Sunday, January 19, 2025

ಮಂಗ್ಲಿ ಕಂಠದಲ್ಲಿ ಗಿಲ್ಲಕ್ಕೋ ಶಿವನ ಖದರ್ ಒಮ್ಮೆ ನೋಡಿ

ಗಿಲ್ಲಕ್ಕೋ ಶಿವನ ಹಾವಳಿ ದೀಪಾವಳಿಗಿಂತ ಜೋರಿದೆ. ಯೆಸ್.. ಸಿಂಗಲ್ ಟೀಸರ್​ನಿಂದ ಹಲ್​ಚಲ್ ಎಬ್ಬಿಸಿದ್ದ ಕರುನಾಡ ಚಕ್ರವರ್ತಿ, ಇದೀಗ ಮಾಸ್ ಖದರ್ ಸಾಂಗ್​ನಿಂದ ಸಂಚಲನ ಮೂಡಿಸಿದ್ದಾರೆ. ವೇದ ಆಲ್ಬಂನ ಫಸ್ಟ್ ಸಾಂಗ್ ಲಾಂಚ್ ಆಗಿದ್ದು, ಅಭಿಮಾನಿ ದೇವರುಗಳಿಗೆ ಸಖತ್ ಕಿಕ್ ಕೊಡ್ತಿದೆ.

  • ನಾಗೇಂದ್ರ ಪ್ರಸಾದ್ ಲೈನ್.. ಜನ್ಯ ಟ್ಯೂನ್.. ವೇದ ಪವರ್

ಭಜರಂಗಿ- 2 ಹಾಗೂ ಬೈರಾಗಿ ಸಿನಿಮಾಗಳ ನಂತ್ರ ಡಾ. ಶಿವರಾಜ್​ಕುಮಾರ್ ನಟನೆಯ ಬಹು ನಿರೀಕ್ಷಿತ ವೇದ ಸಿನಿಮಾದ ರಿಲೀಸ್ ಡೇಟ್ ಕನ್ಫರ್ಮ್​ ಆಗಿದೆ. ಇದೇ ಡಿಸೆಂಬರ್ 23ಕ್ಕೆ ವರ್ಷದ ಕೊನೆಯ ಬಿಗ್ಗೆಸ್ಟ್ ಸಿನಿಮಾ ಆಗಿ ತೆರೆಗಪ್ಪಳಿಸಲಿರೋ ವೇದ, ಶಿವಣ್ಣ ಸಿನಿಜರ್ನಿಯಲ್ಲೇ ಬಹಳ ಮಹತ್ವವಾದದ್ದು. ಕಾರಣ ಇದು ಅವ್ರ 125ನೇ ಎಂಟರ್​ಟೈನರ್.

ಹರ್ಷ ನಿರ್ದೇಶನದ ವೇದ ಹತ್ತು ಹಲವು ವಿಶೇಷತೆಗಳಿಂದ ಸಾದಾ ಸೀದಾ ಸಿನಿಮಾ ಅನಿಸಿಲ್ಲ. ಹೌದು.. 1960ರ ದಶಕದ ರಕ್ತಸಿಕ್ತ ಕಥಾನಕ ಇದಾಗಿರಲಿದೆ. ಶಿವಣ್ಣ ಮಚ್ಚು ಹಿಡಿದು ನೆತ್ತರು ಹರಿಸಲಿದ್ದಾರೆ. ಜೈಲ್ ಕೂಡ ಬ್ಯಾಕ್​ಡ್ರಾಪ್​ನಲ್ಲಿ ಇರೋದ್ರಿಂದ ಪಕ್ಕಾ ಔಟ್ ಅಂಡ್ ಔಟ್ ಮಾಸ್ ಮಾಸಾಲ ಸಿನಿಮಾ ಅನಿಸಿದೆ.

ಟೀಸರ್​ನಿಂದ ಭರವಸೆ ಮೂಡಿಸಿದ್ದ ವೇದ, ಇದೀಗ ಹಾಡುಗಳಿಂದ ಹಂಗಾಮ ಮಾಡ್ತಿದೆ. ಅರ್ಜುನ್ ಜನ್ಯ ಸಂಗೀತ ಸಂಯೋಜನೆಯಲ್ಲಿ ಆಲ್ಬಂ ಮೂಡಿಬಂದಿದ್ದು, ಮೊದಲ ಸಾಂಗ್ ರಿವೀಲ್ ಆಗಿದೆ. ಗಿಲ್ಲಕ್ಕೋ ಶಿವ ಅನ್ನೋ ಈ ಹಾಡಿಗೆ ಡಾ. ವಿ ನಾಗೇಂದ್ರ ಪ್ರಸಾದ್ ಸಾಹಿತ್ಯವಿದ್ದು, ಹೀರೋ ಇಂಟ್ರಡಕ್ಷನ್ ಖದರ್​ನ ಸಾರುವ ಗೀತೆ ಅನಿಸಿದೆ.

ಟಾಲಿವುಡ್​ನ ಖ್ಯಾತ ಗಾಯಕಿ ಮಂಗ್ಲಿ ಗಾಯನದಿಂದ ಹಾಡಿನ ಗಮ್ಮತ್ತು ಮತ್ತಷ್ಟು ಹೆಚ್ಚಿದೆ. ಸದ್ಯ ರಿಲೀಸ್ ಆಗಿರೋದು ಲಿರಿಕಲ್ ವಿಡಿಯೋ ಆದ್ರೂ, ಶಿವಣ್ಣನ ಖದರ್, ವೇದ ಕ್ಯಾರೆಕ್ಟರ್​ನ ಪವರ್ ಈ ಹಾಡಿನಿಂದ ಹೊರಹೊಮ್ಮಿದೆ. ಗೀತಾ ಶಿವರಾಜ್​ಕುಮಾರ್ ಅವ್ರೇ ವೇದ ಚಿತ್ರವನ್ನು ತಮ್ಮ ಹೋಮ್ ಬ್ಯಾನರ್​ನಲ್ಲಿ ನಿರ್ಮಿಸ್ತಿದ್ದು, ಶಿವಣ್ಣನಿಗೆ ಡೈರೆಕ್ಟರ್ ಹರ್ಷ ಫ್ರೆಶ್ ಲುಕ್ಸ್ ಕೊಟ್ಟಿದ್ದಾರೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES