ಆನೆಕಲ್ : ಎಲೆಕ್ಟ್ರಾನಿಕ್ ಸಿಟಿ ನೀಲಾದ್ರಿ ನಗರದ ಬಳಿಯ ವಿಲೇಜ್ ರೆಸ್ಟೋರೆಂಟ್ನಲ್ಲಿ 15 ರಿಂದ 20 ಯುವಕರ ಗ್ಯಾಂಗ್ನಿಂದ ಗೂಂಡಾಗಿರಿ ನಡೆದಿದೆ. ಈ ವೇಳೆ ಪುಂಡರ ಗ್ಯಾಂಗ್ ರೆಸ್ಟೋರೆಂಟ್ನ ಮಹಿಳಾ ಸಿಬ್ಬಂದಿ ಮೇಲೂ ಹಲ್ಲೆ ನಡೆಸಿದ್ದಾರೆ.
ನ.20ರಂದು ರಾತ್ರಿ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಇನ್ನು ಈ ಗಲಾಟೆಯಲ್ಲಿ ಬೆಂಗಳೂರು ನಗರ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ರಾಮಚಂದ್ರಪ್ಪನ ಮಗ ಧನುಶ್ ಕೆಸಿ ದರ್ಪ ಮೆರೆದಿದ್ದಾನೆ. ಕಾಂಗ್ರೆಸ್ ಮುಖಂಡನ ಮಗನ ಬರ್ತ್ಡೇ ಪಾರ್ಟಿ ಹಿನ್ನೆಲೆ ರಾತ್ರಿ 11:30 ರ ಸುಮಾರಿಗೆ ವಿಲೇಜ್ ರೆಸ್ಟೋರೆಂಟ್ಗೆ ಬಂದಿದ್ದ ಯುವಕರ ತಂಡ ಪುಂಡಾಟ ನಡೆಸಿದೆ.
ರೆಸ್ಟೋರೆಂಟ್ಗೆ ಬಂದಿದ್ದ ಯುವಕರು ಇಪ್ಪತ್ತು ಮಂದಿಗೆ ಊಟ ಆರ್ಡರ್ ಮಾಡಿದ್ದಾರೆ. ಈ ವೇಳೆ ರೆಸ್ಟೋರೆಂಟ್ ಸಿಬ್ಬಂದಿ ಊಟ ಸಿದ್ಧ ಮಾಡಲು ಆಗದು ಎಂದಿದ್ದಾರೆ. ಈ ವೇಳೆ ತಾವು ಆರ್ಡರ್ ಮಾಡಿದ ಊಟವನ್ನೇ ಕೊಡುವಂತೆ ಆವಾಜ್ ಹಾಕಿ ರೆಸ್ಟೋರೆಂಟ್ ಮಹಿಳಾ ಸಿಬ್ಬಂದಿ ಜೊತೆ ಅಸಭ್ಯ ವರ್ತನೆ ತೋರಿದ್ದಾರೆ. ಈ ವೇಳೆ ಯುವಕರ ವರ್ತನೆಯನ್ನು ಪ್ರಶ್ನೆ ಮಾಡಿದ ಸರ್ವೀಸ್ ಬಾಯ್ ಮೇಲೆ ಹಲ್ಲೆ ನಡೆಸಲಾಗಿದೆ. ಜಗಳ ಬಿಡಿಸಲು ಬಂದ ಇತರೆ ಸಿಬ್ಬಂದಿ ಮೇಲೂ ಹಲ್ಲೆ ನಡೆದಿದೆ.
ಇನ್ನು, ಗಲಾಟೆಯಲ್ಲಿ ರೆಸ್ಟೋರೆಂಟ್ನಲ್ಲಿದ್ದ ಪೀಠೋಪಕರಣ, ಟೇಬಲ್ಗಳನ್ನು ಧ್ವಂಸ ಮಾಡಲಾಗಿದೆ. ಈ ಬಗ್ಗೆ ಪೊಲೀಸರಿಗೆ ಕರೆ ಮಾಡಿದರೂ ನೆರವಿಗೆ ಬಂದಿಲ್ಲ ಎಂದು ರಾತ್ರಿಪಾಳಿಯಲ್ಲಿದ್ದ ಎಲೆಕ್ಟ್ರಾನಿಕ್ ಸಿಟಿ ಪೊಲೀಸರ ವಿರುದ್ಧ ಆರೋಪ ಕೇಳಿ ಬಂದಿದೆ. ಇನ್ನು ಗಾಯಾಳು ಸಿಬ್ಬಂದಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.