1990ರ ದಶಕದ ಕಾವೇರಿ ಗಲಭೆಯ ಹಿನ್ನೆಲೆ ಇರೋ ಸಿನಿಮಾದಲ್ಲಿ ಒಂದಷ್ಟು ನೈಜ ಘಟನೆ ಆಧಾರಿತ ಅಂಶಗಳು ಕೂಡ ಕೂಡಿರಲಿವೆ.

ಟಗರು, ಸಲಗ ಚಿತ್ರಗಳು ಖ್ಯಾತಿಯ ಚರಣ್ ರಾಜ್ ಈ ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡ್ತಿರೋದು ಇಂಟರೆಸ್ಟಿಂಗ್. ಕೆಜಿಎಫ್ ಖ್ಯಾತಿಯ ಚಂದ್ರಮೌಳಿ ಈ ಚಿತ್ರಕ್ಕೆ ಡೈಲಾಗ್ಸ್ ಬರೆಯುತ್ತಿದ್ದು, ದೀಪು ಎಸ್ ಕುಮಾರ್ ಸಂಕಲನ, ಹೆಬ್ಬುಲಿ, ಪೈಲ್ವಾನ್ ಸಿನಿಮಾಟೋಗ್ರಫರ್ ಕರುಣಾಕರ್ ಇಲ್ಲೂ ಕ್ಯಾಮೆರಾ ಕೈಚಳಕ ತೋರಲಿದ್ದಾರೆ.

ಮುಂಗಾರುಮಳೆ ಸೇರಿದಂತೆ ಸುಮಾರು 25ಕ್ಕೂ ಅಧಿಕ ಚಿತ್ರಗಳಿಗೆ ಸಿನಿಮಾಟೋಗ್ರಾಫರ್ ಆಗಿ ಕಾರ್ಯ ನಿರ್ವಹಿಸಿರೋ ಕೃಷ್ಣ ಅವ್ರು ಗಜಕೇಸರಿ, ಹೆಬ್ಬುಲಿ, ಪೈಲ್ವಾನ್ ಚಿತ್ರಗಳ ಬಳಿಕ ಕಾಳಿ ಸಿನಿಮಾನ ಡೈರೆಕ್ಟ್ ಮಾಡ್ತಿದ್ದಾರೆ. ಸದಾ ಹೊಸತನಕ್ಕೆ ಹಾತೊರೆಯೋ ಕೃಷ್ಣ, ಈ ಬಾರಿಯೂ ಒಂದೊಳ್ಳೆ ಜನಮೆಚ್ಚೋ ಸಿನಿಮಾ ಕೊಡೋ ಧಾವಂತದಲ್ಲಿದ್ದಾರೆ.

ಇದ್ರ ಹೊರತಾಗಿ ಅಭಿ ರೀಸೆಂಟ್ ಆಗಿ ಮೊದಲ ಬಾರಿ ನಮ್ಮ ಮೆಟ್ರೋ ಟ್ರೈನ್ ಹತ್ತಿದ್ದು, ಶ್ರೀಸಾಮಾನ್ಯನಂತೆ ಮೆಟ್ರೋದಲ್ಲಿ ಪ್ರಯಾಣ ಮಾಡಿ ಸಂಭ್ರಮಿಸಿದ್ದಾರೆ. ಸಾಕಷ್ಟು ಮಂದಿ ಅಭಿಷೇಕ್ ಜೊತೆ ಸೆಲ್ಫಿಗೆ ಮುಗಿಬಿದ್ದಿದ್ದಾರೆ. ಆದ್ರೂ ಸಹ ಎಕ್ಸ್​ಪೀರಿಯೆನ್ಸ್​ಗಾಗಿ ತಮ್ಮ ಮುಂದಿನ ಚಿತ್ರದ ಡೈರೆಕ್ಟರ್ ಅಯೋಗ್ಯ ಫೇಮ್ ಮಹೇಶ್ ಜೊತೆಗೂಡಿ ಮೆಟ್ರೋ ರೌಂಡ್ಸ್ ಹೊಡೆದಿದ್ದಾರೆ ಅಭಿಷೇಕ್.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES