Wednesday, January 22, 2025

50 ಲಕ್ಷಕ್ಕೂ ಹೆಚ್ಚು ಮೌಲ್ಯದ ಇ-ಸಿಗರೇಟ್ ಜಪ್ತಿ

ಬೆಂಗಳೂರು : ಇತ್ತೀಚೆಗೆ ಹೆಚ್ಚಾಗಿ ಯುವ ಪೀಳಿಗೆ ಇ-ಸಿಗರೇಟ್ ಮೊರೆ ಹೋಗುತ್ತಿದ್ದಾರೆ. 2019ರಲ್ಲಿ ಮನುಷ್ಯನ ಮೆದುಳು ಹಾಗೂ ಆರೋಗ್ಯಕ್ಕೆ ಹೆಚ್ಚು ಹಾನಿಕಾರಕ ಎಂದು ಸರ್ಕಾರ ಇ- ಸಿಗರೇಟ್ ಬ್ಯಾನ್ ಮಾಡಿದೆ.

ನಗರದ ಕೋರಮಂಗಲ, ಬಾಣಸವಾಡಿ, ಪುಲಕೇಶಿನಗರ ಠಾಣಾ ವ್ಯಾಪ್ತಿಯಲ್ಲಿನ ಅಂಗಡಿಗಳ‌ಲ್ಲಿ ಅಕ್ರಮವಾಗಿ ನಿಷೇಧಿತ ಇ- ಸಿಗರೇಟ್ ಮಾರಾಟ ಮಾಡುತ್ತಿದ್ದಾರೆ. ಕೇರಳ ಮೂಲದ ಆರೋಪಿಗಳು, ವಿದೇಶದಿಂದ ಅಮದು‌ ಮಾಡಿಕೊಂಡು ನಗರದಲ್ಲಿ ಮಾರಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಸಿಸಿಬಿಯ ಮಾದಕ ದ್ರವ್ಯ ನಿಗ್ರಹ ದಳದಿಂದ ದಾಳಿ ಮಾಡಲಾಗಿದೆ.

ಇನ್ನು, ಸುಮಾರು 50 ಲಕ್ಷಕ್ಕೂ ಹೆಚ್ಚು ಮೌಲ್ಯದ ಇ-ಸಿಗರೇಟ್ ಜಪ್ತಿ ಮಾಡಿದ್ದಾರೆ. ಒಂದು ಇ- ಸಿಗರೇಟ್ ಬೆಲೆ 5 ಸಾವಿರದವರೆಗೆ ಇರಬಹುದು ಎಂದು ಅಂದಾಜಿಸಲಾಗಿದೆ. ಪುಲಕೇಶಿ ನಗರ, ಬಾಣಸವಾಡಿ, ಕೋರಮಂಗಲ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES