ಬೆಂಗಳೂರು : ರೌಡಿ ಸೈಲೆಂಟ್ ಸುನೀಲ. ಭೂಗತ ಲೋಕದ ಮೋಸ್ಟ್ ವಾಟೆಂಡ್ ಪಾತಕಿ. ಬೆಂಗಳೂರಿನಲ್ಲಿ ಸೈಲೆಂಟ್ ಸುನೀಲನ ಹವಾ ಇವತ್ತಿಗೂ ಕೂಡ ಇದೆ.. ಈತನ ಸಹಚರರು ಇವತ್ತು ಕೂಡ ಸಿಕ್ಕಾಪಟ್ಟೆ ಆ್ಯಕ್ಟಿವ್ ಆಗಿದ್ದಾರೆ. ಆದರೆ, ಈತ ಮಾತ್ರ ತಾನೂ ಸಾಚಾ.. ರೌಡಿ ಚಟುವಟಿಕೆಗಳಲ್ಲಿ ಭಾಗಿಯಾಗ್ತಿಲ್ಲ.. ರೌಡಿ ಚಟುವಟಿಕೆಗಳನ್ನ ಬಿಟ್ಟು ಸಮಾಜ ಸೇವೆ ಮಾಡ್ತಿದ್ದೀನಿ ಅಂತೆಲ್ಲಾ ಬಿಲ್ಡಪ್ ಕೊಡ್ತಾ ಇದಾನೆ.. ಅದಕ್ಕೆ ಪುಷ್ಟೀಕರಿಸುವಂತೆ ಇದೆ ಇವತ್ತು ಸಿಕ್ಕ ಈ ವಿಡಿಯೋಗಳು.
ಸೈಲೆಂಟ್ ಸುನೀಲ ಸಂಸದ ತೇಜಸ್ವಿ ಸೂರ್ಯ, ಪಿ.ಸಿ.ಮೋಹನ್, ಶಾಸಕ ಉದಯ್ ಗರುಡಾಚಾರ್ ಹಾಗೂ ಎನ್ .ಆರ್.ರಮೇಶ್ ಇದ್ದ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಾನೆ.. ಮೂರು ದಿನಗಳ ಹಿಂದೆ ರೌಡಿಗಳ ಮನೆ ಮೇಲೆ ದಾಳಿ ಮಾಡಿದಾಗ ಪೊಲೀಸರ ಕೈಗೆ ಸಿಗದ ಸುನೀಲ, ನಿನ್ನೆ ಚಾಮರಾಜಪೇಟೆಯಲ್ಲಿ ನಡೆದ ರಕ್ತದಾನ ಶಿಬಿರ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಾನೆ.
ಮಾಧ್ಯಮಗಳಲ್ಲಿ ಸೈಲೆಂಟ್ ಸುನೀಲನ ಸುದ್ದಿ ಪ್ರಸಾರವಾಗಿದ್ದೆ ತಡ, ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಹಾಗೂ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಶರಣಪ್ಪ ಶಾಕ್ ಆಗಿದ್ರು.. ರೌಡಿಗಳ ಮನೆ ಮೇಲೆ ದಾಳಿ ಮಾಡಿದಾಗ ಸಿಗದ ಸುನೀಲ ಮೂರು ದಿನ ಆದ ಮೇಲೆ ಸಿಸಿಬಿ ಕಚೇರಿಯ ಪಕ್ಕದಲ್ಲೇ ಪತ್ತೆ ಆಗ್ತಾನೆ ಅಂದ್ರೆ ಎಂಥವರಿಗೂ ಅನುಮಾನ ಬಂದೇ ಬರುತ್ತೆ.. ಅಷ್ಟೇ ಅಲ್ಲ ರಾಜಕಾರಣಿಗಳ ತರನೇ ಸುನೀಲನಿಗೂ ಪೊಲೀಸರು ಎಸ್ಕಾರ್ಟ್ ಕೊಟ್ಟಿದ್ರು ಅನ್ನೋ ಆರೋಪ ಕೂಡ ಇದೆ.. ಆ ವಿಚಾರಕ್ಕೆ ಸಂಬಂಧಿಸಿದಂತೆ ನಗರ ಪೊಲೀಸ್ ಆಯುಕ್ತರ ರಿಯಾಕ್ಷನ್ ಹೀಗಿತ್ತು.
ಸೈಲೆಂಟ್ ಸುನೀಲನ ಮೇಲೆ ಬರೋಬ್ಬರಿ 17 ಕೇಸ್ಗಳಿವೆ. ಮೊನ್ನೆ ಸಿಸಿಬಿ ದಾಳಿ ನಾಪತ್ತೆಯಾಗಿದ್ದ ಸೈಲೆಂಟ್ ಸುನೀಲ, ಬಹಿರಂಗ ಸಮಾವೇಶದಲ್ಲಿ ಕಾಣಿಸಿಕೊಂಡಿರೋದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಸದ್ಯ ಸೈಲೆಂಟ್ ಸುನೀಲಗಾಗಿ ಸಿಸಿಬಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.. ಈ ಸಲ ಸುನೀಲ ಪೊಲೀಸರ ಕೈಗೆ ಸಿಗ್ತಾನಾ ಕಾದು ನೋಡಬೇಕಾಗಿದೆ.
ಅಶ್ವಥ್.ಎಸ್.ಎನ್, ಕ್ರೈಂ ಬ್ಯೂರೋ, ಪವರ್ ಟಿವಿ