Wednesday, January 22, 2025

ಕಾಂಗ್ರೆಸ್​ ಶಾಸಕನ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲು

ಚಿಕ್ಕಮಗಳೂರು: ಜಿಲ್ಲೆಯ ಶೃಂಗೇರಿ ಮತಕ್ಷೇತ್ರದ ಕಾಂಗ್ರೆಸ್ ಶಾಸಕ ಟಿ.ಡಿ ರಾಜೇಗೌಡ ವಿರುದ್ಧ ಮತ್ತೆ ಲೋಕಾಯುಕ್ತದಲ್ಲಿ ದೂರು ದಾಖಲಾಗಿದ್ದು, ಈ ಮೂಲಕ ರಾಜೇಗೌಡಗೆ ಮತ್ತೆ ಸಂಕಷ್ಟ ಎದುರಾಗಿದೆ.

ಕೊಪ್ಪ ಮೂಲದ ದಿನೇಶ್ ಹೊಸೂರು ಎಂಬುವರಿಂದ ಶಾಸಕ ಟಿ.ಡಿ ರಾಜೇಗೌಡ ಅವರು 123 ಕೋಟಿಯಷ್ಟು ಅಕ್ರಮ ಮಾಡಿದ್ದಾರೆ ಎಂದು ಮತ್ತೆ ದೂರು ಸಲ್ಲಿಸಲಾಗಿದೆ.

ಇದೇ ತಿಂಗಳ 18ರಂದು ಕೊಪ್ಪ ಮೂಲದ ವಿಜಯಾನಂದ ದೂರು ನೀಡಿದ್ದರು. ದೂರು ದಾಖಲಾದ 4 ರಿಮದ 5 ದಿನದಲ್ಲಿ ದೂರುದಾರ ವಿಜಯಾನಂದ ಕೇಸ್ ಹಿಂಪಡೆದಿದ್ದರು. ವಾರ್ಷಿಕ 35 ಲಕ್ಷ ಆದಾಯ ತೋರಿಸಿದ್ದ ರಾಜೇಗೌಡ, 123 ಕೋಟಿ ಆಸ್ತಿ ಖರೀದಿ ಹೇಗೆ ಎಂದು ಪ್ರಶ್ನೆ ಮಾಡಲಾಗಿತ್ತು.

ಈಗ ಮತ್ತೆ ಈ ಹಣ ಪ್ರಶ್ನಿಸಿ ಚಿಕ್ಕಮಗಳೂರು ಲೋಕಾಯುಕ್ತದಲ್ಲಿ ಮತ್ತೆ ದಿನೇಶ್ ದೂರು ನೀಡಿದ್ದಾರೆ. ಈ ಮೂಲಕ ಶೃಂಗೇರಿ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡಗೆ ಮಗ್ಗಲ-ಮುಳ್ಳಾಗುತ್ತಾ ಶಬಾನ ರಂಜಾನ್ ಸಂಸ್ಥೆ ಕಾದುನೋಡಬೇಕಿದೆ.

RELATED ARTICLES

Related Articles

TRENDING ARTICLES