Wednesday, January 22, 2025

ಹಿರೋಶಿಮಾ ಒಡಲೊಳಗಿನ ಸರಿ- ತಪ್ಪುಗಳ ಲೆಕ್ಕ ಗೊತ್ತಾ..?

ನಟರಾಕ್ಷಸ ಡಾಲಿ ಸದ್ಯ ಪ್ಯಾನ್ ಇಂಡಿಯಾ ಸೆನ್ಸೇಷನ್. ಕಲಾವಿದನಾಗಿ ತರಹೇವಾರಿ ಪಾತ್ರಗಳಿಗೆ ಜೀವ ತುಂಬ್ತಿರೋ ಮ್ಯಾನ್ ಆಫ್ ಮಲ್ಟಿ ಟ್ಯಾಲೆಂಟ್, ಹಿರೋಶಿಮಾ ಆಗಿ ಕಮಾಲ್ ಮಾಡೋಕೆ ಮುಂದಾಗಿದ್ದಾರೆ. ಜಮಾಲಿಗುಡ್ಡ ಟೀಸರ್ ಲಾಂಚ್ ಆಗಿದ್ದು, ಸರಿ- ತಪ್ಪುಗಳು, ಪಾಪ- ಪುಣ್ಯಗಳ ಲೆಕ್ಕಾಚಾರ ನಡೀತಿದೆ.

  • ಟೀಸರ್​ನಲ್ಲಿ ಖೈದಿ ಕರಾಮತ್ತು.. ಪಾಪ, ಪುಣ್ಯಗಳ ಮಸಲತ್ತು
  • ವರ್ಷದ ಕಟ್ಟ ಕಡೆಯ ಸಿನಿಮಾ ಆಗ್ತಿದೆ ಡಾಲಿ ಜಮಾಲಿ ಗುಡ್ಡ
  • ಬಹುತಾರಾಗಣದ ಸ್ಯಾಂಡಲ್​ವುಡ್​ನ ನ್ಯೂ ಎಕ್ಸ್​ಪೆರಿಮೆಂಟ್

ಭಾರತೀಯ ಚಿತ್ರರಂಗದ ಮೋಸ್ಟ್ ವರ್ಸಟೈಲ್ ಌಕ್ಟರ್​ಗಳಲ್ಲಿ ನಮ್ಮ ಸ್ಯಾಂಡಲ್​ವುಡ್​ನ ಸೆನ್ಸೇಷನ್ ಡಾಲಿ ಧನಂಜಯ ಕೂಡ ಒಬ್ರು. ಇವ್ರ ಸಿನಿಮಾಗಳು ಹಾಗೂ ಪಾತ್ರಗಳ ಆಯ್ಕೆ ನಿಜಕ್ಕೂ ಅದ್ಭುತ. ಬರೀ ಹೀರೋ ರೋಲ್​ಗಷ್ಟೇ ಜೋತು ಬೀಳದೆ, ಖಳನಾಯಕ, ಪೋಷಕ ನಟ ಸೇರಿದಂತೆ ಪಾಲಿಗೆ ಬಂದ ಪಾತ್ರಕ್ಕೆ ಜೀವ ತುಂಬೋ ಕಲಾವಿದ.

ಎಂಥದ್ದೇ ಪಾತ್ರ ಕೊಟ್ಟರೂ ನೀರು ಕುಡಿದಷ್ಟೇ ಸಲೀಸಾಗಿ ಲೀಲಾಜಾಲವಾಗಿ ನಟಿಸಬಲ್ಲ ಅತ್ಯದ್ಭುತ ಪ್ರತಿಭೆ. ಎಷ್ಟೇ ದೊಡ್ಡ ಮಟ್ಟಕ್ಕೆ ಬೆಳೆದು ನಿಂತಿದ್ರೂ ಹಮ್ಮ ಬಿಮ್ಮು ಇಲ್ಲದ ಸರಳ ಸಜ್ಜನಿಕೆಯ ವ್ಯಕ್ತಿ. ಚಿತ್ರರಂಗದಲ್ಲಿ ಸಾಕಷ್ಟು ಕಲಿತಿರೋ ಇವ್ರು, ಮತ್ತೆ ಚಿತ್ರರಂಗಕ್ಕೆ ಏನನ್ನಾದ್ರೂ ನೀಡಬೇಕು ಅನ್ನೋ ತುಡಿತವಿರೋ ಸಿನಿಮೋತ್ಸಾಹಿ. ಅದೇ ಕಾರಣದಿಂದ ತನ್ನಂತೆ ಸಂಕಷ್ಟದಲ್ಲಿರೋ ಹೊಚ್ಚ ಹೊಸ ಪ್ರತಿಭೆಗಳಿಗೆ ತಮ್ಮದೇ ಬ್ಯಾನರ್​ನಡಿ ಅವಕಾಶಗಳನ್ನ ನೀಡ್ತಿದ್ದಾರೆ.

ನಟನಾಗಿ, ನಿರ್ಮಾಪಕನಾಗಿ, ಬರಹಗಾರವಾಗಿ ಡಾಲಿ ಧೂಳೆಬ್ಬಿಸ್ತಿದ್ದಾರೆ. ಸದ್ಯ ಇವ್ರ ವೆರೈಟಿ ಪಾತ್ರಗಳ ಸಾಲಿಗೆ ಒನ್ಸ್ ಅಪ್ ಆನ್ ಎ ಟೈಮ್ ಇನ್ ಜಮಾಲಿಗುಡ್ಡ ಸೇರ್ಪಡೆ ಆಗ್ತಿದೆ. ಹೌದು.. ಟೈಟಲ್​ನಂತೆ ಕಥೆ ಕೂಡ ಸಖತ್ ಡಿಫರೆಂಟ್. ಇಲ್ಲಿ ಡಾಲಿ ಹಿರೋಶಿಮಾ ಅನ್ನೋ ಖೈದಿಯ ಪಾತ್ರ ಪೋಷಿಸಿದ್ದಾರೆ. ಪಾತ್ರದೊಳಗೆ ಪರಕಾಯ ಪ್ರವೇಶ ಮಾಡೋ ಡಾಲಿ, ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿಸ್ತಾರೆ.

ನಿಹಾರಿಕಾ ಮೂವೀಸ್ ಬ್ಯಾನರ್​ನಡಿ ಶ್ರೀಹರಿ ನಿರ್ಮಾಣದ ಜಮಾಲಿಗುಡ್ಡ ಸಿನಿಮಾಗೆ ಕುಶಾಲ್ ಗೌಡ ಆ್ಯಕ್ಷನ್ ಕಟ್ ಹೇಳಿದ್ದಾರೆ. ಅರ್ಜುನ್ ಜನ್ಯ ಮ್ಯೂಸಿಕ್ ಹಾಗೂ ಕಾರ್ತಿಕ್ ಸಿನಿಮಾಟೋಗ್ರಫಿ ಇರೋ ಈ ಚಿತ್ರಕ್ಕೆ ಹರೀಶ್ ಕೊಮ್ಮೆ ಶಾರ್ಪ್​ ಎಡಿಟಿಂಗ್ ಇದೆ. ನಿರ್ದೇಶಕ ಕುಶಾಲ್ ಗೌಡ ಜೊತೆ ಟಗರು, ಸಲಗ ಫೇಮ್ ಮಾಸ್ತಿ ಡೈಲಾಗ್ಸ್ ಚಿತ್ರಕ್ಕಿದ್ದು, ಟೀಸರ್​ನಲ್ಲಿ ಚಿತ್ರದ ಗಮ್ಮತ್ತು ತೋರಿಸೋ ಪ್ರಯತ್ನ ನಡೆದಿದೆ.

ನಟರಾಕ್ಷಸ ಡಾಲಿ ಜೊತೆ ಅದಿತಿ ಪ್ರಭುದೇವ ಜೋಡಿಯಾಗಿ ನಟಿಸಿದ್ದು, ಬಾಲನಟಿ ಪ್ರಾಣ್ಯ ಬಹುಮುಖ್ಯ ಪಾತ್ರದಲ್ಲಿ ಕಾಣಸಿಗಲಿದ್ದಾರೆ. ಇನ್ನು ನಾಗಸಾಖಿ ಪಾತ್ರದಲ್ಲಿ ಯಶ್ ಶೆಟ್ಟಿ, ಪ್ರಕಾಶ್ ಬೆಳವಾಡಿ, ಭಾವನಾ ರಾಮಣ್ಣ,  ಮಯೂರಿ ನಟರಾಜ್, ಸಂತೋಷ್, ರುಷಿಕಾ ರಾಜ್,  ಸತ್ಯಣ್ಣ ಹೀಗೆ ದೊಡ್ಡ ತಾರಾಗಣವಿದೆ.

ಒಟ್ಟಾರೆ ಸರಿ ತಪ್ಪುಗಳು ಹಾಗೂ ಪಾಪ ಪುಣ್ಯಗಳ ಲೆಕ್ಕಾಚಾರದಲ್ಲಿ ಹಿರೋಶಿಮಾ ಪಾತ್ರ ಹೇಗೆ ಸಾಗುತ್ತೆ ಅನ್ನೋದೇ ಈ ಚಿತ್ರ. ಈ ಹಿಂದೆ ಹಾಡೊಂದರಿಂದ ಸಿಕ್ಕಾಪಟ್ಟೆ ಫ್ರೆಶ್ ಕಂಟೆಂಟ್ ಫೀಲ್ ಕೊಟ್ಟಿದ್ದ ಜಮಾಲಿಗುಡ್ಡ ಇದೀಗ ಟೀಸರ್​ನಿಂದ ನಿರೀಕ್ಷೆ ಹೆಚ್ಚಿಸಿದೆ. ಸಿನಿಮಾ ಇದೇ ಡಿಸೆಂಬರ್ 30ಕ್ಕೆ ವರ್ಷದ ಕಟ್ಟ ಕಡೆಯ ಸಿನಿಮಾ ಆಗಿ ತೆರೆಗಪ್ಪಳಿಸುತ್ತಿದ್ದು, ಡಾಲಿಯ ಮತ್ತೊಂದು ಅವತಾರ ಬಯಲಾಗಲಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES