Wednesday, January 22, 2025

ಸುಳ್ಳು ಪತ್ತೆ ಪರೀಕ್ಷೆ ವೇಳೆ ಆಘಾತಕಾರಿ ಹೇಳಿಕೆ ನೀಡಿದ ಹಂತಕ

ನವದೆಹಲಿ: ಶ್ರದ್ಧಾವಾಕ‌ರ್​ ಹತ್ಯೆ ಆ ಕ್ಷಣದ ಉದ್ವೇಗದಲ್ಲಿ ನಡೆದ ಘಟನೆ ಅಫ್ತಾಬ್ ಈ ಹಿಂದೆ ಹೇಳಿದು ಸುಳ್ಳು ಎಂಬುದು ಪತ್ತೆ ಪರೀಕ್ಷೆಯಲ್ಲಿ ತಿಳಿದುಬಂದಿದೆ. ಸಂಬಂಧ ಕಡಿದುಕೊಳ್ಳಲು ಹೊರಟಿದ್ದ ಶ್ರದ್ಧಾಳ ಕೊಲೆಗೆ ಹಲವು ದಿನಗಳ ಹಿಂದೆಯೇ ಆತ ಯೋಜಿಸಿದ್ದ ಎಂದು ಗೊತ್ತಾಗಿದೆ.

ತನ್ನ ಪ್ರೇಯಸಿ ಶ್ರದ್ಧಾಳನ್ನು ಕತ್ತುಹಿಸುಕಿ ಹತ್ಯೆಗೈದು, ಬಳಿಕ 35 ತುಂಡು ಮಾಡಿದ್ದ ಪಾಪಿ ಅಫ್ತಾಬ್ ಪೂನಾವಾಲನಿಗೆ ಪೊಲೀಸರು ನಡೆಸಿದ ಸುಳ್ಳು ಪತ್ತೆ ಪರೀಕ್ಷೆ ವೇಳೆ ಸ್ಫೋಟಕ ಅಂಶಗಳು ಬೆಳಕಿಗೆ ಬಂದಿವೆ.

ತಾನು ಶ್ರದ್ಧಾ ಮಾತ್ರವಲ್ಲದೆ ಇತರ 20 ಹಿಂದೂ ಯುವತಿಯರೊಂದಿಗೆ ಸಂಪರ್ಕ ಹೊಂದಿದ್ದೆ. ಶ್ರದ್ಧಾಳನ್ನು ಕೊಂದಿರುವುದಕ್ಕೆ ಯಾವುದೇ ಪಶ್ಚಾತಾಪವಿಲ್ಲ, ಇದಕ್ಕಾಗಿ ನನಗೆ ಗಲ್ಲುಶಿಕ್ಷೆ ವಿಧಿಸಿದರೂ ಸ್ವರ್ಗದಲ್ಲಿ ಅಪ್ಸರೆಯರೊಂದಿಗೆ ಸೇರಿ ಖುಷಿಯಾಗಿರುತ್ತೇನೆ ಎಂದು ಅಫ್ತಾಬ್ ಹೇಳಿದ್ದಾನೆ.

RELATED ARTICLES

Related Articles

TRENDING ARTICLES