Friday, June 14, 2024

ಯುವಕನ ಜೊತೆ ತೆರಳಿದ್ದ ಅಪ್ರಾಪ್ತ ಬಾಲಕಿ‌ ಅನುಮಾನಾಸ್ಪದ ಸಾವು

ಹಾಸನ : ಮದುವೆ ನಿಶ್ಚಯವಾಗಿದ್ದ ಅಪ್ರಾಪ್ತ ಬಾಲಕಿ ಅನುಮಾನಾಸ್ಪದ ಸಾವನ್ನಪ್ಪಿದ ಘಟನೆ ಹಾಸನ‌ ಜಿಲ್ಲೆ ಅರಕಲಗೂಡು ತಾ. ಕೊಣನೂರು ಹೋಬಳಿಯಲ್ಲಿ ನಡೆದಿದೆ.

ಕೂಡ್ಲೂರು ಗ್ರಾಮದ ದಿನೇಶ್ ಜೊತೆ 2 ತಿಂಗಳ ಹಿಂದೆ ಬಾಲಕಿಗೆ ಮದುವೆ ನಿಶ್ಚಯವಾಗಿದ್ದು, ಇನ್ನೂ 16 ವರ್ಷದ ಬಾಲಕಿಗೆ ಮದುವೆ ನಿಶ್ಚಯ ಮಾಡಿದ್ದರು. ಈ ವೇಳೆ ನವೆಂಬರ್ 29ರ ರಾಮನಾಥಪುರ ಷಷ್ಠಿ ಜಾತ್ರೆಗೆಂದು ಕರೆದೊಯ್ದಿದ್ದ ದಿನೇಶ್, ಸೋಮವಾರ 4 ಗಂಟೆಗೆ ನಿಮ್ಮ ಮಗಳು ವಿಷ ಕುಡಿದಿದ್ದಾಳೆಂದು ಪೋಷಕರಿಗೆ ಫೋನ್ ಮಾಡಿದ್ದಾರೆ.

ಇನ್ನು, ಆಸ್ಪತ್ರೆಗೆ ದಾಖಲಾಗೋ ವೇಳೆಗೆ ಮೃತಪಟ್ಟಿದ್ದ ಅಪ್ರಾಪ್ತ ಬಾಲಕಿ, ಮಗಳ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದ್ದಾರೆ. ಅದಲ್ಲದೇ, ತಾನೂ ವಿಷ ಸೇವನೆ ಮಾಡಿ ಆಸ್ಪತ್ರೆ ಸೇರಿರೋ ಬಾಲಕಿ ಕರೆದೊಯ್ದಿದ್ದ. ಬಾಲಕಿ ಮೃತದೇಹದ ಮೇಲೆ ಗಾಯದ ಗುರುತು, ಕುತ್ತಿಗೆಯಲ್ಲಿ ಪೆಟ್ಟಾಗಿರೋದು ಪತ್ತೆಯಾಗಿದ್ದು, ಗಾಯದ ಗುರುತು ಇರೋ ಹಿನ್ನೆಲೆಯಲ್ಲಿ ಸಾವಿನ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಹೀಗಾಗಿ ಕೊಣನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES